ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75 ವರ್ಷದ ಮಾಜಿ ಶಾಸಕನಿಗೆ 9 ವರ್ಷದ ಮಗ!

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಪ್ಪತ್ತೈದು ವರ್ಷ ವಯಸ್ಸು ದಾಟಿದ ಮಾಜಿ ಶಾಸಕರೊಬ್ಬರು ತಮಗೆ ಒಂಭತ್ತು ವರ್ಷದ ಮಗನಿದ್ದು, ಆತನ ಆರೋಗ್ಯ ಸರಿ ಇಲ್ಲ ಎಂದು ವೈದ್ಯಕೀಯ ವೆಚ್ಚ ಮಂಜೂರಾತಿ ಪಡೆದಿರುವುದು ಪತ್ತೆಯಾಗಿದೆ.

ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ಬಗ್ಗೆ ನಕಲಿ ಬಿಲ್‌ಗಳನ್ನು ಸಲ್ಲಿಸಿ ಸರ್ಕಾರದಿಂದ ಹಣ ಪಡೆದ ಬಗ್ಗೆ ನಡೆಯುತ್ತಿರುವ ಸಿಐಡಿ ವಿಚಾರಣೆ ಸಂದರ್ಭದಲ್ಲಿ ಈ ಕುತೂಹಲಕಾರಿ ಅಂಶ ಬಯಲಿಗೆ ಬಂದಿದೆ.

ವಯೋವೃದ್ಧ ಶಾಸಕರಿಗೆ ಒಂಬತ್ತು ವರ್ಷದ ಮಗ  ಇರುವ ಅಂಶ ಸಿಐಡಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಾಸಕರು ಮತ್ತು ಮಾಜಿ ಶಾಸಕರ ಕುಟುಂಬ ವರ್ಗದ ಯಾರಿಗೆಲ್ಲ ವೈದ್ಯಕೀಯ ವೆಚ್ಚ ಮಂಜೂರಾತಿ ಮಾಡಿಸಿಕೊಳ್ಳಬಹುದು ಎಂಬ ಅಂಶ ಸಿಐಡಿ ಅಧಿಕಾರಿಗಳ ಜಿಜ್ಞಾಸೆಗೆ ಕಾರಣವಾಗಿದೆ.

ಕೆಲವು ಶಾಸಕರು ಮತ್ತು ಮಾಜಿ ಶಾಸಕರು ಇಬ್ಬರು ಅಥವಾ ಮೂವರು ಪತ್ನಿಯರನ್ನು ಹೊಂದಿದ್ದರೆ, ಅವರಿಗೆ ಮಕ್ಕಳಿದ್ದರೆ  ವೈದ್ಯಕೀಯ  ವೆಚ್ಚ ನೀಡಬಹುದೇ ಎಂಬ ಸಂಶಯವೂ ಅಧಿಕಾರಿಗಳನ್ನು ಕಾಡಿದೆ.  ಈ ಸಂಬಂಧ ಸಚಿವಾಲಯದಿಂದ ಸೂಕ್ತ ಮಾಹಿತಿ ಕೇಳಲಾಗಿದೆ ಎಂದೂ ಸಿಐಡಿ ಮೂಲಗಳು ತಿಳಿಸಿವೆ.

ಮಾಜಿ ಶಾಸಕರಾದ ಡಾ.ಸಿ.ಸಿ.ಕಲಕೋಟಿ, ಸುಧೀಂದ್ರರಾವ್‌ ಕಸಬೆ ಮತ್ತು ಸ.ಲಿಂಗಯ್ಯ ಅವರು ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಸುಳ್ಳು ಬಿಲ್‌ಗಳನ್ನು ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2016ರ ಆಗಸ್ಟ್‌ನಲ್ಲಿ  ಸಿಐಡಿ ತನಿಖೆಗೆ ಆದೇಶಿಸಿತ್ತು.

ಬಹುತೇಕ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಸದ್ಯದಲ್ಲೇ  ವರದಿ ಸಲ್ಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT