ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಮನಿತ ವರ್ಗಗಳ ಸ್ವಾಭಿಮಾನದ ಪ್ರತೀಕ’

Last Updated 21 ಜುಲೈ 2017, 9:02 IST
ಅಕ್ಷರ ಗಾತ್ರ

ರಾಮನಗರ: ‘ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ವಾಭಿಮಾನದ ಪ್ರತೀಕ. ಸಾಮಾಜಿಕ ಸಮಾನತೆ ಸ್ಥಾಪನೆ ಮಾಡಲು ಬದುಕಿನುದ್ದಕ್ಕೂ ಹೋರಾಟ ಮಾಡಿದ ಮಹಾನ್‌ ಕ್ರಾಂತಿಕಾರಿ’ ಎಂದು ನಗರಸಭೆ ಆಯುಕ್ತ ಕೆ. ಮಾಯಣ್ಣಗೌಡ ಬಣ್ಣಿಸಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ಸಂಜೆ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 126ನೇ ವರ್ಷಾಚರಣೆಯ ಕಾರ್ಯಕ್ರಮ ‘ತಮಗಿದೋ ನಮ್ಮ ಗೌರವ ನಮನ’ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು. ‘ಅಸ್ಪೃಶ್ಯತೆಯಿಂದ ಉಂಟಾ ಗಿದ್ದ ಸಾಮಾಜಿಕ ಅವ್ಯವಸ್ಥೆ ಸರಿಪಡಿಸಲು ಶ್ರಮಿಸಿದ ಮಹಾಮಾನವತಾ ವಾದಿ. ಅಸ್ಪೃಶ್ಯತೆ ಅಪಮಾನದಲ್ಲಿ ಬೇಯುತ್ತಿದ್ದ ದಮನಿತ ವರ್ಗಕ್ಕೆ ಸ್ವಾತಂತ್ರ್ಯ ತಂದು ಕೊಡಲು ಶ್ರಮಿಸಿದರು. ತಮ್ಮ ಜೀವನ ದುದ್ದಕ್ಕೂ ತಾವು ಅನುಭವಿಸಿದ ಅಪಮಾನ- ದೌರ್ಜನ್ಯ ಇಡೀ ಮನುಷ್ಯ ಕುಲಕ್ಕೆ ಉಂಟಾದ ಅವಮಾನವೆಂದು ಪರಿಗಣಿಸಿ, ಅದರ ವಿರುದ್ಧ ಸಮರ ಸಾರಿ ಜಯಗಳಿಸಿದ ಸ್ವಾಭಿಮಾನಿ’ ಎಂದರು.

‘ಅಂಬೇಡ್ಕರ್‌ ಅವರು ಆಲೋಚಿಸದ ವಿಷಯವಿಲ್ಲ, ಗಮನಿಸದ ಸಂಗತಿಯಿಲ್ಲ. ಅವರ ಚಿಂತನೆಗಳು ಸರ್ವ ಜನಾಂಗಗಳ ಅಭಿವೃದ್ಧಿಗೆ ನೆರವಾಗುವ ಮತ್ತು ಸರ್ವ ಕಾಲಕ್ಕೂ ಸಲ್ಲುವ ಸಮರ್ಥ ಸಾಧನಗಳು. ಇವರ ಚಿಂತನೆ ಎಲ್ಲ ಕಾಲಕ್ಕೂ ಪ್ರಸ್ತುತವಾದುದು. ಸಮಾಜ ಕ್ಕೊಂದು ಮಹಾಶಾಪವಾಗಿ ಬಾಧಿ ಸುತ್ತಿರುವ ಜಾತಿಪದ್ಧತಿ ಮತ್ತು ಅದರ ಒಂದು ಭಾಗವಾದ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ‘ವೈಚಾರಿಕ ಆಂದೋಲನ’ ನಡೆಸಿದರು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಬಿ.ಆರ್. ಮಮತಾ ಮಾತನಾಡಿ ‘ಅಂಬೇಡ್ಕರ್ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅಪಾರ ವಿಶ್ವಾಸವಿತ್ತು. ಭಾರತದಲ್ಲಿ ಜಾತೀಯತೆ ವಿನಾಶಗೊಂಡು ವ್ಯಕ್ತಿತ್ವಕ್ಕೆ ಬೆಲೆ ಬರಬೇಕು. ಎಲ್ಲರ ಮತ ಒಂದೇ ಎನ್ನುವ ವ್ಯವಸ್ಥೆಯು ರೂಪುಗೊಳ್ಳಬೇಕು, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆ ಎಲ್ಲರ ಬದುಕಿನ ಭಾಗವಾಗ ಬೇಕು ಎಂಬ ಆಶಯವನ್ನು ಇವರು ಹೊಂದಿದ್ದರು’ ಎಂದು ತಿಳಿಸಿದರು.

ಡಾ.ಬಿ.ಆರ್. ಅಂಬೇಡ್ಕರ್‌ ಯುವ ವೇದಿಕೆ ಅಧ್ಯಕ್ಷ ಶಿವಶಂಕರ್‌ ಮಾತನಾಡಿ ‘ಕಳೆದ 40 ವರ್ಷಗಳ ಹಿಂದೆ ಕರ್ನಾಟಕದಲ್ಲಿ ದಲಿತಪರ ಹೋರಾಟಗಳು ಪ್ರಾರಂಭವಾದವು. ಅಂದಿನಿಂದ ಇಂದಿ ನವರೆಗೂ ಅಂಬೇಡ್ಕರ್ ಅವರ ಆಶಯ ಸಮಾಜದಲ್ಲಿ ಅನುಷ್ಠಾನಗೊಳಿಸಲು ಅನೇಕ ಕಾರ್ಯಕ್ರಮ ಮಾಡಲಾಗುತ್ತಿದೆ. ಇದರಿಂದ ಶತಮಾ ನಗಳ ಕಾಲ ಅವ ಗಣನೆಗೆ ಒಳಗಾಗಿದ್ದ ದಲಿತ ಸಮು ದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಸಿ.ಪಿ. ಶೈಲಜಾ, ಉಪಕಾರ್ಯದರ್ಶಿ ಲತಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಪ್ರಶಾಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ. ರಾಜು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸ್ವಾಮಿ, ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್, ಉಪಾಧ್ಯಕ್ಷೆ ಸಮೀನಾತಾಜ್‌, ಸದಸ್ಯ ಲೋಹಿತ್‌ಬಾಬು, ಮುಖಂಡರಾದ ರಾ.ಸಿ. ದೇವರಾಜು, ಚಲುವರಾಜು, ರಾಂಪುರನಾಗೇಶ್, ವಿ. ಲಿಂಗರಾಜು, ಬಿ. ವಿನಯ್‌್ ಕುಮಾರ್, ವಿ. ಮೋಹನ್‌್ ಕುಮಾರ್, ಎಸ್. ಕುಮಾರ್, ಚಕ್ಕೆರೆ ಲೋಕೇಶ್, ಪಿ. ಸೋಮಶೇಖರ್, ವೆಂಕಟಾಚಲಯ್ಯ, ಗುರುಮಲ್ಲಯ್ಯ, ಕುಂಬಾಪುರಬಾಬು, ವೆಂಕಟಸ್ವಾಮಿ, ಗುಡ್ಡೆವೆಂಕಟೇಶ್ ಇತರರು ಇದ್ದರು.ಮಹೇಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT