ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಋತುಸ್ರಾವದ ಮೊದಲ ದಿನ ರಜೆ’ ನಿಯಮ ಜಾರಿಗೆ ತಂದ ಮಲಯಾಳಂ ಚಾನೆಲ್

ಪತ್ರಿಕೋದ್ಯಮದಲ್ಲಿ ಮಾತೃಭೂಮಿ ಚಾನೆಲ್‌ನ ಹೊಸ ಹೆಜ್ಜೆ
Last Updated 20 ಜುಲೈ 2017, 12:14 IST
ಅಕ್ಷರ ಗಾತ್ರ

ನವದೆಹಲಿ: ಕೇರಳ ಮೂಲದ ಮಲಯಾಳಂ ಭಾಷೆಯ ಮಾತೃಭೂಮಿ ದೃಶ್ಯ ಮಾಧ್ಯಮವು ಅಲ್ಲಿನ ಮಹಿಳಾ ಸಿಬ್ಬಂದಿಗೆ ವೇತನ ಸಹಿತ ಋತುಸ್ರಾವದ ಮೊದಲ ದಿನ ರಜೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ

ಮಾತೃಭೂಮಿ ಚಾನೆಲ್‌ನಲ್ಲಿ ಪ್ರಸ್ತುತ ಒಟ್ಟು 300 ಉದ್ಯೋಗಿಗಳಿದ್ದು, ಅದರಲ್ಲಿ 75 ಮಂದಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಇವರಿಗೆ ವರ್ಷದಲ್ಲಿ ಒಟ್ಟು 12 ದಿನ ವೇತನ ಸಹಿತ ರಜೆ ನೀಡಲು ಚಾನೆಲ್ ನಿರ್ಧರಿಸಿದೆ.

‘ಪತ್ರಿಕೋದ್ಯಮ ತುಂಬಾ ಒತ್ತಡದ ಉದ್ಯೋಗ. ಋತುಸ್ರಾವದ ವೇಳೆ ನಮ್ಮ ಮಹಿಳೆಯರು ಅನುಭವಿಸುವ ಕಷ್ಟವನ್ನು ನಾವು ಅರ್ಥಮಾಡಿಕೊಳ್ಳಬೇಕು.   ಈ ಹಿಂದೆ ಮಹಿಳೆಯರಿಗೆ ಋತುಸ್ರಾವದ ರಜೆ ತೆಗೆದುಕೊಳ್ಳುವುದು ಕೇವಲ ಆಯ್ಕೆಯಾಗಿತ್ತು. ಆದರೆ ಈ ನಿಯಮವನ್ನು ಕೊನೆಗೊಳಿಸಲಾಗಿದೆ.

ಮಹಿಳೆಯರಿಗೆ ವರ್ಷದಲ್ಲಿ ನೀಡುವ ರಜೆಗಳನ್ನು ಹೊರತುಪಡಿಸಿ ಈ 12 ದಿನಗಳ ಯಥೇಚ್ಛ ರಜೆ ನೀಡಲಾಗುವುದು ಎಂದು ಮಾತೃಭೂಮಿ ಚಾನೆಲ್‌ನ ಜಂಟಿ ನಿರ್ವಹಣಾ ಮುಖ್ಯಸ್ಥ  ಶ್ರೇಯಂಸಾ ಕುಮಾರ್ ಹೇಳಿದ್ದಾರೆ.

ಕೆಲವು ವಾರಗಳ ಹಿಂದೆಯಷ್ಟೇ ಮುಂಬೈ ಮೂಲದ ಎರಡು ಡಿಜಿಟಲ್ ಕಂಪೆನಿಗಳು  ಋತುಸ್ರಾವದ ಮೊದಲ ದಿನ ರಜೆ ನಿಯಮವನ್ನು ಘೋಷಿಸಿತ್ತು. ಇದರ ಬೆನ್ನಲ್ಲೇ ಮಾತೃಭೂಮಿ ಸಂಸ್ಥೆ ಈ ನಿರ್ಣಯ ತೆಗೆದುಕೊಂಡಿದೆ.

ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಎನ್‌ಡಿಎ ಸರ್ಕಾರ 12% ಜಿಎಸ್‌ಟಿ ತೆರಿಗೆ ವಿಧಿಸಿದ್ದನ್ನು ಖಂಡಿಸಿ ಮಹಿಳೆಯರಿಂದ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅದೇ ವೇಳೆ ಈ ಎರಡು ಕಂಪೆನಿಗಳು ಮಹಿಳೆಯರ ನೋವಿಗೆ ಸ್ಪಂದಿಸಿದ್ದು, ಈ ಸಂಬಂಧ ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿತ್ತು.

ಬಿಹಾರ ಸರ್ಕಾರವು ಸಹ ಮಹಿಳೆಯರಿಗೆ ಋತುಸ್ರಾವದ ವೇಳೆ ಎರಡು ದಿನಗಳ ರಜೆ ನೀಡಬೇಕೆಂದು ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT