ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಒಂದೇ ಧ್ವಜ ಇರಬೇಕು: ಸಿ.ಟಿ. ರವಿ

Last Updated 21 ಜುಲೈ 2017, 6:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೇಶಕ್ಕೆ ಒಂದೇ ಧ್ವಜ ಇರಬೇಕು. ಹಲವು ಧ್ವಜಗಳಿಂದ ದೇಶದ ಏಕತೆಗೆ ಧಕ್ಕೆ ಆಗು­ತ್ತದೆ. ರಾಜ್ಯಕ್ಕೆ ‘ನಾಡಧ್ವಜ’ ಹೊಂದುವುದು ರಾಜಕೀಯ ಹಿತಾಸಕ್ತಿಯ ತೀರ್ಮಾನ ಆಗಬಾರದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ದೇಶದ ಏಕತೆಗೆ ಧಕ್ಕೆ ತರುವಂತದ್ದು ಆಗಬಾರದು ಎಂಬ ಆಶಯ ಪಕ್ಷ­ದ್ದಾಗಿದೆ. ಪ್ರತ್ಯೇಕ ನಾಡಧ್ವಜ ಹೊಂದು­ವು­ದರಿಂದ ಮುಂದಿನ ದಿನಗಳಲ್ಲಿ ರಾಷ್ಟ್ರದ ಏಕತೆಗೆ ಧಕ್ಕೆ­ಯುಂಟು ಮಾಡಬಹುದು ಎಂಬ ಆತಂಕವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ವ್ಯಕ್ತಪಡಿಸಿದರು.

ಕಾರಾಗೃಹದಲ್ಲಿ ನಡೆದಿರುವ ಅಕ್ರಮಗಳ ಕುರಿತು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರಾಜ್ಯ ಸರ್ಕಾರವು ನಾಡಧ್ವಜ ವಿಷಯವನ್ನು ಬಳಸಿಕೊಳ್ಳು­ತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರವು ಜಾತಿ, ಸಮುದಾಯಗಳನ್ನು ವಿಭಜನೆ ಮಾಡುವ ನೀತಿ ಅನುಸರಿಸುತ್ತಿದೆ.

ಸಾಲಮನ್ನಾ ವಿಷಯದಲ್ಲಿ ರೈತರನ್ನು ಒಡೆಯುವ ಮೂಲಕ ಮುಖ್ಯಮಂತ್ರಿ ಅವರು ಕ್ರಿಮಿನಲ್‌ ಬುದ್ಧಿ ಪ್ರದರ್ಶಿಸುತ್ತಿದ್ದಾರೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿರುವ ಪಂಜಾಬ್‌ನಲ್ಲಿ ಆಯಾ ರಾಜ್ಯ ಸರ್ಕಾರಗಳೇ ಸಹಕಾರ ಬ್ಯಾಂಕ್‌ಗಳ ಜತೆಗೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿರುವ ಸಾಲವನ್ನೂ ಮನ್ನಾ ಮಾಡಿವೆ. ರಾಜ್ಯದಲ್ಲಿ ಮಾತ್ರ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಪಂಡಿತ ದೀನ ದಯಾಳ್‌ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಬೂತ್‌ ಮಟ್ಟದಲ್ಲಿ ಪಕ್ಷ ವಿಸ್ತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. 20 ಸಾವಿರ ಕಾರ್ಯಕರ್ತರು ವಿಸ್ತಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೇ 25 ರಂದು ನಡೆಯುವ ಸಮಾ­ರೋಪ ಸಮಾರಂಭದಲ್ಲಿ ಪ್ರತಿ ಕಾರ್ಯಕರ್ತರಿಗೂ ಎರಡು ಒಳ್ಳೆಯ ಕೆಲಸ ಮಾಡುವ ಸಂಕಲ್ಪ ಮಾಡಿಸಲಾಗುವುದು. ಆ ಮೂಲಕ ರಾಜಕೀಯ ಕಾರ್ಯಕರ್ತರಿಗೂ ಸಮಾಜ ಪರಿವರ್ತನೆ ದೀಕ್ಷೆ ಕೊಡಲಾಗುತ್ತದೆ ಎಂದರು.

‘ಹಣವಿಲ್ಲದೇ ರಾಜಕೀಯ ನಡೆಯಲ್ಲ. ಹಣವು ವಾಹನವೊಂದಕ್ಕೆ ಡೀಸೆಲ್‌ ಇದ್ದ ಹಾಗೆ. ರಾಜಕೀಯಕ್ಕೆ ಹಣ ಬೇಕು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾನದಂಡದ ಬಗ್ಗೆ ಗುರುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಉತ್ತಮ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಚುನಾವಣೆಯಲ್ಲಿ ಹಣಕ್ಕಿರುವ ಮಹತ್ವವನ್ನೂ ಗಮನದಲ್ಲಿಟ್ಟುಕೊಳ್ಳಲಾಗುವುದು. ಆದರೆ, ಅದೇ ಪೂರ್ಣ ಪ್ರಮಾಣದ ಮಾನದಂಡವಲ್ಲ’ ಎಂದರು. ಮುಖಂಡರಾದ ಎಸ್‌.ಐ. ಚಿಕ್ಕನಗೌಡರ, ಈರಣ್ಣ ಜಡಿ, ಮಹೇಶ ಟೆಂಗಿನಕಾಯಿ, ಮಹಾನಗರ ಜಿಲ್ಲಾ ಅಧ್ಯಕ್ಷ ನಾಗೇಶ ಕಲಬುರ್ಗಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT