ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಮಗು ದತ್ತು ಸ್ವೀಕರಿಸಿದ ಬಾಲಿವುಡ್ ನಟಿ ಸನ್ನಿ ಲಿಯೋನ್

Last Updated 21 ಜುಲೈ 2017, 18:37 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಹಾಗೂ ಅವರ ಪತಿ ಡೇನಿಯಲ್‌ ವೆಬರ್‌ ಹೆಣ್ಣುಮಗುವನ್ನು ದತ್ತು ಸ್ವೀಕರಿಸಿದ್ದಾರೆ.

ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ  21 ತಿಂಗಳ ಮಗುವನ್ನು ದತ್ತು ಸ್ವೀಕರಿಸಿರುವ ದಂಪತಿ, ನಿಶಾ ಕೌರ್‌ ವೆಬರ್‌ ಎಂದು ನಾಮಕರಣ ಮಾಡಿದ್ದಾರೆ.

ಮೂಲತಃ ಕರಣ್‌ಜಿತ್‌ ಕೌರ್‌ ವೊಹ್ರಾ  ಹೆಸರಿನ ಈ ಮಗುವಿನ ಜತೆಗೆ ದಂಪತಿ ಇರುವ ಚಿತ್ರ ಟ್ವಿಟ್ಟರ್‌ನಲ್ಲಿ ವೈರಲ್‌ ಆಗಿದೆ. ಸಾಕಷ್ಟು ಜನರು ದಂಪತಿಗೆ ಅಭಿನಂದನೆ ಸಲ್ಲಿಸಿ ಸಂದೇಶ ಕಳುಹಿಸಿದ್ದಾರೆ.

‘ನಿಮ್ಮೆಲ್ಲರ ಪ್ರೀತಿಯ ಸಂದೇಶ, ಬೆಂಬಲಕ್ಕೆ ಧನ್ಯವಾದಗಳು’ ಎಂದು ಸನ್ನಿ ಟ್ವೀಟ್‌ ಮಾಡಿದ್ದಾರೆ.

ನಟಿ ಶೆರ್ಲಿನ್‌ ಚೋಪ್ರಾ ಮೊದಲಿಗೆ ಟ್ವೀಟ್‌ ಮಾಡುವ ಮೂಲಕ ದತ್ತು ವಿಷಯ ದೃಢಪಡಿಸಿದ್ದಾರೆ.

‘ಪುಟ್ಟ ದೇವತೆ ನಿಶಾ ಕೌರ್‌ ವೆಬರ್‌ಳನ್ನು ತಮ್ಮ ಜೀವನಕ್ಕೆ ಸ್ವಾಗತಿಸಿರುವ ಸನ್ನಿ ಲಿಯೋನ್‌ ಹಾಗೂ ಡೇನಿಯಲ್‌ ವೆಬರ್‌ಗಾಗಿ ಸಂತಸ ಪಡುತ್ತೇನೆ’ ಎಂದು ಶೆರ್ಲಿನ್‌ ಚೋಪ್ರಾ ಟ್ವೀಟ್‌ ಮಾಡಿದ್ದಾರೆ.

ಲಾತೂರ್‌ನವರಾಗಿರುವ ನಟ ರಿತೇಶ್‌ ದೇಶ್‌ಮುಖ್‌ ‘ನಿಶಾ ಕೌರ್‌ ಮುದ್ದಾಗಿದ್ದಾಳೆ. ಅವಳ ಮತ್ತು ನನ್ನ ನಡುವೆ ಒಂದು ಸಮಾನ ಅಂಶವಿದೆ. ನಮ್ಮಿಬ್ಬರ ಬೇರು ಲಾತೂರ್‌’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT