ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂಸ್ಟೇ ಏಜೆಂಟ್ ದಂಧೆಗೆ ಕಡಿವಾಣ

ಸಾರ್ವಜನಿಕರೊಂದಿಗೆ ಸಂವಾದದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ಭರವಸೆ
Last Updated 20 ಜುಲೈ 2017, 10:11 IST
ಅಕ್ಷರ ಗಾತ್ರ

ಮಡಿಕೇರಿ: ‘ಹೋಂಸ್ಟೇ ಮಧ್ಯವರ್ತಿ ಗಳು ಪ್ರವಾಸಿಗರ ವಾಹನ ನಿಲ್ಲಿಸಿ ಪ್ರವಾಸಿಗರಿಗೆ ತೊಂದರೆ ನೀಡುತ್ತಿರು ವುದು ಗಮನಕ್ಕೆ ಬಂದಿದೆ. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಎಚ್ಚರಿಕೆ ನೀಡಿದರು.

ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಸಾರ್ವಜ ನಿಕರೊಂದಿಗಿನ ಸಂವಾದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರವಾಸೋದ್ಯಮಕ್ಕೆ ಕಳಂಕ ತರುವ ಚಟುವಟಿಕೆಗಳು ಕೆಲವರಿಂದ ನಡೆಯುತ್ತಿದೆ. ಪ್ರವಾಸಿಗರನ್ನು ಅಡ್ಡಗಟ್ಟಿ ದಬ್ಬಾಳಿಕೆ ನಡೆಸುವಲ್ಲಿ ಹೋಂಸ್ಟೇ ಏಜೆಂಟ್‌ಗಳು ಮುಂದಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.

‘ಅನಧಿಕೃತ ಹೋಂಸ್ಟೇಗಳು ನಡೆಸುವುದು ಹಾಗೂ ವ್ಯಾಪಾರೀಕರಣ ಕ್ಕಾಗಿ ಪ್ರವಾಸಿಗರಿಂದ ಹಣ ವಸೂಲಿ ಹಾಗೂ ಅನೈತಿಕ ಚಟುವಟಿಕೆಗಳ ಬಗ್ಗೆ ಇಲಾಖೆಗೆ ಮಾಹಿತಿ ಕೊಟ್ಟಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ  ಕೈಗೊಳ್ಳಲಾ ಗುವುದು’ ಎಂದು ತಿಳಿಸಿದರು.

ಪಾರ್ಕಿಂಗ್ ದಂಧೆ: ನಗರದ ರಾಜಾಸೀಟ್ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿದ ಎಲ್ಲಾ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡು ವುದು ಸರಿಯಲ್ಲ, ಪ್ರವಾಸೋದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

400 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ:  ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧ ಪ್ರಕರಣ ತಡೆಯಲು ಜಿಲ್ಲೆಯಾದ್ಯಂತ ಸುಮಾರು 400 ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. 800 ಬ್ಯಾರಿಕೇಡ್‌ ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು.

ಲಯನ್ಸ್ ಕಾರ್ಯದರ್ಶಿ ಮಧುಕರ ಶೇಟ್, ನಿರ್ದೇಶಕ ನವೀನ್ ಅಂಬೆಕಲ್, ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ರೊಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ., ಕಾರ್ಯದರ್ಶಿ ಪಿ.ಎಂ.ಸಂದೀಪ್, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಮದನ್ ಸೋಮಣ್ಣ ಸೇರಿದಂತೆ ಇತರರು ಹಾಜರಿದ್ದರು.

**

ಎಸ್‌ಪಿ ವಾಹನಕ್ಕೂ ತಡೆ!

ಮಡಿಕೇರಿ: ‘ಒಂದು ರಾತ್ರಿ 12ರ ಸುಮಾರಿಗೆ ನಗರದ ಕಾರ್ಯಪ್ಪ ವೃತ್ತದ ಬಳಿ ನಾನು ಹಾಗೂ ಸ್ನೇಹಿತ ಖಾಸಗಿ ಕಾರಿನಲ್ಲಿ ಬರುತ್ತಿರುವಾಗ ಮಧ್ಯವರ್ತಿಯೊಬ್ಬ ವಾಹನವನ್ನು ತಡೆದು ಅಬ್ಬಿ ಜಲಪಾತದ ಬಳಿಯಲ್ಲಿರುವ ಹೋಂಸ್ಟೇಗೆ ಆಹ್ವಾನಿಸಿದ.

ಆಗ ನಾನು ಕೊಡಗು ಎಸ್‌ಪಿ ಎಂದು ತಿಳಿಸಿದಾಗ ಕ್ಷಣಾರ್ಧದಲ್ಲಿ ಮಾಯವಾದ. ಪ್ರವಾಸಿಗರಿಗೂ ಇಂತಹ ಕಿರಿಕಿರಿ ಆಗುತ್ತಿದೆ’ ಎಂದು ರಾಜೇಂದ್ರ ಪ್ರಸಾದ್‌ ಬೇಸರ ವ್ಯಕ್ತಪಡಿಸಿದರು

**

ವೆಬ್‌ಸೈಟ್ ಮೂಲಕ ನಡೆಯುತ್ತಿರುವ ಹನಿಟ್ರ್ಯಾಪ್‌ ದಂಧೆಗೆ ಕಡಿವಾಣ ಹಾಕಲಾಗಿದೆ
–ಪಿ.ರಾಜೇಂದ್ರಪ್ರಸಾದ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT