ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿರಲಿ ಗಿಡಗಳ ಆರೈಕೆ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಮನೆಯ ಸೌಂದರ್ಯ ಹೆಚ್ಚಬೇಕಾದರೆ ಮನೆ ಮುಂದೊಂದು ಪುಟ್ಟ ಉದ್ಯಾನವಿರಬೇಕು. ಉದ್ಯಾನದ ನಿರ್ವಹಣೆ ಮಾಡುವುದು ಸುಲಭದ ಕೆಲಸವಲ್ಲ. ಮಣ್ಣಿನ ಗುಣಮಟ್ಟ, ನೀರಿನ ಪ್ರಮಾಣ ಸರಿಯಾಗಿದ್ದರೆ ಮಾತ್ರ ಉದ್ಯಾನ ಅಂದಗಾಣಿಸಲು ಸಾಧ್ಯ.

ಉದ್ಯಾನದ ಸೌಂದರ್ಯ ಹೆಚ್ಚಲು ಬಳಸುವ ಕಲ್ಲುಗಳು ಮಣ್ಣಿನ ರಕ್ಷಣೆಯ ಜೊತೆಗೆ ಕಡಿಮೆ ಪ್ರಮಾಣದಲ್ಲಿ ನೀರು ಬಳಸಲು ನೆರವಾಗುತ್ತದೆ. ಹೀಗೆ ಚಿಕ್ಕ, ಚಿಕ್ಕ ತಂತ್ರಗಳನ್ನು ಅನುಸರಿಸುವ ಮೂಲಕ ಉದ್ಯಾನದ ಮೆರುಗು ಹೆಚ್ಚಿಸುವುದು ಹೇಗೆ ಎಂಬುದನ್ನು ತಿಳಿಯೋಣ.

l ಮಣ್ಣಿಗೆ ಸರಿಯಾದ ಪ್ರಮಾಣದಲ್ಲಿ ನೀರು ಸಿಗದಿದ್ದಾಗ ಬಿಸಿಲಿಗೆ ಮಣ್ಣು ಗಟ್ಟಿಯಾಗುತ್ತದೆ. ಇದರಿಂದ ಗಿಡದ ಬೇರುಗಳಿಗೆ ಉಸಿರಾಡುವುದು ಕಷ್ಟವಾಗಿ ಅದು ಸತ್ತುಹೋಗುತ್ತವೆ. ಇದನ್ನು ತಪ್ಪಿಸಲು ಮಣ್ಣಿನ ಸುತ್ತಲೂ ಕಲ್ಲುಗಳನ್ನು ಹಾಕಿ. ಇದು ಮಣ್ಣಿನ ತೇವಾಂಶ ಹೆಚ್ಚು ಹೊತ್ತು ಇರಲು ನೆರವಾಗುತ್ತದೆ. 

l ಬಣ್ಣ, ಬಣ್ಣದ ಕಲ್ಲುಗಳನ್ನು ಗಿಡಗಳ ಮಧ್ಯೆ ಹಾಕುವುದರಿಂದ ಗಿಡದ ರಕ್ಷಣೆಯ ಜೊತೆಗೆ ಉದ್ಯಾನದ ಶೋಭೆಯನ್ನು ಹೆಚ್ಚಿಸಬಹುದು.

l ಪುಟ್ಟ ಉದ್ಯಾನವಾಗಿದ್ದರೆ ಪೂರ್ತಿ ಕಲ್ಲುಗಳನ್ನು ಹರಡಿ ಮಧ್ಯದಲ್ಲಿ ಕುಂಡಗಳಲ್ಲಿ ಗಿಡಗಳನ್ನು ನೆಡಬಹುದು. ಕಳ್ಳಿ ಜಾತಿಯ ಗಿಡಗಳನ್ನು ನೆಟ್ಟರೆ ಸುಂದರವಾಗಿ ಕಾಣುತ್ತದೆ.

l ಮನೆಯ ಕಿಟಕಿಗಳ ಮೇಲೆ ಇಟ್ಟಿರುವ ಗಿಡಗಳ ಮೇಲೆ ದೂಳು ಕೂರದಂತೆ ಎಚ್ಚರ ವಹಿಸಿ. ಆಗಾಗ್ಗೆ ಗಿಡಗಳನ್ನು ಸ್ವಚ್ಛಗೊಳಿಸುತ್ತಿರಿ. ಗಿಡಗಳ ಮೇಲೆ ನೀರನ್ನು ಸ್ಪ್ರೇ ಮಾಡಿ, ಸ್ಪಾಂಜ್‌ನಿಂದ ಒರೆಸುವುದರಿಂದ ಗಿಡ ಹಸಿರಿನಿಂದ ಕಂಗೊಳಿಸುತ್ತದೆ.

l ಯಾವ ಗಿಡಕ್ಕೆ ಎಷ್ಟು ನೀರು ಅಗತ್ಯ ಎಂಬುದನ್ನು ತಿಳಿದುಕೊಂಡು ನೀರುಣಿಸಿ. ಅಗತ್ಯಕ್ಕಿಂತ ಹೆಚ್ಚು ನೀರು ಹಾಕುವುದು ಗಿಡಗಳ ಆರೋಗ್ಯಕ್ಕೆ ಒಳ್ಳೆಯದಲ್ಲ.

l ಕಲ್ಲುಗಳು ಉದ್ಯಾನದ ಸೌಂದರ್ಯ ಹೆಚ್ಚಿಸುವ ಜೊತೆಗೆ ಕಳೆಗಿಡಗಳನ್ನು ಬೆಳೆಯದಂತೆ ತಡೆಯುತ್ತವೆ. ಅಮೃತಶಿಲೆಯಂತಹ ಬಿಳಿ ಹಾಗೂ ಇದ್ದಿಲಿನಂತೆ ಕಪ್ಪಾದ ನುಣುಪು ಉರುಟು ಶಿಲೆಗಳಿಗೆ ಬೆಲೆ ಹೆಚ್ಚು

l ನೀವು ಪದೇಪದೇ ಪ್ರವಾಸಕ್ಕೆ ಹೋಗಬೇಕು ಗಿಡ ನೆಡುವುದು ಹೇಗೆ ಎಂಬ ಚಿಂತೆ ಬೇಡ. ನೀರನ್ನು ತುಂಬಾ ದಿನ ಹಿಡಿದಿಡುವ ಪಾಲಿಮರ್‌ ಕುಂಡಗಳಲ್ಲಿ ಗಿಡ ನೆಡುವುದರಿಂದ ಈ ಸಮಸ್ಯೆಗೆ ಪರಿಹಾರ ದೊರಕುತ್ತದೆ.

l ಚಳಿಗಾಲದಲ್ಲಿ ಬಹಳ ಕಾಡುವ ಕಳೆಗಳಿಂದ ಮುಕ್ತಿ ಪಡೆಯಲು ಗಿಡಗಳಿಗೆ ಬೇಕಿಂಗ್‌ ಸೋಡಾ ಲೇಪಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT