ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ, ಬೆಳಗಾವಿಯಲ್ಲಿ ಧಾರಾಕಾರ ಮಳೆ

ಜಿಲ್ಲೆಯ ವಿವಿಧೆಡೆ ಮುಂದುವರಿದ ಜಿಟಿಜಿಟಿ ಮಳೆ; ಸಾಲಹಳ್ಳಿಯಲ್ಲಿ ಮನೆ ಚಾವಣಿ ಕುಸಿದು ಯುವಕ ಸಾವು
Last Updated 20 ಜುಲೈ 2017, 11:52 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನ ಕಣಕುಂಬಿಯಲ್ಲಿ ಬುಧವಾರ ದಾಖಲೆಯ 22.5 ಸೆಂ.ಮೀ ಮಳೆಯಾಗಿದೆ.

ಪಶ್ಚಿಮ ಭಾಗದ ಅರಣ್ಯ ಪ್ರದೇಶದಲ್ಲಿ ಹಗಲು ರಾತ್ರಿಯೆನ್ನದೇ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಡೆ ನೀರಿನ ಹರಿವು ಹೆಚ್ಚ ತೊಡಗಿದ್ದು, ಭೀಮಗಡ ಅರಣ್ಯ ಪ್ರದೇಶ ವ್ಯಾಪ್ತಿಯ ಹೆಮ್ಮಡಗಾ ವಲ ಯದ ಗವ್ವಾಳಿ, ಕೊಂಗಳಾ, ದೇಗಾಂವ, ಕೃಷ್ಣಾ ಪುರ, ತಳೇವಾಡಿ, ಮೆಂಡಿಲ್ ಹಾಗೂ ಕಣಕುಂಬಿ ವಲಯದ ಆಮ ಗಾಂವ, ಚಾಪೋಲಿ, ಜಾಮಗಾಂವ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮೇಲೆ ನೀರು ಹರಿಯುತ್ತಿದೆ.

ಕಳೆದ ನಾಲ್ಕಾರು ದಿನಗಳಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಮಂಗಳವಾರ ರಾತ್ರಿ ತಾಲ್ಲೂಕಿನ ಕಣಕುಂಬಿ ಚಿಗುಳೆ ಮಾರ್ಗ ಮಧ್ಯದ ಸೇತುವೆ ಮಳೆಯ ರಭಸಕ್ಕೆ ಕೊಚ್ಚಿ ಹೋಗಿದೆ.

ಸೇತುವೆ ಕೊಚ್ಚಿ ಹೋದ ಪರಿಣಾಮ ತಾಲ್ಲೂಕಿನ ಚಿಗುಳೆ ಮತ್ತು ಹಂದಿಕೊಪ್ಪ ಗೌಳಿವಾಡಾ ಗ್ರಾಮಗಳು ಮುಖ್ಯವಾಹಿನಿ ಯಿಂದ ಸಂಪರ್ಕ ಕಡಿದುಕೊಂಡು ನಡು ಗಡ್ಡೆಗಳಾಗಿವೆ. ತಾಲ್ಲೂಕಿನ ಬೀಡಿ ಗ್ರಾಮದ ಬಳಿ ಬೀಡಿ ಗೋಲಿಹಳ್ಳಿ ಗ್ರಾಮಗಳ ನಡುವಿನ ನಿರ್ಮಾಣ ಹಂತದ ಸೇತುವೆ ಮಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.

ಬೀಡಿ ಮೂಲಕ ಹರಿಯುವ ತಟ್ಟೀ ಹಳ್ಳಕ್ಕೆ ಇತ್ತೀಚೆಗಷ್ಟೇ ₹ 12 ಲಕ್ಷ ವೆಚ್ಚ ದಲ್ಲಿ ಸೇತುವೆ ಕಂ ಬಾಂದಾರ  ನಿರ್ಮಿ ಸುವ ಕೆಲಸ ನಡೆದಿತ್ತು. ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಮಂಗಳ ವಾರದಿಂದ ಸುರಿದ ಭಾರೀ ಮಳೆಗೆ ಬುಧವಾರ ಮಧ್ಯಾಹ್ನದ ವೇಳೆಗೆ ತಟ್ಟೀಹಳ್ಳದಲ್ಲಿ ಪ್ರವಾಹವೇರ್ಪಟ್ಟು ಸೇತುವೆ ಕೊಚ್ಚಿ ಹೋದ ಪರಿಣಾಮ ಅಕ್ಕಪಕ್ಕದ ಗದ್ದೆಗಳಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಟನಾ ಸ್ಥಳಕ್ಕೆ ಖಾನಾಪುರ ತಹ ಶೀಲ್ದಾರ್ ಶಿವಾ ನಂದ ಉಳ್ಳೇಗಡ್ಡಿ ಭೇಟಿ ನೀಡಿ ಪರಿ ಶೀಲನೆ ನಡೆಸಿದ್ದಾರೆ.

ಸತತಧಾರೆ ಯಿಂದಾಗಿ ತಾಲ್ಲೂಕಿನ ಜಾಂಬೋಟಿ ಬಳಿಯ ಹಬ್ಬನಹಟ್ಟಿಯ ಆಂಜನೇಯ ದೇವಾಲಯ ಮಲಪ್ರಭಾ ನದಿಯ ಪ್ರವಾಹದಿಂದ ಸಂಪೂರ್ಣ ವಾಗಿ ನೀರಿನಲ್ಲಿ ಮುಳುಗಿದೆ. ಎಡೆ ಬಿಡದೇ ಸುರಿಯುತ್ತಿರುವ ಮಳೆ ಯಿಂದಾಗಿ ಪಟ್ಟಣದ ಮೂಲಕ ಹರಿ ಯುವ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ತಾಲ್ಲೂಕಿನ ಅರಣ್ಯ ಪ್ರದೇಶ ದಲ್ಲಿ ಹರಿಯುವ ಪಾಂಡರಿ ಮತ್ತು ಮಹಾದಾಯಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ತಾಲ್ಲೂಕಿನ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಮಂಗಳ ವಾರ ರಾತ್ರಿಯಿಡೀ ಮಳೆಯಾಗಿದ್ದು, ಬುಧ ವಾರವೂ ಮಳೆ ಮುಂದುವರೆದಿದೆ.

ಬೋಟಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತ ಗೊಂಡಿದೆ. ಅಲ್ಲಲ್ಲಿ ಮರಗಳು ಧರೆಗು ರುಳಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. 

ಬುಧವಾರದ ಮಾಹಿತಿಯಂತೆ ಅಸೋಗಾದಲ್ಲಿ 66ಮೀಮೀ, ಬೀಡಿ ಯಲ್ಲಿ 69 ಮೀಮೀ, ಕಕ್ಕೇರಿಯಲ್ಲಿ 70 ಮೀಮೀ, ಗುಂಜಿಯಲ್ಲಿ 150 ಮೀಮೀ, ಲೋಂಡಾ ರೈಲು ನಿಲ್ದಾಣದಲ್ಲಿ 113 ಮೀಮೀ, ಲೋಂಡಾ ಪಿಡಬ್ಲ್ಯೂಡಿಯಲ್ಲಿ 115 ಮೀಮೀ, ನಾಗರಗಾಳಿಯಲ್ಲಿ 111 ಮೀಮೀ, ಜಾಂಬೋಟಿಯಲ್ಲಿ 94 ಮೀಮೀ ಮತ್ತು ಖಾನಾಪುರ ಪಟ್ಟಣ ದಲ್ಲಿ 87 ಮೀಮೀ ಮಳೆಯಾದ ವರದಿಯಾಗಿದೆ.

ವ್ಯಾಹತವಾಗಿ ಸುರಿಯುತ್ತಿ ರುವ ಮಳೆಯ ಕಾರಣ ತಾಲ್ಲೂಕು ಆಡಳಿತ ಆಯಕಟ್ಟಿನ ಸ್ಥಳಗಳಲ್ಲಿ ಸೂಕ್ತ ಕಟ್ಟೆಚ್ಚರ ವಹಿಸಿದೆ. ಮಳೆಯಿಂದಾಗಿ ಇದುವರೆಗೂ ಯಾವುದೇ ಆಸ್ತಿ-ಪಾಸ್ತಿ ಹಾಗೂ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ತಹಶೀಲ್ದಾರ್‌ ಕಚೇರಿಯ ಮೂಲಗಳು ಸ್ಪಷ್ಟಪಡಿಸಿವೆ.

**

ಜಿಲ್ಲೆಯಲ್ಲಿ ಮುಂದುವರಿದ ಮಳೆ

ಬೆಳಗಾವಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆ ಬುಧವಾರವೂ ಮುಂದುವರಿಯಿತು. ಖಾನಾಪುರ ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ ಮಳೆ ರಭಸವಾಗಿ ಸುರಿದಿದ್ದರೆ, ಇನ್ನುಳಿದ ಪ್ರದೇಶ ಗಳಲ್ಲಿ ಜಿಟಿಜಿಟಿ ಮಳೆಯಾಗಿದೆ.

ಬೆಳಗಾವಿಯ ತಗ್ಗು ಪ್ರದೇಶ ಗಳಲ್ಲಿರುವ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಶಾಸ್ತ್ರಿ ನಗರ,  ಗೂಡ್‌ಶೆಡ್‌ ರಸ್ತೆ ಹಾಗೂ ಜಕ್ಕೂರು ಹೊಂಡದ ಬಳಿಯ ಪ್ರದೇಶಗಳಲ್ಲಿ ಅಲ್ಲಲ್ಲಿ ಜಲಾವೃತವಾಗಿದೆ. ಮಳೆಯು ದಿನವಿಡೀ ಮುಂದುವರಿಯಿತು. ಆಗಸವು ಮೋಡಗಳಿಂದ ಆವೃತ್ತ ವಾಗಿದ್ದು, ಸೂರ್ಯನ ದರ್ಶನ ವಾಗಲಿಲ್ಲ.
ರಾಯಬಾಗ ತಾಲ್ಲೂಕಿನಲ್ಲಿ 43 ಮನೆಗಳು ಹಾಗೂ ರಾಮದುರ್ಗ ತಾಲ್ಲೂಕಿನಲ್ಲಿ 1 ಮನೆಗೆ ಹಾನಿ ಉಂಟಾಗಿದೆ.

ಖಾನಾಪುರದಲ್ಲಿ ತಾಲ್ಲೂಕಿನ ಕಣಕುಂಬಿ. ಮಾವುಲಿ ದೇವಸ್ಥಾನದ ಎದುರಿನ ರಸ್ತೆ ಕೊಚ್ಚಿಹೋಗಿದೆ. ಕಣಕುಂಬಿ-– ಚಿಗಳೆ, ಕಣಕುಂಬಿ– -ಹಂದಿಗೊಪ್ಪ ನಡುವಿನ ರಸ್ತೆ ಸಂಚಾರ ಸ್ಥಗಿತವಾಗಿದೆ.

ನೆರೆಯ ಮಹಾರಾಷ್ಟ್ರದ ಲ್ಲಿಯೂ ಮಳೆ ರಭಸವಾಗಿರುವ ಸುರಿದಿದ್ದು, ರಾಜಾಪುರ ಬ್ಯಾರೇಜ್‌ ಮೂಲಕ 62,000 ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಈ ನೀರು ಕೃಷ್ಣಾ ನದಿಗೆ ಸೇರಿಕೊಂಡಿದ್ದು, ನದಿಯ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

28.6 ಸೆಂ.ಮೀ ಮಳೆ:  ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳಲ್ಲಿ 28.6 ಸೆಂ.ಮೀ ಮಳೆ ಯಾಗಿದೆ. ಅತಿ ಹೆಚ್ಚು ಖಾನಾಪುರ ದಲ್ಲಿ 8.6 ಸೆಂ.ಮೀ, ಬೆಳಗಾವಿಯಲ್ಲಿ 6.9 ಸೆಂ.ಮೀ ಹಾಗೂ ಬೈಲ ಹೊಂಗಲದಲ್ಲಿ 3.1 ಸೆಂ.ಮೀ ಮಳೆ ಯಾಗಿದೆ. ಇನ್ನುಳಿದಂತೆ ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ರಾಯಬಾಗ, ಹಾರೂಗೇರಿ, ಘಟಪ್ರಭಾ, ಎಂ.ಕೆ. ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಿಟಿಜಿಟಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT