ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ: 21ರಿಂದ ಆನ್‌ಲೈನ್‌ ಸೇವೆ ತಾತ್ಕಾಲಿಕ ಸ್ಥಗಿತ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ಬೆಸ್ಕಾಂನ ಆನ್‌ಲೈನ್‌ ಬಿಲ್‌ ಪಾವತಿ ವ್ಯವಸ್ಥೆ ಇದೇ 21ರ ಸಂಜೆ 6ರಿಂದ 24ರ ಬೆಳಿಗ್ಗೆ 9ರ ವರೆಗೆ ಸ್ಥಗಿತಗೊಳ್ಳಲಿದೆ.

ಬೆಂಗಳೂರಿನ ಎಲ್ಲ ಉಪವಿಭಾಗಗಳು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಶಿರಾ, ಚನ್ನಪಟ್ಟಣ, ಆನೇಕಲ್‌, ಮುಳಬಾಗಿಲು, ಬಂಗಾರಪೇಟೆ, ಗೌರಿಬಿದನೂರು, ಹೊಸಕೋಟೆ, ದೊಡ್ಡಬಳ್ಳಾಪುರ, ಚಳ್ಳಕೆರೆ, ಕುಣಿಗಲ್‌, ಹರಪನಹಳ್ಳಿ, ಹರಿಹರ, ಹಿರಿಯೂರು ಹಾಗೂ ತಿಪಟೂರು ಉಪವಿಭಾಗಗಳಲ್ಲಿ ಸೇವೆ ಲಭ್ಯ ಇರುವುದಿಲ್ಲ.

ಗ್ರಾಹಕರು ನಗದು ಕೌಂಟರ್‌ಗಳು, ಎಟಿಪಿ, ಬೆಂಗಳೂರು ಒನ್‌, ಕರ್ನಾಟಕ ಒನ್‌, ಅಂಚೆ ಕಚೇರಿ, ಇಸಿಎಸ್‌ ಹಾಗೂ ಈಸಿ ಬಿಲ್‌ ಮೂಲಕ ಬಿಲ್‌ ಪಾವತಿ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT