ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಧ್ವಜ:  ರಾಷ್ಟ್ರಗೀತೆ ಇದ್ದಾಗಲೂ ನಾಡಗೀತೆ ಇಲ್ಲವೇ? – ಮುಖ್ಯಮಂತ್ರಿ ಸಿದ್ದರಾಮಯ್ಯ

Last Updated 20 ಜುಲೈ 2017, 10:28 IST
ಅಕ್ಷರ ಗಾತ್ರ

ಧಾರವಾಡ: ರಾಜ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರಗೀತೆ ಇದ್ದಾಗಲೂ ನಾಡಗೀತೆ ಇಲ್ಲವೇ? ಹಾಗೆಯೇ ಪ್ರತ್ಯೇಕ ಧ್ವಜ ಬೇಕು ಅಂತಾ ಇದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಿಳಿಸಿದರು.

ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ವಿಚಾರದಲ್ಲಿ ಯಡಿಯೂರಪ್ಪ  ರಾಜಕೀಯ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಸಂವಿಧಾನ ಓದಿಕೊಳ್ಳಲ್ಲಿ ಎಂದರು.

ಸಾಲಮನ್ನಾ:  ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲು ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎನ್ನುತ್ತಿದೆ ಆದರೆ ಉದ್ಯಮಿಗಳ ಸಾಲ ಮನ್ನಾ ಮಾಡುವುದಕ್ಕೆ ಈ ಪ್ರಶ್ನೆ ಬರಲ್ಲ ಎಂದರು.

ಈ ಸರ್ಕಾರ ರೈತ ಪರ ಸರ್ಕಾರ ಅಲ್ಲ , ನೀವು ಸಾಲ ಮನ್ನಾ ಮಾಡಿ, ನಾವೂ ಸಾಲ ಮನ್ನಾ ಮಾಡಿಸ್ತೇವೆ ಅಂದವರು ಈಗ ಸುಮ್ಮನಿದ್ದಾರೆ ಎಂದು  ರಾಜ್ಯ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದರು.

ಮುಖ್ಯಮಂತ್ರಿಗಳು ಧಾರವಾಡದಿಂದ ಹುಬ್ಬಳ್ಳಿಗೆ ಬಸ್ಸಿನಲ್ಲಿ ಪ್ರಯಾಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT