ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಚೂನ್‌ 500 ಪಟ್ಟಿಯಲ್ಲಿ ಭಾರತದ ಏಳು ಸಂಸ್ಥೆಗಳು

Last Updated 22 ಜುಲೈ 2017, 7:34 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಜಗತ್ತಿನ 500 ಪ್ರಮುಖ ಕಂಪೆನಿ(ಫಾರ್ಚೂನ್‌ 500)ಗಳ ಪಟ್ಟಿಯಲ್ಲಿ ಭಾರತದ ಏಳು ಸಂಸ್ಥೆಗಳು ಸ್ಥಾನ ಪಡೆದಿವೆ.

ಫಾಚೂನ್‌ 500ರ ಪಟ್ಟಿಯಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದ ಜಾಗತಿಕ ದೈತ್ಯ ಸಂಸ್ಥೆ ‘ವಾಲ್‌ಮಾರ್ಟ್‌’ ಮುಂಚೂಣಿಯಲ್ಲಿದೆ. ಜಾಗತಿಕ ಪಟ್ಟಿಯಲ್ಲಿ ಭಾರತೀಯ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿರುವ ಭಾರತೀಯ ತೈಲ ನಿಗಮ(ಐಒಸಿ) 161ನೇ ಸ್ಥಾನದಲ್ಲಿದೆ.

ರತ್ನಾಭರಣಗಳ ಆಮದು ನಡೆಸುವ ಖಾಸಗಿ ಸಂಸ್ಥೆ ರಾಜೇಶ್‌ ಎಕ್ಸ್‌ಪೋರ್ಟ್ಸ್‌ 423ನೇ ಸ್ಥಾನ ಪಡೆದಿದೆ. ಇದೇ ಮೊದಲ ಬಾರಿಗೆ ಫಾರ್ಚೂನ್‌ 500ರಲ್ಲಿ ಈ ಸಂಸ್ಥೆ ಸ್ಥಾನ ಗಳಿಸಿದೆ.

ಆದಾಯ ಗಳಿಕೆ ಆಧಾರ ಮೇಲೆ ಪ್ರಕಟಿಸಿರುವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಏಳು ಸಂಸ್ಥೆಗಳಲ್ಲಿ ನಾಲ್ಕು ಸಾರ್ವಜನಿಕ ವಲಯ ಹಾಗೂ ಮೂರು ಖಾಸಗಿ ಸಂಸ್ಥೆಗಳಾಗಿವೆ.

ಪ್ರಸಕ್ತ ಸಾಲಿನ ಫಾರ್ಚೂನ್‌ 500  ಸಂಸ್ಥೆಗಳು 33 ರಾಷ್ಟ್ರಗಳಲ್ಲಿ 6.7 ಕೋಟಿ ಸಿಬ್ಬಂದಿ ಹೊಂದಿವೆ ಎಂದು ಫಾಚೂರ್ನ್‌ ತಿಳಿಸಿದೆ.

ಸ್ಥಾನ ಪಡೆದಿರುವ ಭಾರತದ ಏಳು ಸಂಸ್ಥೆಗಳು:
161– ಇಂಡಿಯನ್‌ ಆಯಿಲ್‌ –54.7 ಬಿಲಿಯನ್‌ ಡಾಲರ್‌ (₹3.52 ಲಕ್ಷ ಕೋಟಿ ಆದಾಯ)
215– ರಿಲಯನ್ಸ್‌ ಇಂಡಸ್ಟ್ರಿಸ್‌ ಲಿ.
226– ಟಾಟಾ ಮೋಟಾರ್ಸ್‌
232– ಭಾರತೀಯ ಸ್ಟೇಟ್‌ ಬ್ಯಾಂಕ್‌
358– ಭಾರತ್‌ ಪೆಟ್ರೋಲಿಯಂ
367– ಹಿಂದುಸ್ತಾನ ಪೆಟ್ರೋಲಿಯಂ

ಟಾಪ್‌ 3 ಸ್ಥಾನಗಳಲ್ಲಿ:
1– ವಾಲ್‌ಮಾರ್ಟ್‌–4,82,130 ಮಿಲಿಯನ್‌ ಡಾಲರ್‌ (₹31 ಲಕ್ಷ ಕೋಟಿ ಆದಾಯ)
2– ಸ್ಟೇಟ್‌ ಗ್ರಿಡ್‌– 3,29,601 ಮಿಲಿಯನ್‌ ಡಾಲರ್‌
3– ಚೀನಾ ನ್ಯಾಷನಲ್‌ ಪೆಟ್ರೋಲಿಯಂ– 2,99,271 ಮಿಲಿಯನ್ ಡಾಲರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT