ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ಗೆ ರಾಹುಲ್

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ವ್ಲಾಡಿವೊಸ್ಟಾಕ್‌: ಭಾರತದ ಆನಂದ್ ಪವಾರ್‌, ರಾಹುಲ್‌ ಯಾದವ್‌, ರಸಿಕ ರಾಜೇ ಮತ್ತು ವೃಶಾಲಿ ಗುಮ್ಮಡಿ ರಷ್ಯಾ ಓಪನ್‌ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಎಂಟನೇ ಶ್ರೇಯಾಂಕದ ಆನಂದ್‌ ಅವರು ಮಲೇಷ್ಯಾದ ಲಿಮ್‌ ಚಿ ವಿಂಗ್ ಎದುರು 10–12, 11–6, 11–7, 12–10ರಲ್ಲಿ ಗೆದ್ದರು. ಎಂಟರ ಘಟ್ಟದಲ್ಲಿ ಅವರು ಎರಡನೇ ಶ್ರೇಯಾಂಕದ ವ್ಲಾದಿಮಿರ್‌ ಮಾಲ್ಕೊವ್‌ ವಿರುದ್ಧ ಸೆಣಸುವರು.

ನಾಲ್ಕನೇ ಶ್ರೇಯಾಂಕದ ಶುಭಂಕರ್‌ ಡೇ ಅವರನ್ನು ರಾಹುಲ್‌ 11–13, 11–4, 11–6,11–7ರಲ್ಲಿ ಮಣಿಸಿದರು. ಇಂಗ್ಲೆಂಡ್‌ನ ಯೇಹ್ಯಾಂಗ್ ವಾಂಗ್ ಅವರನ್ನು ರಾಹುಲ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಿಸುವರು.

ಮಹಿಳೆಯರ ಸಿಂಗಲ್ಸ್‌ನ ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ವೃಶಾಲಿ ಸ್ಥಳೀಯ ಆಟಗಾರ್ತಿ ಅನಸ್ತೇಷಿಯಾ ಶರಪೋವಾ ಅವರನ್ನು 11–8, 15–13, 11–6ರಲ್ಲಿ ಮಣಿಸಿದರು. ಆರನೇ ಶ್ರೇಯಾಂಕದ ರಸಿಕಾ ಜಪಾನ್‌ನ ಮಿನಾಮಿ ಕವಶಿಮಾ ಅವರನ್ನು 13–11,11–7, 15–13ರಲ್ಲಿ ಸೋಲಿಸಿದರು.

ಕ್ವಾರ್ಟರ್‌ನಲ್ಲಿ ವೃಶಾಲಿ ಮೂರನೇ ಶ್ರೇಯಾಂಕದ ರಷ್ಯಾ ಆಟಗಾರ್ತಿ ನತಾಲಿಯಾ ಪೆರ್ಮಿನೋವ ಅವರನ್ನು ಮತ್ತು ರಸಿಕಾ ನಾಲ್ಕನೇ ಶ್ರೇಯಾಂಕದ ರಷ್ಯಾ ಆಟಗಾರ್ತಿ ನಟ್ಸುಕಿ ನಿಡೇರಾ ಅವರನ್ನು ಎದುರಿಸುವರು.

ಡಬಲ್ಸ್‌ನಲ್ಲೂ ವಿಕ್ರಮ: ಭಾರತದ ಆಟಗಾರರು ಡಬಲ್ಸ್ ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿದರು. ಪುರುಷರ ಡಬಲ್ಸ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಭಾರತದ ಜೋಡಿ ಅರ್ಜುನ್ ಮತ್ತು ರಾಮಚಂದ್ರನ್‌ ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ರಷ್ಯಾದ ರಾಡಿಯಾನ್ ಅಲಿಮೊವ್‌ ಮತ್ತು ಪವೆಲ್‌ ಕೊತ್ಸರೆಂಕೊ ವಿರುದ್ಧ 11–9, 11–3, 11–8ರಲ್ಲಿ ಸೋಲಿಸಿದರು.

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇವರು ಜಪಾನ್‌ನ ಮಸಾಟೊ ಟಕಾನೊ ಮತ್ತು ಯೋಶಿಕಿ ತ್ಸುಕಮೊಟೊ ಅವರನ್ನು ಎದುರಿಸುವರು. ಸೌರಭ್ ಶರ್ಮಾ ಮತ್ತು ಅನುಷ್ಕಾ ಪಾರಿಖ್‌ ಕೂಡ ಕ್ವಾರ್ಟರ್ ಫೈನಲ್ ಹಂತಕ್ಕೇರಿದರು.

16ರ ಘಟ್ಟದಲ್ಲಿ ಈ ಜೋಡಿ ರಷ್ಯಾದ ಅಲೆಕ್ಸಾಂಡರ್ ವಾಸಿಲ್ಕಿನಿ ಮತ್ತು ಅನಸ್ತೇಷಿಯಾ ರೇಡ್ನಿಕಾ ಅವರನ್ನು 11–9, 11–5, 11–7ರಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಅವರು ಮಲೇಷ್ಯಾದ ಚಾನ್ ಪೆಂಗ್‌ ಸೂನ್‌ ಮತ್ತು ಚೀ ಯೀ ಸೀ ಜೋಡಿಯನ್ನು ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT