ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿಯಲ್ಲಿ ಅಮೀರ್

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

‘ಥಗ್ಸ್‌ ಆಫ್ ಹಿಂದೊಸ್ತಾನ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಅಮೀರ್‌ ಖಾನ್ ಸ್ಪಲ್ಪ ವಿರಾಮ ತೆಗೆದುಕೊಂಡು ಇಟಲಿ ಪ್ರವಾಸ ಮಾಡುತ್ತಿದ್ದಾರೆ. ಪತ್ನಿ ಕಿರಣ್ ರಾವ್ ಹಾಗೂ ಪುತ್ರ ಆಜಾದ್ ರಾವ್ ಖಾನ್ ಜೊತೆ ಇಟಲಿ ಬೀದಿಗಳಲ್ಲಿ ರಸ್ತೆಯಲ್ಲಿ ಮಲಗಿಕೊಂಡಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರೋಮ್‌ ನಗರದಲ್ಲಿರುವ ಅಮೀರ್ ಕುಟುಂಬ, ಅಕಾಡೆಮಿಯ ಗ್ಯಾಲರಿ, ತೀಸಾ ಗೋಪುರದ ಬಳಿ ಅಡ್ಡಾಡಿ ಅಲ್ಲಿ ತೆಗೆಸಿಕೊಂಡ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ. ಟೆನುಟಾ ಕ್ಯಾಸನೋವಾ ಮತ್ತು ಸೇಂಟ್ ಅಗ್ನೆಸ್ ವೈನ್ ತಯಾರಿಕಾ ಮನೆ ಮತ್ತು ತೋಟಗಳಿಗೂ ಭೇಟಿ ನೀಡಲಿದ್ದಾರೆ.

ಅಮೀರ್ ತಾನು ಮಾಡುವ ಪ್ರತಿ ಸಿನಿಮಾದಲ್ಲೂ ಹೊಸ ಪ್ರಯೋಗವನ್ನು ಮಾಡುತ್ತಾ ಬಂದಿದ್ದಾರೆ.

ಈಚೆಗೆ ‘ಥಗ್ಸ್ ಆಪ್ ಹಿಂದೊಸ್ತಾನ್’ ಸಿನಿಮಾಗಾಗಿ ಕಿವಿ, ಮೂಗು ಚುಚ್ಚಿಸಿಕೊಂಡು ಸುದ್ದಿ ಮಾಡಿದ್ದರು. ಈ ಸಿನಿಮಾಗೆ ತಯಾರಾಗಿರುವ ಮಾದರಿಯಲ್ಲೇ ಇಟಲಿಯಲ್ಲಿ ಕಿವಿ, ಮೂಗಿನ ನತ್ತಿನೊಂದಿಗೆ ಅವರು ಸುತ್ತಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT