ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಹೆಚ್ಚಳ : 10 ರಾಷ್ಟ್ರಗಳಲ್ಲಿ ಶೇ 95 ರಷ್ಟು

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಏಷ್ಯಾ ಹಾಗೂ ಪೆಸಿಫಿಕ್‌ ಪ್ರಾಂತ್ಯದ 10 ರಾಷ್ಟ್ರಗಳ ಪೈಕಿ ಚೀನಾ, ಭಾರತ ಹಾಗೂ ಪಾಕಿಸ್ತಾನದಲ್ಲಿ ಶೇಕಡಾ 95ರಷ್ಟು ಹೊಸತಾಗಿ ಎಚ್‌ಐವಿ ಸೋಂಕಿತರು ಇರುವುದು 2016ನೇ ಸಾಲಿನ ವಿಶ್ವಸಂಸ್ಥೆ ಬಿಡುಗಡೆಗೊಳಿಸಿದ ವರದಿಯಲ್ಲಿ ಕಂಡುಬಂದಿದೆ.

ಏಡ್ಸ್ ನಿರ್ಮೂಲನೆಗೆ ಹೋರಾಟ ಕೈಗೊಂಡ ನಂತರ ಇದೇ ಮೊದಲ ಬಾರಿಗೆ ಎಚ್‌ಐವಿ ಸೋಂಕಿತರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದೇ ರೀತಿ ಏಡ್ಸ್‌ ಸಂಬಂಧಿತ ಸಾವುಗಳಲ್ಲಿ 2005ಕ್ಕೆ ಹೋಲಿಸಿದರೆ ಅರ್ಧಕ್ಕಿಳಿದಿದೆ ಎಂದು ವಿಶ್ವಸಂಸ್ಥೆಯ ‘ಎಚ್‌ಐವಿ/ಏಡ್ಸ್‌, ವಿಶ್ವಸಂಸ್ಥೆ ಏಡ್ಸ್‌ ಕಾರ್ಯಕ್ರಮ ಹಾಗೂ ಏಡ್ಸ್‌ ನಿರ್ಮೂಲನೆ’ವರದಿಯಲ್ಲಿ ಕಂಡುಬಂದಿದೆ.

2016ರಲ್ಲಿ ಏಷ್ಯಾ ಹಾಗೂ ಪೆಸಿಫಿಕ್‌ ಭಾಗದ ಭಾರತ, ಚೀನಾ, ಇಂಡೊನೇಷ್ಯಾ, ಪಾಕಿಸ್ತಾನ, ವಿಯೆಟ್ನಾಂ, ಮ್ಯಾನ್ಮಾರ್‌, ಪಪುವಾ ಗಿಯೆನ್ನಾ, ಫಿಲಿಪ್ಪೀನ್ಸ್‌, ಥ್ಯಾಲ್ಯಾಂಡ್‌ ಹಾಗೂ ಮಲೇಷ್ಯಾದಲ್ಲಿ ಶೇ 95ರಷ್ಟು ಎಚ್‌ಐವಿ ಸೋಂಕಿನ ಪ್ರಕರಣಗಳು ದಾಖಲಾಗಿವೆ ಎಂದು ವರದಿಯು ತಿಳಿಸಿದೆ.

ಎಚ್‌ಐವಿ ಸೋಂಕಿಗೆ ತುತ್ತಾಗಿರುವ ಶೇ 90 ರಷ್ಟು ಮಂದಿ ತಮ್ಮ ಸ್ಥಿತಿಗತಿ ಬಗ್ಗೆ ಅರಿವು ಹೊಂದಿದ್ದು, ಅಷ್ಟೇ ಮಂದಿ ಕೂಡ ಆಂಟಿರೆಟ್ರೋವೈರಲ್‌ ಥೆರಪಿ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಆರು ವರ್ಷದಲ್ಲಿ ಏಡ್ಸ್‌ ಸೋಂಕಿತರ ಪ್ರಮಾಣದಲ್ಲೂ ಶೇ 13ರಷ್ಟು ಇಳಿಕೆಯಾಗಿದೆ ಎಂದು ವರದಿಯೂ ತಿಳಿಸಿದೆ.

ಭಾರತೀಯರಲ್ಲೂ ಅರಿವು: ಭಾರತದ 26  ನಗರದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಶೇ 41ರಷ್ಟು ಮಂದಿ ಎಚ್‌ಐವಿ ಸೋಂಕಿನ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಪೈಕಿ ಶೇ 52 ಮಂದಿ ಆಂಟಿರೆಟ್ರೋವೈರಲ್‌ ಥೆರಪಿ ಪಡೆಯುತ್ತಿದ್ದು, ಉಳಿದವರು ಮಾಮೂಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದೆ ವರದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT