ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನಲ್ಲೂ ಒಂದಾದ ದಂಪತಿ

Last Updated 21 ಜುಲೈ 2017, 19:56 IST
ಅಕ್ಷರ ಗಾತ್ರ

ಉಡುಪಿ: ಆರು ದಶಕಗಳಿಗೂ ಹೆಚ್ಚು ಕಾಲ ಸಹಜೀವನ ನಡೆಸಿದ ವೃದ್ಧ ಗಂಡ–ಹೆಂಡತಿ ಇಹಲೋಕವನ್ನೂ ಜತೆಯಾಗಿ ತ್ಯಜಿಸಿದರು.
ಅಂಬಲಪಾಡಿ ಗ್ರಾಮದ ಕಪ್ಪೆಟ್ಟುವಿನಲ್ಲಿ ಶುಕ್ರವಾರ ಮನೆ ಮಾತಾಗಿಬಿಟ್ಟರು.

ಕಪ್ಪೆಟ್ಟು ರಾಮಮಂದಿರ ಸಮೀಪದ ನಿವಾಸಿ ಸೋಮಯ್ಯ ಶೆಟ್ಟಿಗಾರ್ (85) ಮತ್ತು ಅವರ ಹೆಂಡತಿ ನೇತ್ರಾವತಿ ಶೆಟ್ಟಿಗಾರ್ (76) ಜತೆಯಾಗಿ ಬಾಳ ಪಯಣ ಮುಗಿಸಿದವರು.

ಇಬ್ಬರೂ ಬಹಳ ಅನ್ಯೋನ್ಯವಾಗಿದ್ದರು. ಅತ್ಯಂತ ಶಿಸ್ತು ಮತ್ತು ಸಹಕಾರ ಮನೋಭಾವದವರಾಗಿದ್ದರು. ಇಬ್ಬರೂ ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮಯ್ಯ ಅವರಿಗೆ ಆಸ್ತಮಾ ತೊಂದರೆ ಇದ್ದು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ಕೊರಗಿನಿಂದ ಹೆಂಡತಿ ನೇತ್ರಾವತಿ ಅವರ ಆರೋಗ್ಯ ಕೂಡ ಕೆಟ್ಟು ಆಸ್ಪತ್ರೆಗೆ ಸೇರಿದ್ದರು.

ಸೋಮಯ್ಯ ಅವರನ್ನು ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಆರೋಗ್ಯ ಏರುಪೇರಾಗಿ ಕೊನೆಯುಸಿರೆಳೆದರು. ಅತ್ತ ಅದೇ ಹೊತ್ತಿಗೆ ಆಸ್ಪತ್ರೆಯಲ್ಲಿ ನೇತ್ರಾವತಿ ಅವರ ಆರೋಗ್ಯ ಕೂಡ ಗಂಭೀರವಾಗಿ, ಗಂಟೆಯೊಳಗೆ ಅವರೂ ಕೊನೆಯುಸಿರೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT