ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಸೇನೆಗಳ ಹೋಲಿಕೆ ಹಾಸ್ಯಾಸ್ಪದ: ಟಿಬೆಟ್‌ನಲ್ಲಿ ಶಸ್ತ್ರಾಸ್ತ್ರ ಸಾಗಿಸುತ್ತಿರುವುದು ತೋರಿಕೆಗಲ್ಲ

Last Updated 21 ಜುಲೈ 2017, 14:39 IST
ಅಕ್ಷರ ಗಾತ್ರ

ಬೀಜಿಂಗ್‌: ಭಾರತೀಯ ಸೇನೆಯನ್ನು ಚೀನಾ ಸೇನೆಯ ಜತೆಗೆ ಹೋಲಿಸುವುದು ಹಾಸ್ಯಾಸ್ಪದ ಎಂದು ಚೀನಾದ ದಿನ ಪತ್ರಿಕೆ ‘ದಿ ಗ್ಲೋಬಲ್‌ ಟೈಮ್ಸ್‌’ ವರದಿ ಮಾಡಿದೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತಿದ್ದಾರೆ. ವಿಶ್ವದ ಹಲವು ದೇಶಗಳು ತಮಗೆ ಬೆಂಬಲ ನೀಡುತ್ತವೆ ಎಂದು ಸಂಸತ್ತಿನಲ್ಲಿ ಮಾತನಾಡುತ್ತಿದ್ದಾರೆ. ಭಾರತದ ಉದ್ದೇಶ ಚೀನಾ ಭೂಪ್ರದೇಶವನ್ನು ಆತಿಕ್ರಮಿಸುವುದೇ ಆಗಿದೆ. ಅದು ನೀಡುತ್ತಿರುವ ಪ್ರಚೋದನೆ ಅಂತರರಾಷ್ಟ್ರೀಯ ಸಮುದಾಯದ ಗಮನಕ್ಕೂ ಬಂದಿದ್ದು, ಯಾವ ದೇಶವೂ ಭಾರತಕ್ಕೆ ಬೆಂಬಲ ನೀಡುವುದಿಲ್ಲ’ ಎಂದು ತನ್ನ ವರದಿಯಲ್ಲಿ ಅದು ಉಲ್ಲೇಖಿಸಿದೆ.

‘ಭಾರತ ಚೀನಾದ ತಾಳ್ಮೆ ಪರೀಕ್ಷಿಸುತ್ತಿದೆ. ಒಂದು ವೇಳೆ ದೋಕಲಾನಿಂದ ತನ್ನ ಸೇನೆಯನ್ನು ವಾಪಸ್ಸು ಕರೆಯಿಸಿಕೊಳ್ಳದಿದ್ದರೆ ಯುದ್ಧಕ್ಕೆ ಸಿದ್ಧವಾಗಬೇಕಾಗುತ್ತದೆ’ ಎಂದು ಈ ರೀತಿ ಬರೆದುಕೊಂಡಿದೆ.

‍‍‍‍‍‍‘ಟಿಬೆಟ್‌ನಲ್ಲಿ ನಾವು ಶಸ್ತ್ರಾಸ್ತ್ರ ಸಾಗಿಸುತ್ತಿರುವುದು ಹಾಗೂ ಸೇನಾ ಕವಾಯತು ನಡೆಸುತ್ತಿರುವುದು ಕೇವಲ ತೋರಿಸಿಕೊಳ್ಳುವುದಕ್ಕಲ್ಲ’ ಎಂದೂ ಹೇಳಿರುವ ‘ಟೈಮ್ಸ್‌’, ‘ಭಾರತ ಇದೇ ನಡೆಯನ್ನು ಮುಂದುವರಿಸಿದರೆ ಯುದ್ಧ ಸಂಭವಿಸಲಿದೆ. ಯುದ್ಧದಲ್ಲಿ ಸೋತು ತನ್ನ ಸ್ವಂತ ಭೂಪ್ರದೇಶವನ್ನೂ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದೆ.

[related]

‘ಭಾರತೀಯ ಸೇನೆಯ ಸಾಮರ್ಥ್ಯ ಚೀನಾ ಸೇನೆಗಿಂತ ಬಹಳಷ್ಟು ಹಿಂದುಳಿದಿದ್ದು, ಯುದ್ಧವನ್ನು ಬಯಸುವುದಾದರೆ ಭಾರತಕ್ಕೆ ಸೋಲು ಖಂಡಿತ’ ಎಂದು ಬರೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT