ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಸ್‌ಬಿಐ ರಿಯಾಲ್ಟಿ’ ತಾಣ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಮನೆ, ಫ್ಲ್ಯಾಟ್ ಖರೀದಿದಾರರಿಗೆ ನೆರವಾಗಲು ಪ್ರತ್ಯೇಕ ಅಂತರ್ಜಾಲ ತಾಣ ‘ಎಸ್‌ಬಿಐ ರಿಯಾಲ್ಟಿ’ (www.sbirealty.in) ಆರಂಭಿಸಿದೆ.

ದೇಶದಾದ್ಯಂತ ಬ್ಯಾಂಕ್‌ ಅನುಮೋದನೆ ನೀಡಿರುವ 3 ಸಾವಿರದಷ್ಟು ಗೃಹ ನಿರ್ಮಾಣ ಯೋಜನೆಗಳ ವಿವರಗಳು ಈ ತಾಣದಲ್ಲಿ ಲಭ್ಯ ಇವೆ.

‘13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 30 ನಗರಗಳಲ್ಲಿನ ಗೃಹ ನಿರ್ಮಾಣ ಯೋಜನೆಗಳಲ್ಲಿ ಗ್ರಾಹಕರು ತಮ್ಮ ಕನಸಿನ ಮನೆ ಖರೀದಿಸಲು ಈ ತಾಣ ನೆರವಾಗಲಿದೆ. ಸದ್ಯಕ್ಕೆ ಈ ತಾಣದಲ್ಲಿ 9.5 ಲಕ್ಷದಷ್ಟು ಮನೆಗಳು ಖರೀದಿಗೆ ಲಭ್ಯ ಇವೆ.

ಗ್ರಾಹಕರು ತಮ್ಮ ಆದಾಯ ಆಧರಿಸಿ ಯಾವ ಪ್ರಮಾಣದಲ್ಲಿ ಗೃಹ ಸಾಲ ಪಡೆಯಬಹುದು ಎನ್ನುವುದನ್ನು ಲೆಕ್ಕ ಹಾಕಲು ಕೂಡ ಈ ತಾಣ ನೆರವಾಗಲಿದೆ’ ಎಂದು  ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ  ರಜನೀಶ್ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT