ಕ್ಯಾಲಿಬರಿ ಫಾಂಟ್ ಎಲ್ಲಿಂದ ಬಂತು: ಷರೀಫ್ ಪುತ್ರಿ ಮರಿಯಮ್ ಷರೀಫ್ ಸಲ್ಲಿಸಿರುವ ಆಸ್ತಿ ದಾಖಲೆ ಪತ್ರದಲ್ಲಿ ಕ್ಯಾಲಿಬರಿ ಫಾಂಟ್ ಬಳಸಲಾಗಿದೆ. ಈ ದಾಖಲೆ ಪತ್ರವು 2006ರಲ್ಲಿ ಜಾರಿಗೊಂಡಿತ್ತು. ವಿಚಿತ್ರವೆಂದರೆ, ಈ ಫಾಂಟ್ ಅಧಿಕೃತವಾಗಿ ಬಳಕೆಗೆ ಲಭ್ಯವಾಗಿದ್ದು 2007ರಲ್ಲಿ. ಅಲ್ಲದೆ ಈ ದಾಖಲೆಯು ಲಂಡನ್‌ನಲ್ಲಿ ನೋಟರಿಯೂ ಆಗಿತ್ತು. ಆದರೆ ನೋಟರಿ ಮಾಡಿಸಿದ ದಿನ ಕಚೇರಿಯ ರಜಾದಿನವಾಗಿತ್ತು.