ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಗ್ಲೆಂಡ್‌ಗೆ ಭಾರತ ತಂಡ ಕಠಿಣ ಎದುರಾಳಿ’

ಮಹಿಳಾ ವಿಶ್ವಕಪ್‌ ಕ್ರಿಕೆಟ್‌
Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಡರ್ಬಿ: ‘ತವರಿನಲ್ಲಿ ವಿಶ್ವಕಪ್‌ ಗೆಲ್ಲುವ ಕನಸು ಕಾಣುತ್ತಿರುವ ಇಂಗ್ಲೆಂಡ್ ತಂಡಕ್ಕೆ ಭಾರತ ಕಠಿಣ ಪೈಪೋಟಿ ಒಡ್ಡಲಿದೆ’ ಎಂದು ನಾಯಕಿ ಮಿಥಾಲಿ ರಾಜ್‌ ಹೇಳಿದ್ದಾರೆ.

‘ಭಾರತ ತಂಡ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 35ರನ್‌ಗಳಿಂದ ಮಣಿಸಿದೆ. ಆದರೆ ಫೈನಲ್ ಪಂದ್ಯದ ಸವಾಲುಗಳೇ ಬೇರೆ. ಪ್ರಶಸ್ತಿ ಹೊಸ್ತಿಲಿನಲ್ಲಿ ತಂಡ ಒತ್ತಡದಲ್ಲಿ ಇಲ್ಲ. ಬದಲಾಗಿ ಫೈನಲ್‌ ಆಡಲು ಉತ್ಸುಕವಾಗಿದೆ’ ಎಂದು ಮಿಥಾಲಿ ಹೇಳಿದ್ದಾರೆ.

‘ಭಾರತ ಕೂಡ ಇಂಗ್ಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸಿಲ್ಲ. ಎಲ್ಲಾ ಸವಾಲುಗಳಿಗೂ ತಂಡದ ಆಟಗಾರ್ತಿಯರು ಸಜ್ಜಾಗಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ನಾವು ಉತ್ತಮ ಫಾರ್ಮ್‌ನಲ್ಲಿ ಇದ್ದೇವೆ’ ಎಂದು ಮಿಥಾಲಿ ಅಭಿಪ್ರಾಯಪಟ್ಟಿದ್ದಾರೆ.

‘ತವರಿನ ಅಂಗಳದಲ್ಲಿ ಆಡುವ ಇಂಗ್ಲೆಂಡ್‌ಗೆ ಇದು ಪ್ರತಿಷ್ಠೆಯ ಪಂದ್ಯ ಎನಿಸಿದೆ. ಲೀಗ್ ಹಂತದಲ್ಲೂ ಈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಫೈನಲ್ ತಲುಪಿತ್ತು. ಇದಕ್ಕಾಗಿ ನಾವು ಹೆಚ್ಚಿನ ಸಿದ್ಧತೆಯೊಂದಿಗೆ ಕಣಕ್ಕಿಳಿಯಲಿದ್ದೇವೆ. ವಿಭಿನ್ನ ಯೋಜನೆಗಳನ್ನು ರೂಪಿಸಲಿದ್ದೇವೆ’ ಎಂದು ಮಿಥಾಲಿ ಹೇಳಿದ್ದಾರೆ.

‘ಫೈನಲ್‌ ಪಂದ್ಯದವರೆಗೆ ನಾವು ನಡೆದು ಬಂದ ಹಾದಿಯಲ್ಲಿ ಸಾಕಷ್ಟು ಕಲಿತಿದ್ದೇವೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳುವ ಮೂಲಕ ಸೆಮಿಫೈನಲ್ ತಲುಪಿದೆವು. ಆಸ್ಟ್ರೇಲಿಯಾದ ವಿರುದ್ಧ ಜಯ ಗಳಿಸಿದ್ದು ನಮ್ಮ ತಂಡದ ಅತ್ಯುತ್ತಮ ಸಾಧನೆ’ ಎಂದು ಮಿಥಾಲಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ಹರ್ಮನ್‌ಪ್ರೀತ್ ಕೌರ್‌ ಸೆಮಿಫೈನಲ್‌ ಆಟದ ವೇಳೆ ಗಾಯಗೊಂಡಿದ್ದರು. ಆದರೆ ಅವರು ಫೈನಲ್ ಆಡಲು ಫಿಟ್‌ ಆಗಿದ್ದಾರೆ’ ಎಂದು ಮಿಥಾಲಿ ಮಾಹಿತಿ ನೀಡಿದ್ದಾರೆ.

‘ಪೂನಮ್ ರಾವುತ್‌ ಕೂಡ ಇಂಗ್ಲೆಂಡ್ ವಿರುದ್ಧ ಉತ್ತಮವಾಗಿ ಆಡಿದ್ದಾರೆ. ಆದ್ದರಿಂದ ಮೇಲಿನ ಕ್ರಮಾಂಕದಲ್ಲಿ ಬದಲಾವಣೆ ಇಲ್ಲ. ಬೌಲಿಂಗ್‌ ವಿಭಾಗದಲ್ಲಿ ಕೂಡ ಹೆಚ್ಚಿನ ಬದಲಾವಣೆ ಆಗುವುದಿಲ್ಲ’ ಎಂದು ಅವರು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT