ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಜ್ವಲ ಯೋಜನೆ ಬಡವರಿಗೆ ವರದಾನ’

Last Updated 20 ಜುಲೈ 2017, 10:25 IST
ಅಕ್ಷರ ಗಾತ್ರ

ತಿಳವಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ಪರವಾಗಿ ರೂಪಿಸಿರುವ ಅತ್ಯಂತ ಮಹತ್ವದ ಯೋಜನೆಯೇ ಉಜ್ವಲ. ಬಡವರು ಇದರ ಸದುಪಯೋಗಪಡಿಸಿ
ಕೊಳ್ಳಬೇಕು’ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು.

ಸಮೀಪದ ಉಪ್ಪುಣಸಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ವಿಸ್ತಾರಕರ ಬೂತ್ ಮಟ್ಟದ ಸಭೆ ಹಾಗೂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಡತನ ಅನುಭವಿಸಿದ್ದ ಮೋದಿ ಅವರು, ಅವರ ಕಷ್ಟವನ್ನು ಅರಿತುಕೊಂಡು ಈ ಯೋಜನೆಯನ್ನು ಜಾರಿಗೆ ತಂದರು. ಮುಂದಿನ 5 ವರ್ಷದಲ್ಲಿ ದೇಶದ 5 ಕೋಟಿ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ  ನೀಡುವ ಯೋಜನೆ ಇದಾಗಿದೆ. ಇದುವರೆಗೆ ಸುಮಾರು 2 ಕೋಟಿಗೂ ಅಧಿಕ ಜನರಿಗೆ ಈ ಯೋಜನೆಯ ಫಲ ಲಭಿಸಿದೆ’ ಎಂದು ಮಾಹಿತಿ ನೀಡಿದರು.

ಬಿಜೆಪಿ ತಾಲ್ಲೂಕಾ ಅಧ್ಯಕ್ಷರಾದ ನಿಂಗಪ್ಪ ಗೊಬ್ಬೆರ ಮಾತನಾಡಿ, ‘ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕೇಂದ್ರದ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಬರುವ ಆಹಾರ ಪದಾರ್ಥಗಳನ್ನೇ ಅನ್ನಭಾಗ್ಯದ ಹೆಸರಿನಲ್ಲಿ ಹಂಚಿ, ಬಿಟ್ಟಿ ಪ್ರಚಾರ ಪಡೆಯುತ್ತಿದೆ’ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.

ಗ್ರಾಮ ಪಂಚಾಯತ ಅಧ್ಯಕ್ಷ ರತ್ನಮ್ಮ ಪಾಟೀಲ್, ತಾಲ್ಲೂಕು ಪಂಚಾಯತ ಸದಸ್ಯರಾದ ಅಜ್ಜಪ್ಪ ಶಿರೀಹಳ್ಳಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಕಲ್ಯಾಣಕುಮಾರ ಶೇಟ್ಟರ, ಶಿವಲಿಂಗಪ್ಪ ತಲ್ಲೂರ, ಎಸ್.ವಿ. ಪಾಟೀಲ್, ಎಸ್.ವಿ. ಕೊಪ್ಪದ್, ವಿ.ವಿ.ಮಲ್ಲಿಗಾರ, ಮೌಲಾಸಾಬ್ ನಾಗನೂರ, ಆರ್.ಸಿ. ಹಿರೇಮಠ, ದೇವೆಂದ್ರಪ್ಪ ರಾಮಣ್ಣನವರ, ಚನ್ನಪ್ಪ ಕಡಪ್ಪನವರ, ವೈ.ಜಿ. ದೇವಗಿರಿ, ವಿರೇಶ ಕಡಪ್ಪನವರ, ಮಾರುತಿ ಬಸಪ್ಪನವರ, ಮಲ್ಲನಗೌಡ ಪಾಟೀಲ್, ಗುಡ್ಡಪ್ಪ ಹಾದಿಮನಿ, ಶೇಖವ್ವ ಹೆಬ್ಬಾಳ ಹಾಗೂ ನೀಲಾ ಹರಿಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT