ಬೇಟಿ ಬಚಾವೋ, ಬೇಟಿ ಪಡಾವೋ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ‘ರಾಣಿ ರುದ್ರಮ್ಮ ದೇವಿ ಪ್ರಶಸ್ತಿ’ಗೆ, ಸ್ಥಳೀಯ ಸಂಸ್ಥೆಗಳ ವಾರ್ಡ್ಗಳಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸ ಮಾಡಿದವರು ‘ಮಾತಾ ಜೀಜಾಬಾಯಿ ಪ್ರಶಸ್ತಿ’ಗೆ, ಮಕ್ಕಳು ಮತ್ತ ಮಹಿಳೆಯರ ಮಾನಸಿಕ ಆರೋಗ್ಯ ಸುಧಾರಣೆಗಾಗಿ ಕೆಲಸ ಮಾಡಿದವರು ‘ಮಾತಾ ಕನ್ನಗೀ ದೇವಿ ಪ್ರಶಸ್ತಿ’ಗೆ, ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸಿದವರು ‘ದೇವಿ ಅಹಲ್ಯಬಾಯಿ ಹೋಳ್ಕರ್ ಪ್ರಶಸ್ತಿ’ಗೆ, ಸಬಲೀಕರಣಕ್ಕೆ ಕೆಲಸ ಮಾಡಿದವರು ‘ರಾಣಿ ಗಾಯದಿನಲ್ಲಿ ಜಿಲ್ಲಿಂಗ್ ಪ್ರಶಸ್ತಿ’ಗೆ ಅರ್ಜಿ ಸಲ್ಲಿಸಬಹುದು. ಆ.15ರೊಳಗೆ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬೇಕು. ದೂರವಾಣಿ 080–26578688