ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗ ಹರೀಶ್‌ ಮೇಲೆ ಭರವಸೆ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ನಾಯಕ, ಸಿಇಓ ಮನದಾಳ
Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡಿಗ, ಭಟ್ಕಳದ ಹರೀಶ್‌ ನಾಯಕ್‌ ಮೇಲೆ ಪ್ರೊ ಕಬಡ್ಡಿ ಐದನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಅಪಾರ ಭರವಸೆ ಇರಿಸಿದೆ ಎಂದು ತಂಡದ ನಾಯಕ ರೋಹಿತ್ ಕುಮಾರ್‌ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉದಯ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ರೋಹಿತ್‌ ಕುಮಾರ್‌ ‘ಹರೀಶ್‌ ಅವರನ್ನು ಕಳೆದ ಬಾರಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಆಡಲು ಅವಕಾಶ ಸಿಗಲಿಲ್ಲ. ಈ ಬಾರಿ ಅವರು ಪ್ರಬುದ್ಧ ಆಟಗಾರನಾಗಿ ಬೆಳೆದಿದ್ದಾರೆ. ಇದನ್ನು ಅಭ್ಯಾಸದ ಸಂದರ್ಭದಲ್ಲಿ ಸಾಬೀತು ಮಾಡಿದ್ದಾರೆ. ಅವರು ತಂಡದ ರೈಡಿಂಗ್ ವಿಭಾಗಕ್ಕೆ ಬಲ ತುಂಬುವುದರಲ್ಲಿ ಸಂದೇಹ ಇಲ್ಲ’ ಎಂದರು.

‘ಹರೀಶ್‌ ಈಗ ಉತ್ತಮ ಆಟಗಾರನಾಗಿ ಬೆಳೆದಿದ್ದಾರೆ. ಇನ್ನೂ ಹದಿಹರೆಯದವರಾದ ಅವರಿಗೆ ಮುಂದಿನ ಕೆಲವು ವರ್ಷ ಕಬಡ್ಡಿಯಲ್ಲಿ ಉತ್ತಮ ಹೆಸರು ಮಾಡಲು ಅವಕಾಶವಿದೆ. ಅದಕ್ಕೆ ಈ ಬಾರಿಯ ಪ್ರೊ ಕಬಡ್ಡಿ ನಾಂದಿ ಹಾಡಲಿದೆ’ ಎಂದು ಉದಯ್‌ ಅಭಿಪ್ರಾಯಪಟ್ಟರು.

ನಾಯಕತ್ವದ ಹೊಣೆ ಹೊತ್ತಿರುವುದರಿಂದ ನಿಮ್ಮ ಮೇಲೆ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಕುಮಾರ್‌ ‘ಕಳೆದ ಬಾರಿಯೂ ಕೆಲವು ಪಂದ್ಯಗಳಲ್ಲಿ ನಾಯಕನಾಗಿದ್ದೆ. ಆದ್ದರಿಂದ ಯಾವುದೇ ಒತ್ತಡವಿಲ್ಲದೆ ಈ ಬಾರಿ ಅಂಗಳಕ್ಕೆ ಇಳಿಯಲಿದ್ದೇನೆ. ತಂಡ ಕಠಿಣ ಅಭ್ಯಾಸ ಮಾಡುತ್ತಿದ್ದು ಪ್ರತಿಯೊಬ್ಬ ಆಟಗಾರ ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಯಾಗಿರುವಂತೆ ಗಮನಹರಿಸಲಾಗುತ್ತಿದೆ. ಆದ್ದರಿಂದ ಎಲ್ಲ ಆಟಗಾರರು ಲವಲವಿಕೆಯಿಂದ ಆಡಲಿದ್ದಾರೆ’ ಎಂದು ಅವರ ಹೇಳಿದರು.

‘ಕಳೆದ ಬಾರಿ ಗಾಯದ ಸಮಸ್ಯೆಯಿಂದ ತಂಡ ಹಿನ್ನಡೆ ಅನುಭವಿಸಿತ್ತು. ಪ್ರಮುಖ ಆಟಗಾರರ ಪೈಕಿ ಯಾರೇ ಗಾಯಾಳುವಾಗಿ ಹೊರಗೆ ಉಳಿದರೂ ನಿರ್ದಿಷ್ಠ ಪಂದ್ಯಕ್ಕಾಗಿ ತಂಡ ಹೆಣೆದ ತಂತ್ರಗಳನ್ನು ಕೊನೆಯ ಕ್ಷಣದಲ್ಲಿ ಬದಲಿಸಬೇಕಾಗುತ್ತದೆ. ಕಳೆದ ಬಾರಿ ರವೀಂದ್ರ ಬಾಲ್ಯನ್‌ ಗಾಯಗೊಂಡ ಕಾರಣ ತಂಡಕ್ಕೆ ಭಾರಿ ಹಿನ್ನಡೆಯಾಗಿತ್ತು. ಈ ಬಾರಿ ಅಂಥ ಸಮಸ್ಯೆಗಳು ಕಾಡದಂತೆ ಗಮನ ನೀಡಲಾಗುತ್ತದೆ’ ಎಂದು ಅವರು ವಿವರಿಸಿದರು.

ಬೆಂಗಳೂರೇ ಚೆನ್ನಾಗಿತ್ತು
ಬುಲ್ಸ್‌ ತಂಡದ ತವರಿನ ಪಂದ್ಯಗಳನ್ನು ನಾಗ್ಪುರಕ್ಕೆ ಸ್ಥಳಾಂತರಿಸಿದ ಕುರಿತು ಪ್ರತಿಕ್ರಿಯಿಸಿದ ಕೋಚ್‌ ರಣಧೀರ್‌ ಸಿಂಗ್‌ ಮತ್ತು ಸಿಇಓ ‘ಪಂದ್ಯಗಳು ಬೆಂಗಳೂರಿನಲ್ಲೇ ನಡೆದರೆ ಚೆನ್ನಾಗಿತ್ತು. ಆದರೆ ಕಂಠೀರವ ಕ್ರೀಡಾಂಗಣ ಲಭ್ಯವಿಲ್ಲದ ಕಾರಣ ಅನಿವಾರ್ಯವಾಗಿ ನಾಗ್ಪುರಕ್ಕೆ ಸ್ಥಳಾಂತರ ಮಾಡಲಾಗಿದೆ. ಆ ನಗರದಲ್ಲೂ ತಂಡಕ್ಕೆ ಉತ್ತಮ ಬೆಂಬಲ ಸಿಗುವ ಭರವಸೆ ಇದೆ’ ಎಂದರು.

ನೋಡಿ ಕಲಿತೆ: ‘ಶಬ್ಬೀರ್‌ ಬಾಬು ಅವರ ಆಟ ನೋಡಿ ಕಬಡ್ಡಿ ಆಡಬೇಕೆಂಬ ಆಸೆ ಮೂಡಿತು. ಆಟದಲ್ಲೂ ಶಬ್ಬೀರ್ ಅವರ ಶೈಲಿಯನ್ನೇ ಅನುಕರಿಸುತ್ತಿದ್ದೇನೆ’ ಎಂದು ಬೆಂಗಳೂರು ಬುಲ್ಸ್‌ನಲ್ಲಿರುವ ಏಕೈಕ ಕನ್ನಡಿಗ ಹರೀಶ್ ನಾಯಕ್‌ ತಿಳಿಸಿದರು.

ಭಾರತ ಕ್ರೀಡಾ ಪ್ರಾಧಿಕಾರದ ಧಾರವಾಡ ಕೇಂದ್ರದಲ್ಲಿ ಕಬಡ್ಡಿ ಕಲಿತ ಅವರು ಈಗ ಗದಗ ಜಿಲ್ಲೆ ಹೊಳೆ ಆಲೂರಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಎ ಓದುತ್ತಿದ್ದಾರೆ. ಕಳೆದ ಬಾರಿ ಹೊಸ ಪ್ರತಿಭೆಗಳ ಹುಡುಕಾಟ ನಡೆಸಿದಾಗ ಬುಲ್ಸ್‌ ತಂಡದ ಆಡಳಿತದ ಕಣ್ಣಿಗೆ ಬಿದ್ದಿದ್ದರು. ಕಳೆದ ಆವೃತ್ತಿಯಲ್ಲಿ ಆಡಲು ಅವಕಾಶ ಸಿಗದ ಅವರು ಈ ಬಾರಿ ಚೊಚ್ಚಲ ಪಂದ್ಯ ಆಡುವ ಭರವಸೆಯಲ್ಲಿದ್ದಾರೆ.

‘ಕ್ರಿಕೆಟರ್ ಆಗಬೇಕೆಂಬ ಆಸೆ ಹೊತ್ತುಕೊಂಡಿದ್ದೆ. ಆ ಸಂದರ್ಭದಲ್ಲಿ ಬಿ.ಸಿ.ರಮೇಶ್ ಅವರ ಆಟದ ಬಗ್ಗೆ ಕೇಳಿ ರೋಮಾಂಚನಗೊಳ್ಳುತ್ತಿದ್ದೆ. ಶಬ್ಬೀರ್ ಬಾಬು ಅವರ ಆಟ ನೋಡಿದ ನಂತರ ಮನಸ್ಸು ಸಂಪೂರ್ಣವಾಗಿ ಕಬಡ್ಡಿಯತ್ತ ಹೊರಳಿತು. ಹೀಗೆ ಕಬಡ್ಡಿ ಆಡಲು ಆರಂಭಿಸಿದೆ. ಪ್ರೊ ಕಬಡ್ಡಿಯಿಂದಾಗಿ ನನಗೆ ಹಣ ಮತ್ತು ಹೆಸರು ಬಂದಿದೆ. ಕುಟುಂಬದವರು ಮಾಡಿದ್ದ ಸಾಲವನ್ನು ಹರಾಜಿನಲ್ಲಿ ಬಂದ ಹಣದಿಂದ ಮುಗಿಸಿದೆ’ ಎಂದು ಅವರು ಹೇಳಿದರು.

ಶಬ್ಬೀರ್‌ ಬಾಬು ನೋಡಿ ಕಲಿತೆ
‘ಶಬ್ಬೀರ್‌ ಬಾಬು ಅವರ ಆಟ ನೋಡಿ ಕಬಡ್ಡಿ ಆಡಬೇಕೆಂಬ ಆಸೆ ಮೂಡಿತು. ಆಟದಲ್ಲೂ ಶಬ್ಬೀರ್ ಅವರ ಶೈಲಿಯನ್ನೇ ಅನುಕರಿಸುತ್ತಿದ್ದೇನೆ’ ಎಂದು ಬೆಂಗಳೂರು ಬುಲ್ಸ್‌ನಲ್ಲಿರುವ ಏಕೈಕ ಕನ್ನಡಿಗ ಹರೀಶ್ ನಾಯಕ್‌ ತಿಳಿಸಿದರು.

ಭಾರತ ಕ್ರೀಡಾ ಪ್ರಾಧಿಕಾರದ ಧಾರವಾಡ ಕೇಂದ್ರದಲ್ಲಿ ಕಬಡ್ಡಿ ಕಲಿತ ಅವರು ಈಗ ಗದಗ ಜಿಲ್ಲೆ ಹೊಳೆ ಆಲೂರಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಎ ಓದುತ್ತಿದ್ದಾರೆ. ಕಳೆದ ಬಾರಿ ಹೊಸ ಪ್ರತಿಭೆಗಳ ಹುಡುಕಾಟ ನಡೆಸಿದಾಗ ಬುಲ್ಸ್‌ ತಂಡದ ಆಡಳಿತದ ಕಣ್ಣಿಗೆ ಬಿದ್ದಿದ್ದರು. ಕಳೆದ ಆವೃತ್ತಿಯಲ್ಲಿ ಆಡಲು ಅವಕಾಶ ಸಿಗದ ಅವರು ಈ ಬಾರಿ ಚೊಚ್ಚಲ ಪಂದ್ಯ ಆಡುವ ಭರವಸೆಯಲ್ಲಿದ್ದಾರೆ.

‘ಕ್ರಿಕೆಟರ್ ಆಗಬೇಕೆಂಬ ಆಸೆ ಹೊತ್ತುಕೊಂಡಿದ್ದೆ. ಆ ಸಂದರ್ಭದಲ್ಲಿ ಬಿ.ಸಿ.ರಮೇಶ್ ಅವರ ಆಟದ ಬಗ್ಗೆ ಕೇಳಿ ರೋಮಾಂಚನಗೊಳ್ಳುತ್ತಿದ್ದೆ. ಶಬ್ಬೀರ್ ಬಾಬು ಅವರ ಆಟ ನೋಡಿದ ನಂತರ ಮನಸ್ಸು ಸಂಪೂರ್ಣವಾಗಿ ಕಬಡ್ಡಿಯತ್ತ ಹೊರಳಿತು. ಹೀಗೆ ಕಬಡ್ಡಿ ಆಡಲು ಆರಂಭಿಸಿದೆ. ಪ್ರೊ ಕಬಡ್ಡಿಯಿಂದಾಗಿ ನನಗೆ ಹಣ ಮತ್ತು ಹೆಸರು ಬಂದಿದೆ. ಕುಟುಂಬದವರು ಮಾಡಿದ್ದ ಸಾಲವನ್ನು ಹರಾಜಿನಲ್ಲಿ ಬಂದ ಹಣದಿಂದ ಮುಗಿಸಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT