ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಓಪನ್‌ ಇನ್ನು ಮುಂದೆ ಮಹಾರಾಷ್ಟ್ರ ಓಪನ್

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ/ಚೆನ್ನೈ : ಚೆನ್ನೈ ಓಪನ್ ಟೆನಿಸ್ ಟೂರ್ನಿಯನ್ನು ಪುಣೆಗೆ ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ.

ಟೂರ್ನಿಯನ್ನು ಇನ್ನು ಮುಂದೆ ಮಹಾರಾಷ್ಟ್ರ ಓಪನ್‌ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಟೂರ್ನಿಯ ಮಾಲೀಕತ್ವ ಹೊಂದಿರುವ ಐಎಂಜಿ (ರಿಲಯನ್ಸ್‌) ಸಂಸ್ಥೆ ತಮಿಳುನಾಡು ಟೆನಿಸ್ ಸಂಸ್ಥೆಯ (ಟಿಎನ್‌ಟಿಎ) ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸಿದ್ದು ಮಹಾರಾಷ್ಟ್ರ ಟೆನಿಸ್‌ ಸಂಸ್ಥೆಯ ಜೊತೆ ಐದು ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಟಿಎನ್‌ಟಿಎ ಗುರುವಾರ ತಿಳಿಸಿದೆ.

‘ಟಿಎನ್‌ಟಿಎ ಜೊತೆಗಿನ ಒಪ್ಪಂದವನ್ನು 2019ರ ವರೆಗೆ ವಿಸ್ತರಿಸಲಾಗಿತ್ತು. ಟೂರ್ನಿಗೆ ಪ್ರಾಯೋಜಕರನ್ನು ಹುಡುಕುವುದು ಕಠಿಣವಾಗಿದೆ’ ಎಂದು ಹೇಳಿದ ಟಿಎನ್‌ಟಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿತೇನ್ ಜೋಶಿ ‘ಚೆನ್ನೈ ಓಪನ್‌ನ 2018 ಮತ್ತು 2019ನೇ ಆವೃತ್ತಿಯನ್ನು ರದ್ದುಗೊಳಿಸಿರುವುದಾಗಿ ಐಎಂಜಿಯಿಂದ ನಮಗೆ ಇ ಮೇಲ್‌ ಸಂದೇಶ ಬಂದಿದೆ’ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT