ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಮೀರಾ ಮುಂದು: ಕೋವಿಂದ್‌ ಗಳಿಸಿದ್ದು ಕೇವಲ 56 ಮತ

Last Updated 21 ಜುಲೈ 2017, 5:40 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ವಿಧಾನಸಭೆಯ 224 ಸದಸ್ಯರ ಪೈಕಿ 222 ಸದಸ್ಯರು ಜುಲೈ 17ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದು, ಕೋವಿಂದ್‌ ಅವರಿಗೆ 56, ಪ್ರತಿ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದ ಮೀರಾ ಕುಮಾರ್‌ ಅವರಿಗೆ 163 ಮತಗಳು ದೊರೆತಿವೆ. ಮೂರು ಮತಗಳು ತಿರಸ್ಕೃತಗೊಂಡಿವೆ.

ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು ಸ್ಪೀಕರ್‌ ಒಳಗೊಂಡಂತೆ 124 ಸದಸ್ಯಬಲ ಹೊಂದಿದ್ದು, ಜೆಡಿಎಸ್‌ 40, ಬಿಜೆಪಿ 44, ಕೆಜೆಪಿ 2, ಬಿಎಸ್‌ಆರ್‌ಸಿ 3, ಕರ್ನಾಟಕ ಸರ್ವೋದಯ ಪಕ್ಷ 1, ಕರ್ನಾಟಕ ಮಕ್ಕಳ ಪಕ್ಷ 1, ಪಕ್ಷೇತರರು 9 ಸ್ಥಾನ ಹೊಂದಿದ್ದಾರೆ. ಲೋಕಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಕಣಕ್ಕಿಳಿಸಿದ್ದ ಅಭ್ಯರ್ಥಿ ಮೀರಾಕುಮಾರ್‌ಗೆ ಜೆಡಿಎಸ್‌ ಶಾಸಕರು ಮತ ನೀಡಿದ್ದಾರೆ.

ಬಿಜೆಪಿ 44, ಬಿಎಸ್‌ಆರ್‌ಸಿ ಪಕ್ಷದ 3 ಹಾಗೂ ಕೆಜೆಪಿಯ ಒಬ್ಬ ಶಾಸಕ ಕೋವಿಂದ್‌ ಅವರಿಗೆ ಮತ ಹಾಕಿದ್ದಾರೆ. ಮೂರು ಮತಗಳು ತಿರಸ್ಕೃತವಾಗಿದ್ದು, ಪಕ್ಷಗಳ ಬಲಾಬಲ ಗಮನಿಸಿದಾಗ ಹಾಗೂ ನಿರೀಕ್ಷಿಸಲಾಗಿದ್ದ ಮತಗಳಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಅಡ್ಡ ಮತದಾನ ಆಗಿರುವ ಶಂಕೆ ಇದೆ.

ಕರ್ನಾಟಕದ ಶಾಸಕರ ಪ್ರತಿ ಮತದ ಮೌಲ್ಯ 131. ಮೀರಾಕುಮಾರ್‌ ಅವರಿಗೆ ದೊರೆತಿರುವ ಮತಗಳ ಮೌಲ್ಯ 21,353. ಕೋವಿಂದ್‌ ಅವರಿಗೆ ದೊರೆತಿರುವ ಮತಗಳ ಮೌಲ್ಯ 7,336. ತಿರಸ್ಕೃತ ಮತಗಳ ಮೌಲ್ಯ 393.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT