ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನ್‌ ಕಿ ಬಾತ್‌’ನಿಂದ ಆಕಾಶವಾಣಿಗೆ ₹10ಕೋಟಿ ಆದಾಯ ಹೆಚ್ಚಳ

Last Updated 20 ಜುಲೈ 2017, 13:01 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಮನ್‌ ಕಿ ಬಾತ್‌’ ಕಾರ್ಯಕ್ರಮದ ಪರಿಣಾಮ ಕಳೆದ ಎರಡು ವರ್ಷಗಳಲ್ಲಿ ಆಕಾಶವಾಣಿಯು ₹10ಕೋಟಿ ಆದಾಯ ಗಳಿಸಿದೆ.

ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಖಾತೆ ಸಚಿವ ರಾಜ್ಯವರ್ಧನ್‌ ರಾಥೋರ್‌ ಅವರು, 2015–16ನೇ ಸಾಲಿನಲ್ಲಿ ₹4,78 ಕೋಟಿ ಹಾಗೂ 2016–17ನೇ ಸಾಲಿನಲ್ಲಿ ₹5.19ಕೋಟಿ ಆದಾಯ ಆಕಾಶವಾಣಿಗೆ ಹರಿದು ಬಂದಿದೆ ಎಂದು ತಿಳಿಸಿದರು.

ಇಂಗ್ಲಿಷ್‌ ಹಾಗೂ ಸಂಸ್ಕೃತ ಭಾಷೆಯಲ್ಲಿಯೂ ಕಾರ್ಯಕ್ರಮ ಪ್ರಸಾರಮಾಡಲಾಗುವುದು ಎಂದು ಸಹ ಅವರು ಹೇಳಿದ್ದಾರೆ. ಜತೆಗೆ ದೇಶದಾದ್ಯಂತ ಮತ್ತು ಜಗತ್ತಿನಾದ್ಯಂತ ಇರುವ ಕೇಳುಗರಿಗಾಗಿ, ಭಾಷಣದ ಮೂಲ ಆವೃತ್ತಿ ಮುಗಿದ ಬಳಿಕ ಅದನ್ನು ದೇಶದ 18 ಪ್ರಾದೇಶಿಕ ಮತ್ತು 33 ಉಪ ಭಾಷೆಗಳಲ್ಲಿಯೂ ಪ್ರಸಾರ ಮಾಡಲಾಗುತ್ತಿದೆ ಎಂದಿದ್ದಾರೆ.

ದೇಶದಾದ್ಯಂತ ಜನಪ್ರಿಯವಾಗಿರುವ ಈ ಕಾರ್ಯಕ್ರಮವನ್ನು ಮೋದಿ ಅವರು 2014ರ ಅಕ್ಟೋಬರ್‌ 3ರಂದು ಪ್ರಾರಂಭಿಸಿದ್ದರು. ಜತೆಗೆ ಪ್ರತಿ ತಿಂಗಳು ದೇಶದ ಜನರನ್ನು ಉದ್ದೇಶಿಸಿ ದೇಶದ ಪ್ರಮುಖ ಸಮಸ್ಯೆಗಳು ಮತ್ತು ಯೋಜನೆಗಳ ಕುರಿತು ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT