ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ರವರೆಗೆ ಮೆಸ್ಕಾಂ ಆನ್‌ಲೈನ್‌ ಸೇವೆ ಲಭ್ಯವಿಲ್ಲ

Last Updated 21 ಜುಲೈ 2017, 6:19 IST
ಅಕ್ಷರ ಗಾತ್ರ

ಮಂಗಳೂರು: ಮೆಸ್ಕಾಂನಲ್ಲಿ ಚಾಲ್ತಿಯಲ್ಲಿರುವ ಆರ್.ಎ.ಪಿ.ಡಿ.ಆರ್.ಪಿ ಅಪ್ಲಿಕೇಶನ್‌ಗೆ ಸಂಬಂಧಿಸಿದ ಡಾಟಾ ಬ್ಯಾಕ್ ಅಪ್ ಚಟುವಟಿಕೆಗಳನ್ನು ಇದೇ 21ರ 6 ಗಂಟೆ ಯಿಂದ 24ರ ಬೆಳಿಗ್ಗೆ 9 ಗಂಟೆಯವರೆಗೆ ನಡೆಸಲಾಗುತ್ತಿದ್ದು, ಈ ಅವಧಿಯಲ್ಲಿ ಆರ್.ಎ.ಪಿ.ಡಿ.ಆರ್.ಪಿ ನಗರಗಳಲ್ಲಿ ಬಿಲ್ ಪಾವತಿ ಮತ್ತು ಪರಿಶೀಲನೆ, ಹೊಸ ಅರ್ಜಿ ನೋಂದಣಿ ಪ್ರಕ್ರಿಯೆ ಇತ್ಯಾದಿ ಆನ್‌ಲೈನ್‌ ಸೇವೆಗಳು ಲಭ್ಯವಿರುವುದಿಲ್ಲ. 

ಈ ಅವಧಿಯಲ್ಲಿ ಆನ್‌ಲೈನ್ ಬಿಲ್ ಪಾವತಿ www. mescom. org.in, ಪೇಟಿಯಂ ಮತ್ತು ಕರ್ನಾಟಕ ಮೊಬೈಲ್ ಒನ್ ಅಪ್ಲಿಕೇಶನ್‌ ಗಳ ಮೂಲಕವೂ ಮಾಡಲು ಸಾಧ್ಯವಿಲ್ಲ.

ಮೆಸ್ಕಾಂ ವ್ಯಾಪ್ತಿ ಅತ್ತಾವರ, ನೆಹರು ಮೈದಾನ (ಕುಲಶೇಖರ), ಚಿಕ್ಕಮಗಳೂರು ನಗರ ಉಪವಿಭಾಗ ವ್ಯಾಪ್ತಿಗಳಲ್ಲಿ  ಆನ್‌ಲೈನ್ ಸೇವೆಯು ಲಭ್ಯವಿರುವುದಿಲ್ಲ, ಆಫ್‌ಲೈನ್ ಬಿಲ್ ಪಾವತಿ ವ್ಯವಸ್ಥೆ ನಗದು ಮುಂಗಟ್ಟೆ, ಎಟಿಪಿ, ಮಂಗ ಳೂರು ಒನ್,  ಅಂಚೆ ಕಚೇರಿ ಹಾಗೂ ಇ.ಸಿ.ಎಸ್. ಮೂಲಕ ಬಿಲ್ ಪಾವತಿಸ ಬಹುದಾಗಿದೆ ಮೆಸ್ಕಾಂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT