ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ, ಸೌಹಾರ್ದಕ್ಕೆ ಆದ್ಯತೆ ನೀಡಿ

Last Updated 21 ಜುಲೈ 2017, 6:48 IST
ಅಕ್ಷರ ಗಾತ್ರ

ಗಜೇಂದ್ರಗಡ: ಸೇವಾ ಮನೋಭಾವನೆ ಇಟ್ಟುಕೊಂಡು ನಾಲ್ಕು ಜನ ಸ್ನೇಹಿತ ರಿಂದ ಪ್ರಾರಂಭವಾದ ರೋಟರಿ ಸಂಸ್ಥೆ ಇಂದು ಅನೇಕ ದೇಶಗಳಲ್ಲಿ 13 ಲಕ್ಷಕ್ಕೂ ಅಧಿಕ ಸದಸ್ಯರನ್ನೊಳಗೊಂಡು ಸಮಾಜ ಮುಖಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ವೈದ್ಯಕೀಯ ಸಂಘಟನೆ ಅಧ್ಯಕ್ಷ ರಾಜ ಶೇಖರ ಬಳ್ಳಾರಿ ಹೇಳಿದರು.

ಪಟ್ಟಣದ ಜಗದಂಬಾ ಕಲ್ಯಾಣ ಮಂಟಪದಲ್ಲಿ ನಡೆದ ಗಜೇಂದ್ರಗಡ ರೋಟರಿ ಕ್ಲಬ್‌ನ 2017–18ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಈ ಸಂಸ್ಥೆ ಅಂತರರಾಷ್ಟ್ರೀಯ ಸೇವಾ ಸಂಸ್ಥೆ ಆಗಿದ್ದು ಮಾನವಿಯ ಸೇವೆಗಳನ್ನು ಒದ ಗಿಸಲು, ಎಲ್ಲ ವೃತ್ತಿಗಳಲ್ಲಿ ಹೆಚ್ಚಿನ ನೈತಿಕ ಗುಣಮಟ್ಟವನ್ನು ಪ್ರೋತ್ಸಾಹಿಸಲು, ವಿಶ್ವದಾದ್ಯಂತ ಸೌಹಾರ್ದ ಮತ್ತು ಶಾಂತಿ ಹೆಚ್ಚಿಸುವುದು, ವ್ಯಾಪಾರ ಮತ್ತು ವೃತ್ತಿ ಪರ ನಾಯಕರನ್ನು ಒಗ್ಗೂಡಿಸುವುದು ಇದರ ಉದ್ದೇಶವಾಗಿದೆ.

ಜನಾಂಗ, ಬಣ್ಣ, ಮತ, ಧರ್ಮ, ಲಿಂಗ ಅಥವಾ ರಾಜಕೀಯ ಆದ್ಯತೆಗಳಿಲ್ಲದೆ ಎಲ್ಲ ಜನ ರಿಗೂ ತೆರೆದಿರುವ ರಾಜಕೀಯೇತರ ಸಂಘಟನೆ ಆಗಿದೆ. ಈ ಸಂಸ್ಥೆ ಫೆ. 23 ರಂದು ಸ್ಥಾಪನೆಯಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ ಎಂದರು.

ಗಜೇಂದ್ರಗಡ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ರಮೇಶ ಮಾರನಬಸರಿ ಮಾತನಾಡಿ,  ನಮ್ಮ ಸಂಸ್ಥೆ ವತಿಯಿಂದ ಪಟ್ಟಣದಲ್ಲಿ ಅನೇಕ ರಕ್ತದಾನ, ಸ್ಥಳೀಯ ಮಟ್ಟದ ನೇತ್ರ ತಪಾಸಣಾ ಶಿಬಿರಗಳನ್ನ ಮಾಡಿದ್ದೇವೆ. ಸಂಸ್ಥೆ ವತಿಯಿಂದ 2003 ರಲ್ಲಿ ಚಿಕ್ಕ ಮಕ್ಕಳ ಶಾಲೆ ಪ್ರಾರಂಭಿಸಿ ಮೊದಲು 30–40 ಮಕ್ಕಳಿದ್ದ ಶಾಲೆ ಇಂದು 400 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆ ವತಿಯಿಂದ ಬಡವರಿಗೆ ಹೃದಯ ಸಂಭಂದಿ ಕಾಯಿಲೆಗಳ ತಪಾಸಣೆ ಮತ್ತು ಹೃದಯ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಹಮ್ಮಿ ಕೊಳ್ಳಲು ಉದ್ದೇಶಿಸಿದ್ದೇವೆ ಎಂದರು.

ವಿಜಯ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 2017–18ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಎಚ್.ಎನ್.ನಾಯಕರ ಅಧ್ಯಕ್ಷರಾಗಿ, ಅಶೋಕ ಮುದೇನೂರ ಕಾರ್ಯದರ್ಶಿ ಯಾಗಿ, ವಿಶಾಲ ಕಡ್ಡಿ ಖಜಾಂಚಿಯಾಗಿ ಆಯ್ಕೆಯಾದರು. ಮಲ್ಲಿಕಾರ್ಜುನ ಐಲಿ, ಬಾಬು ನಾವಡೆ, ಆರ್.ಎಂ.ರಾಯಭಾಗಿ, ಮುತ್ತಣ್ಣ ಮೆಣಸಿನಕಾಯಿ, ಡಾ.ಟಿ.ಎಚ್. ಶಂಕರ, ಜಗದೀಶ ಕನಕೇರಿ, ರೀತು ಮೆಹರವಾಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT