ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಧೈರ್ಯಂ

ಶಿವತೇಜಸ್ ನಿರ್ದೇಶನದ ಚಿತ್ರ ಧೈರ್ಯಂ. ಕೆ. ರಾಜು ಇದರ ನಿರ್ಮಾಪಕರು. ಸಮಾಜಮುಖಿ ಹುಡುಗನೊಬ್ಬ ದುಷ್ಟಶಕ್ತಿಗಳ ವಿರುದ್ಧ ಹೋರಾಡಬೇಕಾದಾಗ ಎದುರಾಗುವ ಸಂಕಷ್ಟಗಳು ಇದರ ಕಥಾವಸ್ತು. ರವಿಶಂಕರ್, ಅಜಯ್ ರಾವ್, ಅದಿತಿ ಪ್ರಭುದೇವ ತಾರಾಗಣದಲ್ಲಿ ಇದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಎಮಿಲ್ ಸಂಗೀತ ಈ ಚಿತ್ರಕ್ಕಿದೆ.

ಆಪರೇಷನ್ ಅಲಮೇಲಮ್ಮ

ಅಮ್ರೆಜ್ ಸೂರ್ಯವಂಶಿ ನಿರ್ಮಾಣದ, ಸುನಿ ನಿರ್ದೇಶನದ ಚಿತ್ರ ಇದು. ಜ್ಯೂಡಾ ಸ್ಯಾಂಡಿ ಸಂಗೀತ, ಅಭಿಷೇಕ್ ಜಿ. ಕಾಸರಗೋಡು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ರಿಷಿ, ಶ್ರದ್ಧಾ ಶ್ರೀನಾಥ್, ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸುಮುಕ್ತ ತಾರಾಬಳಗದಲ್ಲಿದ್ದಾರೆ.

ದಾದಾ ಈಸ್ ಬ್ಯಾಕ್

ಸಂತೋಷ್ ನಿರ್ದೇಶನದ ಚಿತ್ರ ಇದು. ‘ಹುಕುಂ’ ಎನ್ನುವ ಪದ ಈ ಚಿತ್ರದ ಕಥೆಯಲ್ಲಿ ಪ್ರಮುಖವಾಗಿ ಬರುತ್ತದೆಯಂತೆ. ರೌಡಿಸಂ ಬಗ್ಗೆ ಅನೇಕ ಸಂಗತಿಗಳು ಅನಾವರಣವಾಗಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪಾರ್ಥಿಬನ್, ಅರುಣ್, ಶ್ರಾವ್ಯಾ, ಶರತ್ ಲೋಹಿತಾಶ್ವ, ದತ್ತಣ್ಣ, ಸುಧಾರಾಣಿ, ಅಜಯ್‍ರಾಜ್ ಅರಸ್ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಜಯ್ ರಾಜ್ ಅರಸ್ ಮತ್ತು ಡಾ.ಆರ್. ಶಂಕರ್ ಇದರ ನಿರ್ಮಾಪಕರು.

ಟಾಸ್

ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರ ಇದು. ಇದರಲ್ಲಿ ಇಬ್ಬರು ನಾಯಕ ನಟರಿದ್ದು, ವಿಜಯ್ ರಾಘವೇಂದ್ರ ಹಾಗೂ ಸಂದೀಪ್ ಆ ಪಾತ್ರಗಳನ್ನು ನಿಭಾಯಿಸಿದ್ದಾರೆ. ರಮ್ಯಾ ಬಾರ್ನಾ ಅವರು ಚಿತ್ರದ ನಾಯಕಿ. ಇದು ತ್ರಿಕೋನ ಪ್ರೇಮಕಥೆಯ ಚಿತ್ರ. ರಾಜು ತಾಳಿಕೋಟೆ, ಸುಚೇಂದ್ರ ಪ್ರಸಾದ್, ಸುನೇತ್ರ ಪಂಡಿತ್, ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ ತಾರಾಗಣದಲ್ಲಿ ಇದ್ದಾರೆ. ದಯಾಳ್ ಪದ್ಮನಾಭನ್ ಹಾಗೂ ಅವಿನಾಶ್ ಯು. ಶೆಟ್ಟಿ ಇದರ ನಿರ್ಮಾಪಕರು.

ಟ್ರಿಗರ್

ಎಂ. ಕೃಷ್ಣ ಮಾಸ್ಟರ್ ಇದರ ನಿರ್ಮಾಪಕರು. ಚೇತನ್ ಗಂಧರ್ವ ಹಾಗೂ ಜೀವಿಕಾ ಪಿಳ್ಳಪ್ಪ ಇದರಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಿನಿಮಾದ ನಿರ್ದೇಶನ ವಿಜಯ್ ಪಾಳೇಗಾರ ಅವರದ್ದು. ಚಂದ್ರು ಓಬಯ್ಯ ಸಂಗೀತ ನೀಡಿದ್ದಾರೆ. ನೀನಾಸಂ ಅಶ್ವಥ್, ಸಿದ್ಧಿ ಪ್ರಶಾಂತ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ಸಂಕೇತ್ ಕಾಶಿ ತಾರಾಗಣದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT