ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ದಾಣ, ಡಿಪೊಗಳಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ

Last Updated 21 ಜುಲೈ 2017, 8:40 IST
ಅಕ್ಷರ ಗಾತ್ರ

ಬಾಗಲಕೋಟೆ: ಪ್ರಯಾಣಿಕರ ಸುರಕ್ಷತೆಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್‌ಗಳು, ಡಿಪೊ ಹಾಗೂ ಬಸ್ ನಿಲ್ದಾಣಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಸಂಸ್ಥೆಯ ಆಡಳಿತ ಮುಂದಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಸ್‌ ನಿಲ್ದಾಣದಲ್ಲಿ ಉಡುಪಿ ಮೂಲದ ಬಾಲಕಿಯ ಮೇಲೆ  ಕೆಲವು ಸಿಬ್ಬಂದಿ ನಡೆಸಿದ ಲೈಂಗಿಕ ದೌರ್ಜನ್ಯದ ನಂತರ ಎಚ್ಚೆತ್ತುಕೊಂಡಿರುವ ಸಂಸ್ಥೆಯ ಆಡಳಿತ ಮಂಡಳಿ ಈ ಕ್ರಮಕ್ಕೆ ನಿರ್ಧರಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಂಸ್ಥೆಯಡಿ ಕಾರ್ಯ ನಿರ್ವಹಿಸುವ 49 ಡಿಪೊ, 164 ಬಸ್‌ ನಿಲ್ದಾಣ ಹಾಗೂ 5,056 ಬಸ್‌ಗಳಲ್ಲಿ ಕ್ಯಾಮೆರಾ ಕಣ್ಗಾವಲು ಇರಲಿದೆ.

ಸುರಕ್ಷತೆಗೆ ಒತ್ತು: ‘ಪ್ರಯಾಣಿಕರ ಸುರಕ್ಷತೆ ನಿಟ್ಟಿನಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಸೇರಿದಂತೆ ಕೆಲವು ತಾಂತ್ರಿಕತೆ ಅಳವಡಿಕೆಗೆ ಮುಂದಾಗಿದ್ದೇವೆ. ಇದಕ್ಕೆ ಹೆಚ್ಚಿನ ಹಣಕಾಸು ಅಗತ್ಯವಿದೆ. ಅಗತ್ಯ ಸಂಪನ್ಮೂಲ ಕ್ರೋಡೀಕರಿಸಿ ಹಂತಹಂತ ವಾಗಿ ಅನುಷ್ಠಾನ ಮಾಡಲಿದ್ದೇವೆ’ ಎಂದು ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿಂಬದಿ ಕ್ಯಾಮೆರಾ ಅಳವಡಿಕೆ: ‘ಸಂಸ್ಥೆ ಖರೀದಿಸಿರುವ ಹೊಸ ಬಸ್‌ಗಳಲ್ಲಿ ಮಾತ್ರ ಹಿಂಬದಿ ಕ್ಯಾಮೆರಾ ವ್ಯವಸ್ಥೆ ಇದೆ. ಅದನ್ನು ಹಳೆಯ ಬಸ್‌ಗಳಿಗೂ ವಿಸ್ತರಿಸ ಲಾಗುವುದು. ಇದರಿಂದ ಸುರಕ್ಷಿತ ಚಾಲನೆಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ವೈಫೈ ಸೌಲಭ್ಯ, ಸಾಮಾನ್ಯ ಬಸ್‌ಗಳಲ್ಲೂ ಟಿವಿ ವ್ಯವಸ್ಥೆ ಮಾಡಲಾಗುವುದು’ ಎಂದರು.

10 ವರ್ಷ ಹಿಂದೆ: ‘ಪ್ರಯಾಣಿಕರ ಸುರಕ್ಷತೆ ಹಾಗೂ ಸವಲತ್ತುಗಳ ಕಲ್ಪಿಸುವ ವಿಚಾರದಲ್ಲಿ ಕೆಎಸ್‌ಆರ್‌ಟಿಸಿಗೆ ಹೋಲಿಸಿದರೆ ವಾಯವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳು ಕನಿಷ್ಠ 10 ವರ್ಷ ಹಿಂದುಳಿದಿವೆ. ಹಾಗಾಗಿ ಈ ಭಾಗದಲ್ಲಿ ಅಪಘಾತ ಪ್ರಮಾಣವೂ ಹೆಚ್ಚಿದೆ.

ಪ್ರಯಾಣಿಕರ ಸುರಕ್ಷೆಯೂ ಪ್ರಶ್ನೆಯಾಗಿಯೇ ಉಳಿದಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳು ತ್ತಾರೆ.   ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಟ್ರ್ಯಾಪಿಂಗ್ ವ್ಯವಸ್ಥೆ ಅಳವಡಿಕೆಯಿಂದ ಎಷ್ಟು ಗಂಟೆಗೆ ಬಸ್ ನಿಲ್ದಾಣಕ್ಕೆ ಬರಲಿದೆ ಎಂಬುದು ಅಲ್ಲಿ ನಿಖರವಾಗಿ ಗೊತ್ತಾಗುತ್ತದೆ. ಬಸ್‌ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಜೊತೆಗೆ ಪ್ರಯಾಣಿಕರಲ್ಲೂ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಇಲ್ಲಿಯೂ ಆ ಕೆಲಸ ಆಗಬೇಕಿದೆ ಎನ್ನುತ್ತಾರೆ ಅವರು.

ರಾತ್ರಿ ಪಾಳಿಗೆ ನಿಯಂತ್ರಕರು: ರಾಣೆಬೆನ್ನೂರು ಘಟನೆಯನ್ನು ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಎಲ್ಲಾ ಬಸ್ ನಿಲ್ದಾಣಗಳಲ್ಲೂ ಕಡ್ಡಾಯ ವಾಗಿ ಸಂಚಾರ ನಿಯಂತ್ರಕರೊಬ್ಬರನ್ನು ರಾತ್ರಿ ಪಾಳಿಗೆ ನಿಯೋಜಿಸಲು ಸೂಚಿಸ ಲಾಗಿದೆ. ಒಬ್ಬರು ಭದ್ರತಾ ಸಿಬ್ಬಂದಿ ಅವರಿಗೆ ನೆರವಾಗಲಿದ್ದಾರೆ. ರಾತ್ರಿ ಬಸ್‌ಗಳ ಸಂಚಾರ ನಿಯಂತ್ರಣದ ಜೊತೆಗೆ ಬಸ್‌ ನಿಲ್ದಾಣಗಳಲ್ಲಿ ಉಳಿ ಯುವ ಪ್ರಯಾಣಿಕರ ಸುರಕ್ಷತೆಯೂ ಅವರ ಜವಾಬ್ದಾರಿಯಾಗಿದೆ. ಇಲ್ಲಿಯ ವರೆಗೂ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಮಾತ್ರ ರಾತ್ರಿ ಪಾಳಿಗೆ ಸಂಚಾರ ನಿಯಂತ್ರಕರನ್ನು ನಿಯೋಜಿಸಲಾಗುತ್ತಿತ್ತು ಎಂದು ಅವರು ತಿಳಿಸಿದರು.

* * 

ನಿಗಮದ ವ್ಯಾಪ್ತಿಯಲ್ಲಿ ಪ್ರತಿನಿತ್ಯ 22 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಅವರನ್ನು ಸುರಕ್ಷಿತ ವಾಗಿ ಅವರ ಸ್ಥಳಕ್ಕೆ ತಲುಪಿಸುವುದು ನಮ್ಮ ಹೊಣೆ. 
ಸದಾನಂದ ಡಂಗನವರ
ಎನ್‌ಡಬ್ಲುಕೆಆರ್‌ಟಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT