ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌ ವಿಶ್ವಕಪ್‌: ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೆ ಮಳೆ ಅಡ್ಡಿ

Last Updated 20 ಜುಲೈ 2017, 10:00 IST
ಅಕ್ಷರ ಗಾತ್ರ

ಡರ್ಬಿ, ಲಂಡನ್‌: ಇಲ್ಲಿ ಆಯೋಜನೆ ಗೊಂಡಿರುವ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯ ಭಾರತ ಆಸ್ಟ್ರೇಲಿಯಾ ನಡುವಣ ಎರಡನೇ ಸೆಮಿಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದೆ.

ಟಾಸ್‌ಗೂ ಮುನ್ನವೇ ಮಳೆ ಬಂದಿದ್ದು, ಪಂದ್ಯ ತಡವಾಗಿ ಆರಂಭವಾಗಲಿದೆ.

ಒಟ್ಟು ಆರು ಬಾರಿ ವಿಶ್ವಕಪ್‌ ಗೆದ್ದಿರುವ ಆಸ್ಟ್ರೇಲಿಯಾ ಮತ್ತೊಮ್ಮೆ ಫೈನಲ್‌ ಪ್ರವೇಶಿಸುವ ಉಮೇದಿನಲ್ಲಿದೆ. ಭಾರತ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.

ಈ ಪಂದ್ಯದಲ್ಲಿ ಗೆಲ್ಲುವ ತಂಡ ಜುಲೈ 23ರಂದು ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ, ಈಗಾಗಲೇ ಅಂತಿಮ ಹಂತ ತಲುಪಿರುವ ಇಂಗ್ಲೆಂಡ್‌ ಎದುರು ಪ್ರಶಸ್ತಿಗಾಗಿ ಸೆಣಸಲಿದೆ.

**

ತಂಡಗಳು

ಭಾರತ: ಮಿಥಾಲಿ ರಾಜ್‌ (ನಾಯಕಿ), ಏಕ್ತಾ ಬಿಷ್ಠ್‌, ರಾಜೇಶ್ವರಿ ಗಾಯಕವಾಡ್‌, ಜೂಲನ್ ಗೋಸ್ವಾಮಿ, ಮಾನಸಿ ಜೋಶಿ, ಹರ್ಮನ್‌ಪ್ರೀತ್ ಕೌರ್‌, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನ, ಮೋನಾ ಮೇಶ್ರಮ್‌, ಶಿಖಾ ಪಾಂಡೆ, ಪೂನಮ್‌ ಯಾದವ್‌, ನುಶತ್‌ ಪರ್ವೀನ್‌, ಪೂನಮ್ ರಾವತ್‌, ದೀಪ್ತಿ ಶರ್ಮಾ, ಸುಶ್ಮಾ ವರ್ಮಾ (ವಿಕೆಟ್‌ ಕೀಪರ್‌).

ಆಸ್ಟ್ರೇಲಿಯಾ: ಮೆಗ್‌ಲ್ಯಾನಿಂಗ್‌ (ನಾಯಕಿ), ಸಾರಾ ಅಲೆ, ಕ್ರಿಸ್ಟನ್ ಬೀಮ್ಸ್‌, ಅಲೆಕ್ಸ್‌ ಬ್ಲ್ಯಾಕ್‌ವೆಲ್‌, ನಿಕೋಲ್‌ ಬೋಲ್ಟನ್‌, ಆಶ್ಲಿ ಗಾರ್ಡನರ್‌, ರಚೆಲ್ ಹೇನ್ಸ್‌, ಅಲಿಸಾ ಹೀಲಿ (ವಿಕೆಟ್ ಕೀಪರ್‌), ಜೆಸ್ ಜೊನಾಸೆನ್‌, ಬೇಥ್‌ ಮೂನಿ, ಎಲಿಸ್ ಪೆರಿ, ಮೇಗನ್‌ ಶ್ರುಟ್‌, ಬೆಲಿಂದಾ ವಕಾರೆವಾ, ಎಲಿಸ್ ವಿಲಾನಿ, ಅಮಂಡಾ ಜೇಡ್‌ ವೆಲಿಂಗ್ಟನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT