ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಯಾದೆ ಬೇಡವೇ?

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಮೈಸೂರಿನ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಮಹಿಳಾ ಉಪನ್ಯಾಸಕರಿಗೆ ವಸ್ತ್ರಸಂಹಿತೆ ಜಾರಿ ಮಾಡಿ ಈ ತಿಂಗಳ 4ರಂದು ಸುತ್ತೋಲೆ ಹೊರಡಿಸಿದ್ದರು. ಮಹಿಳಾ ನೌಕರರ ಆಕ್ರೋಶಕ್ಕೆ ಹೆದರಿ ಮರುದಿನವೇ (ಜುಲೈ 5) ಅದನ್ನು ವಾಪಸ್‌ ಪಡೆದಿದ್ದಾರೆ.

ಖಾಸಗಿ ಶಾಲೆ ಇರಲಿ ಅಥವಾ ಸರ್ಕಾರಿ ಶಾಲೆಯೇ ಇರಲಿ, ರಾಜ್ಯದಲ್ಲಿ ಎಲ್‌.ಕೆ.ಜಿ.ಯಿಂದ ಹತ್ತನೇ ತರಗತಿಯವರೆಗೆ ಎಲ್ಲಾ ಮಕ್ಕಳಿಗೆ ವಸ್ತ್ರಸಂಹಿತೆ ಕಡ್ಡಾಯವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಕೆಲವು ಖಾಸಗಿ ಕಾಲೇಜುಗಳಲ್ಲಿ ಬೋಧಕ ವರ್ಗದವರಿಗೆ ಕೂಡ ವಸ್ತ್ರಸಂಹಿತೆ ಇದೆ.

ಇತ್ತೀಚೆಗೆ ಕೆಲವು ಮಹಿಳಾ ನೌಕರರು ಲೆಗ್ಗಿಂಗ್ಸ್‌, ಜೀನ್ಸ್‌ ಪ್ಯಾಂಟ್‌ ಮತ್ತು ಟಿ ಶರ್ಟ್‌ ಧರಿಸಿ ಕಚೇರಿಗೆ, ಕಾಲೇಜಿಗೆ ಬರುತ್ತಿರುವುದು ಸಾಮಾನ್ಯವಾಗಿದೆ.

ಕೆಲವು ಉಪನ್ಯಾಸಕಿಯರು ಗಿಡ್ಡ ಮೇಲಂಗಿಯನ್ನು (ಟಾಪ್‌) ಧರಿಸಿ ವೇಲ್‌ ಸಹ ಇಲ್ಲದೆ ಲೆಗ್ಗಿಂಗ್ಸ್‌, ಜೀನ್ಸ್‌ ಪ್ಯಾಂಟ್‌ ಮತ್ತು ಟಿ ಶರ್ಟ್‌ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ. ಕೆಲವರಂತೂ ಇದರ ಜೊತೆಗೆ ಹೈ ಹೀಲ್ಡ್‌ ಚಪ್ಪಲಿ ಧರಿಸಿ ಕಷ್ಟಪಟ್ಟು ನಡೆಯುವುದನ್ನು ನೋಡಲಾಗುತ್ತಿಲ್ಲ. ಇವರುಗಳು ಪಾಠ ಮಾಡುವಾಗ, ಗಾಳಿಗೆ ಮೇಲಂಗಿ ಅತ್ತ ಇತ್ತ ಸರಿದರೆ ದೇಹದ ಭಾಗಗಳ ಪ್ರದರ್ಶನವಾಗುತ್ತದೆ. ಇವರು ‘ಮಹಿಳಾ ಗುರು’ಗಳೆಂದು ಒಪ್ಪಿಕೊಳ್ಳುವುದು ಕಷ್ಟವಾಗುತ್ತಿದೆ. ಉಪನ್ಯಾಸಕಿಯರಿಗೆ ಸ್ವಲ್ಪ ‘ಮರ್ಯಾದೆ’ ಬೇಡವೇ?

ಸಂಬಂಧಪಟ್ಟ ಮಂತ್ರಿಗಳು ಹಾಗೂ ಆಯುಕ್ತರು ಕೂಡಲೇ ಎಲ್ಲಾ ಬೋಧಕ ವರ್ಗದವರಿಗೆ ಕಡ್ಡಾಯವಾಗಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿ ಆಜ್ಞೆ ಹೊರಡಿಸಬೇಕು.
-ಪ್ರೊ. ಗಂಗಾಧರಯ್ಯ, ಪ್ರೊ. ಗಣೇಶ್‌ ಪ್ರಸಾದ್‌,
ಡಾ. ವೆಂಕಟೇಶ್‌, ಡಾ. ನಿರ್ಮಲಾ ದೇವಿ, ಪ್ರೊ. ಯೋಗೀಶ್‌, ಪ್ರೊ. ಕೃಷ್ಣದಾಸ್‌, ಗಿರೀಶ್‌ ಹಿರೇಮಠ್‌, ಆರ್‌.ಸಿ. ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT