ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಕಾಮಗಾರಿಗೆ ₹ 3. 27 ಕೋಟಿ ಮಂಜೂರು

Last Updated 20 ಜುಲೈ 2017, 7:47 IST
ಅಕ್ಷರ ಗಾತ್ರ

ಕನಕಗಿರಿ: ಚಿಕ್ಕಮಾದಿನಾಳ ಮತ್ತು ಮುಸಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ, ಚರಂಡಿ  ಇತರೆ ಸೇರಿದಂತೆ ಇತರ ಕಾಮಗಾರಿಗಳಿಗೆ  ₹ 3. 27 ಕೋಟಿ   ಬಿಡುಗಡೆಯಾಗಿದೆ ಎಂದು ಶಾಸಕ ಶಿವರಾಜ ತಂಗಡಗಿ ಹೇಳಿದರು.

ಇಲ್ಲಿಗೆ ಸಮೀಪದ ಮುಸಲಾಪುರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಕಟ್ಟಡ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಸತಿ ನಿಲಯದ ಕಟ್ಟಡಕ್ಕೆ ₹ 2 ಕೋಟಿ,  ನಾಗಲಾಪುರ ಗ್ರಾಮದಿಂದ ಬಸರಿಹಾಳ ರಸ್ತೆ ‘ಡಾಂಬರೀಕರಣಕ್ಕೆ ₹ 72 ಲಕ್ಷ, ರಾಂಪುರ ಗ್ರಾಮದ ಪರಿಶಿಷ್ಟ ಪಂಗಡದ ಎಸ್‌ಟಿ ಕಾಲೊನಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ₹ 20 ಲಕ್ಷ, ಜಾಲಿಹುಡ ಗ್ರಾಮದ ಪರಿಶಿಷ್ಟ ಪಂಗಡದ ಎಸ್‌ಟಿ ಕಾಲೊನಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ₹ 15 ಲಕ್ಷ, ಓಬಳಬಂಡಿ ಗ್ರಾಮದ ಪರಿಶಿಷ್ಟ ಜಾತಿ (ಎಸ್‌ಸಿ) ಕಾಲೊನಿಯಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ₹ 20 ಲಕ್ಷ ಮಂಜೂರಾಗಿದೆ.  ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕುಶ್’  ಎಂದು ತಿಳಿಸಿದರು.

ರಾಮದುರ್ಗಾ, ಶಿರಿವಾರ ಹಾಗೂ ಕರಡೋಣ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಎರಡನೇ  ‘ಹಂತದ ಕಾಮಗಾರಿಗೆ ₹ 28 ಕೋಟಿ ಮಂಜೂರಾಗಿದೆ. ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು’ ಎಂದರು.

‘ಮುಸಲಾಪುರ ಗ್ರಾಮದಲ್ಲಿ ಸಿಮೆಂಟ್ ಕಾಂಕ್ರಿಟ್  ರಸ್ತೆ ನಿರ್ಮಾಣಕ್ಕೆ ₹ 40 ಲಕ್ಷ ಬಿಡುಗಡೆ ಮಾಡುವಂತೆ ಕೋರಲಾಗಿದ್ದು  ಅನುದಾನ ಬಿಡುಗಡೆಯಾದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮುಸಲಾಪುರ ಗ್ರಾಮದ ತೇರಿನ ಮನೆಗೆ  ಶೆಲ್ಟರ್ ಅಳವಡಿಸಲು ವೈಯಕ್ತಿಕವಾಗಿ ₹ 80 ಸಾವಿರ  ನೀಡಲಾಗುವುದು’ ಎಂದು ಹೇಳಿದರು.

ನಾಗಲಾಪುರ ಗ್ರಾಮದ ಅಂಗವಿಕಲೆ ಹನುಮವ್ವ ಅವರಿಗೆ ಉಚಿತ ನಿವೇಶನ ನೀಡಿ ಆಶ್ರಯ ಮನೆ ಹಂಚಿಕೆ ಮಾಡುವಂತೆ ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ ಪೂಜಾರ ಅವರಿಗೆ ಸೂಚಿಸಿದರು. ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ,  ವಕೀಲ ವಿರೂಪಾಕ್ಷಪ್ಪ  ಬೊಮ್ಮನಾಳ,  ಶಶಿಧರ ಕೊಳಜಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮವ್ವ ನೀರ್ಲೂಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ  ಬಸಂತಗೌಡ, ಉಪಾಧ್ಯಕ್ಷ ಗವಿಸಿದ್ದಪ್ಪ , ಸದಸ್ಯ ಮಲ್ಲಿಕಾರ್ಜುನಗೌಡ,  ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಪ್ಪವ್ವ  ಮುಸಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಸೇನಮ್ಮ ಈಳಿಗೇರ, ಉಪಾಧ್ಯಕ್ಷರಾದ  ದ್ಯಾಮವ್ವ, ಹನುಮೇಶ ರಾಠೋಡ್, ಸದಸ್ಯರಾದ ಶ್ರೀನಿವಾಸ ನಾಯಕ, ವಿಶಾಲಾಕ್ಷಮ್ಮ, ಶೇಖರಪ್ಪ , ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೆಡ್ಡಿಶ್ರೀನಿವಾಸ, ಪ್ರಮುಖರಾದ ಸಂಗಪ್ಪ ಸಜ್ಜನ್, ಯಂಕನಗೌಡ ಪಾಟೀಲ, ಬಸಪ್ಪ ನಾಯಕ, ರಾಜಾಸಾಬ ನಂದಾಪುರ, ನಾಗಪ್ಪ ಹುಗ್ಗಿ, ಪಾಲಾಕ್ಷಗೌಡ ಗಂಗನಗೌಡ, ರಾಜಾಹುಸೇನ ಕಾತರಕಿ, ಅಧಿಕಾರಿಗಳಾದ ರಾಘವೇಂದ್ರ ಕುಲಕರ್ಣಿ, ನಯೀಮ, ನಾಗೇಶ ಪೂಜಾರ, ಶರಣೆಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT