ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಗೈರು: ಮಕ್ಕಳ ಪ್ರತಿಭಟನೆ

Last Updated 21 ಜುಲೈ 2017, 6:03 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಇಂಚಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರು ಸರಿಯಾಗಿ ಬರದ ಕಾರಣ ಶಾಲಾ ಮಕ್ಕಳು ಗುರುವಾರ ತರಗತಿ ತೊರೆದು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಶಾಲೆಗೆ ಶಿಕ್ಷಕರು ಸರಿಯಾಗಿ ಬರುವುದಿಲ್ಲ. ಗುರುವಾರ ಶಾಲೆಯಲ್ಲಿ ಪ್ರಾರ್ಥನೆ ನಡೆಯುವಾಗ ಶಿಕ್ಷಕರು ಇರಲಿಲ ಎಂದು ಗ್ರಾಮಸ್ಥರಾದ ಅರವಿಂದ ವಾಲೀಕಾರ, ಪರಮೇಶ್ವರ ಯರಗಲ್‌ ತಿಳಿಸಿದರು.

ಪ್ರತಿಭಟನೆ ವಿಷಯ ಕೇಳಿ ಶಿಕ್ಷಕರು ಓಡಿ ಬಂದರು. ಇನ್ನೊಂದೆಡೆ ತಹಶೀಲ್ದಾರ್ ಕಚೇರಿಯಲ್ಲಿರುವ ಸಹಾಯಕ ಆಯುಕ್ತ ರಾಚಪ್ಪ ಅವರು ಮಕ್ಕಳಿಂದ ವಿವರ ಪಡೆದರು. ‘ಯಾರು ಶಾಲೆಗೆ ಸರಿಯಾಗಿ ಬರುವದಿಲ್ಲ. ಅವರ ಯಾದಿ ಕೊಡಿ. ಕ್ರಮ ಕೈಗೊಳ್ಳುತ್ತೇನೆ’ ಎಂದು ತಹಶೀಲ್ದಾರ್‌ಗೆ ತಿಳಿಸಿದರು.

ಗ್ರಾಮಸ್ಥರಾದ ಸಿದ್ದು ತನಶಾಳ, ಗಂಗಪ್ಪ ಜೇವರ್ಗಿ, ಕಮಲಾಕರ ರೂಗಿ, ಶರಣಬಸು ಹಿರೇಮಠ, ಶ್ರೀಮಂತ ಕಲ್ಲೂರ ಇದ್ದರು. ಸಹಾಯಕ ಆಯುಕ್ತ ಭೇಟಿ: ಪ್ರತಿಭಟನಾ ನಿರತ ಮಕ್ಕಳೊಂದಿಗೆ ಸಹಾಯಕ ಆಯುಕ್ತ ರಾಚಪ್ಪ ಹಾಗೂ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ, ಉಪ ತಹಶೀಲ್ದಾರ ಪಿ.ಜಿ.ಪವಾರ್, ಹಿಂಚಗೇರಿ ಗ್ರಾಮಕ್ಕೆ ಭೇಟಿ ನೀಡಿ ಶಿಕ್ಷಕರು ಮತ್ತು ಪಾಲಕರು ಮಕ್ಕಳೊಂದಿಗೆ ಚರ್ಚೆ ಮಾಡಿ ಸಮಸ್ಯೆ ಬಗೆ ಹರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಅವರು ಸಹಾಯಕ ಆಯುಕ್ತರಿಗೆ ಶಾಲೆ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT