ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಬೆಳ್ಳಕ್ಕಿಗಳ ಕಲರವ...

ನಾಪೋಕ್ಲು ಪಟ್ಟಣದಲ್ಲಿ ವಲಸೆ ಹಕ್ಕಿ ಪ್ರಪಂಚ
Last Updated 20 ಜುಲೈ 2017, 9:51 IST
ಅಕ್ಷರ ಗಾತ್ರ

ನಾಪೋಕ್ಲು: ಮಳೆಗಾಲ ಬಂದರೆ ಸಾಕು ಪಟ್ಟಣದಲ್ಲಿ ಬೆಳ್ಳಕ್ಕಿ ಪ್ರಪಂಚ ತೆರೆದುಕೊಳ್ಳುತ್ತದೆ. ಮೇ ಅಂತ್ಯದಿಂದ ಅಕ್ಟೋಬರ್ ತಿಂಗಳವರೆಗೆ ಪಟ್ಟಣದಲ್ಲಿ ಇವುಗಳದೇ ಕಲರವ. ನೂರಾರು ಬೆಳ್ಳಕ್ಕಿ ಗಳು ನಾಪೋಕ್ಲಿನ ಅತಿಥಿಗಳಾಗಿವೆ.

ಬಿಳಿ ಬಣ್ಣದ ನೂರಾರು ಹಕ್ಕಿಗಳು ಹಚ್ಚ ಹಸುರಿನ ಮರಗಳಲ್ಲಿ ಗೂಡುಕಟ್ಟಿ ಮೊಟ್ಟೆ ಇಟ್ಟು ವಂಶಾಭಿವೃದ್ಧಿ ಸಂಭ್ರಮ ದಲ್ಲಿ ನಿರತವಾಗಿವೆ. ಎಲ್ಲಿಂದಲೋ ವಲಸೆ ಬರುವ ಇವು ಮೂರು ತಿಂಗಳು ಸಂತಾನೋತ್ಪತ್ತಿ ಮಾಡಿ ಮತ್ತೆ ಮಾಯವಾಗುತ್ತವೆ. ಅಕ್ಕಪಕ್ಕದ ಗದ್ದೆ ಗಳಲ್ಲಿ ಆಹಾರ ಅರಸುತ್ತಾ ಹಾರಾಡುವ ಶ್ವೇತವರ್ಣದ ಹಕ್ಕಿಗಳಿಗೆ ಇಲ್ಲಿನ ಹಚ್ಚಹಸುರಿನ ಮರಗಳು ವಂಶಾಭಿವೃದ್ಧಿ ತಾಣವಾಗಿದೆ.

ಆಸುಪಾಸಿನ ತೋಟ– ಗದ್ದೆಗಳಲ್ಲಿ ದೊರಕುವ ಸಣ್ಣ–ಪುಟ್ಟ ಕಡ್ಡಿ ತಂದು ಮರಗಳಲ್ಲಿ ಗೂಡುಕಟ್ಟಲು ಪ್ರಾರಂಭಿಸು ತ್ತವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಮೊಟ್ಟೆ ಇಟ್ಟು, ಮಳೆ ನಡುವೆಯೇ ಕಾವು ಕೊಟ್ಟು ಮರಿ ಮಾಡಿ ಅವುಗಳ ಪಾಲನೆಯಲ್ಲಿ ತೊಡಗಿಕೊಳ್ಳುತ್ತವೆ.

ಬೆಳ್ಳಕ್ಕಿ ನಡುವೆ ಕೃಷ್ಣವರ್ಣದ ನೀರು ಕಾಗೆಗಳೂ ಇಲ್ಲಿವೆ. ಒಂದೇ ಮರದಲ್ಲಿ ಎರಡು ಪಕ್ಷಗಳು ಗೂಡು ಕಟ್ಟಿ ಸೌಹಾರ್ದ ಸಂಬಂಧ ಬೆಸೆದುಕೊಂಡು ಸಂತಾ ನೋತ್ಪತ್ತಿಯಲ್ಲಿ ತೊಡಗಿಕೊ ಳ್ಳುತ್ತಿವೆ. ನೀರು ಕಾಗೆಗಳು ಇಲ್ಲಿನ ಆಸುಪಾಸಿನ ಕೆರೆಗಳಲ್ಲಿ ಸಿಗುವ ಮೀನು ಹಿಡಿದು ಮರಿಗಳಿಗೆ ನೀಡುತ್ತವೆ. ಪಟ್ಟಣದ ಅಡಿಕೆ ಮರಗಳು ಬೆಳ್ಳಕ್ಕಿಗಳ ಆಶ್ರಯ ತಾಣವಾದರೂ ಗದ್ದೆ ಬಯಲಿನ ಕಾಫಿ ತೋಟಗಳ ವಿವಿಧ ಮರಗಳಲ್ಲೂ ಅವು ಕಾಣಸಿಗುತ್ತವೆ.

ಕೆಲ ವರ್ಷಗಳ ಹಿಂದೆ ಪಟ್ಟಣ ಸಮೀಪದ ಕಾವೇರಿ ನದಿ ತೀರದ ಚೆರಿಯಪರಂಬು ನೆಡುತೋಪು ಬೆಳ್ಳಕ್ಕಿ ಸಂತಾನೋತ್ಪತ್ತಿಗೆ ಪ್ರಸಿದ್ಧಿಯಾಗಿತ್ತು. ಇವುಗಳೊಂದಿಗೆ ಪಟ್ಟಣ ವ್ಯಾಪ್ತಿಯ ಅಡಿಕೆ ಮರಗಳೂ ಅವುಗಳ ವಾಸಸ್ಥಾನ ವಾಗಿದ್ದವು. ಆದರೆ, ಅರಣ್ಯ ಇಲಾಖೆ ನೆಡುತೋಪಿನ ಮರಗಳಿಗೆ ಕೊಡಲಿ ಹಾಕಿದ ಬಳಿಕ, ಪಟ್ಟಣ ವ್ಯಾಪ್ತಿಯ ಮರಗಳು ಬೆಳ್ಳಕ್ಕಿಗಳಿಗೆ ಆಶ್ರಯ ನೀಡಿವೆ.

ಗದ್ದೆಗಳಲ್ಲಿ ಹುಳು ಹಿಡಿದು ತಿನ್ನುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ನಾಟಿ ಮಾಡಿರುವ ಹಸಿರು ಗದ್ದೆಗಳ ನಡುವೆ ಕತ್ತೆತ್ತಿ ಅತ್ತಿತ್ತ ನೋಡುತ್ತಾ ಹೊಂಚು ಹಾಕಿ ಹುಳ ಹಿಡಿಯುವ ಇವು ಗುಂಪಾಗಿ ವಾಸಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT