ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಹುತಾತ್ಮ ದಿನ; ನಮನ ಸಲ್ಲಿಸಿದ ಜನಸ್ತೋಮ

Last Updated 22 ಜುಲೈ 2017, 7:06 IST
ಅಕ್ಷರ ಗಾತ್ರ

ನರಗುಂದ: ಮಹದಾಯಿ– ಕಳಸಾ ಬಂಡೂರಿ ಯೋಜನೆ ಜಾರಿಗೆ ನಿರಂತರ ಹೋರಾಟ ನಡೆಸಿದ್ದೇವೆ. ಇದರ ಜಾರಿಗೆ ನಮ್ಮ ನಾಯಕರ   ಜತೆ ಚರ್ಚೆ ಮಾಡಿ ದ್ದೇನೆ. ಯೋಜನೆ ಅನುಷ್ಠಾನಕ್ಕೆ ಪ್ರಾಮಾ ಣಿಕ ಪ್ರಯತ್ನ ಮಾಡುತ್ತೇನೆ ಎಂದು  ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ. ಪಾಟೀಲ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ನಡೆದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರೈತ ವೀರಗಲ್ಲಿಗೆ ಶ್ರದ್ದಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

ಈಗಾಗಲೇ ಮಹದಾಯಿ ವಿವಾದ ನ್ಯಾಯಮಂಡಳಿಯಲ್ಲಿದೆ.  ಇದರ ಬಗ್ಗೆ ರಾಜ್ಯದ ಸಂಸದರು,  ನಮ್ಮ ನಾಯಕರು ಜೊತ ಚರ್ಚೆ ನಡೆಸುತ್ತಿದ್ದೇನೆ. ರೈತರ ಬದುಕು ಹಸನಾಗಬೇಕಿದೆ. ಈ ಭಾಗ ದಲ್ಲಿ ಮಹದಾಯಿ– ಕಳಸಾ ಬಂಡೂರಿ  ನೀರು ಹರಿಯಬೇಕಿದೆ.  ಯೋಜನೆ ಜಾರಿಗೆ ಯತ್ನಿಸುತ್ತೇನೆ ಎಂದರು.

ಬಿಜೆಪಿ ಮುಖಂಡರಾದ ಮಲ್ಲಪ್ಪ ಮೇಟಿ, ಎ.ಎಂ.ಹುಡೇದ, ಚಂದ್ರು ದಂಡಿನ, ಸಂಗಳದಮಠ, ಪುರಸಭೆ ಅಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ, ಈಶ್ವರಗೌಡ ಪಾಟೀಲ, ಬಿ.ಎಸ್‌.ಪಾಟೀಲ, ಅನೀಲ ಧರಿಯನ್ನವರ, ಉಮೇಶ ಯಳ್ಳೂರು, ಚಂದ್ರು ಪವಾರ ಇದ್ದರು.

ಕಾಂಗ್ರೆಸ್‌ನಿಂದ ಶ್ರದ್ಧಾಂಜಲಿ:  ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಬಿ.ಆರ್‌.ಯಾವ ಗಲ್‌ ನೇತೃತ್ವದಲ್ಲಿ ಪಾದಯಾತ್ರೆಯಲ್ಲಿ ವೀರಗಲ್ಲಿಗೆ ಆಗಮಿಸಿ  ಶ್ರದ್ಧಾಂಜಲಿ ಸಲ್ಲಿಸಿ ದರು. ನಂತರ ಮಾತನಾಡಿದ ಶಾಸಕ ಬಿ.ಆರ್‌. ಯಾವಗಲ್‌ ಮಹದಾಯಿ ಯೋಜನೆ ಜಾರಿಗೆ  ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ ಎಂದರು.

ಎಸ್.ಡಿ.ಕೊಳ್ಳಿಯವರ, ರಾಜು ಕಲಾಲ, ಜಿ.ಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ ತಾ.ಪಂ ಅಧ್ಯಕ್ಷ ಪ್ರಕಾಶ ಗೌಡ ತಿರಕನಗೌಡ್ತ, ಮಹೇಶ ಬಡಿ ಗೇರ, ವಿಠ್ಠಲ ಶಿಂಧೆ, ಚಂಬಣ್ಣ ವಾಳದ, ಎಂ.ಎಂ.ಮುಳ್ಳೂರು ಇದ್ದರು.

ರೈತ ಸಂಘ: ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರ ಶೇಖರ ವೀರೇಶ ಸೊಬರಮಠರೊಂದಿಗೆ ಕೂಡಿ  ವೀರಗಲ್ಲಿಗೆ ಮಾಲಾರ್ಪಣೆ ಸಲ್ಲಿಸಿ ದರು. ಕೋಡಿಹಳ್ಳಿ ಚಂದ್ರಶೇಖರ ಮಾತ ನಾಡಿ ನಾವು ಕೇಳುತ್ತಿರುವ ಮಹದಾಯಿ ನೀರನ್ನು ಬೇಗನೇ ಕೊಡಬೇಕು. ಪ್ರಧಾನಿ  ಮೋದಿಯವರು ರೈತರ ಜತೆ ಚೆಲ್ಲಾಟ ನಿಲ್ಲಿಸಬೇಕು. ಇಲ್ಲವಾದರೆ ಇದರ ಪರಿ ಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು. ರೈತ ಸಂಘದ ಬಸವ ರಾಜ ಸಾಬಳೆ, ವಿಠ್ಠಲ ಜಾಧವ ಇದ್ದರು.

ಜೆಡಿಎಸ್‌: ಜೆಡಿಎಸ್‌ ಜಿಲ್ಲಾಧ್ಯಕ್ಷ ಅಂದಾ ನಯ್ಯ ಕುರ್ತಕೋಟಿಮಠ ನೇತೃತ್ವದಲ್ಲಿ ವೀರಗಲ್ಲಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಚ್‌.ಎನ್‌.ಹಳಕಟ್ಟಿ, ಶ್ರೀಪಾದ ಆನೇಗುಂದಿ, ಜಗದೀಶ ಬೆಳವಟಗಿ, ವರ್ತೂರ ರಮಾನಂದ, ಬಿ.ಎಸ್‌. ಉಪ್ಪಾರ ಇದ್ದರು.

ಕರವೇ: ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಹನಮಂತ ಮಜ್ಜಿಗುಡ್ಡ ನೇತೃತ್ವ ದಲ್ಲಿ ಕರವೇ ಸದಸ್ಯರು ರೈತ ವೀರಗಲ್ಲಿಗೆ ನಮನ ಸಲ್ಲಿಸಿದರು. ಕನ್ನಡ ಪರ ಸಂಘಟನೆಗಳ ಸುಬ್ರ ಮಣ್ಯಂ ರಡ್ಡಿ, ನಾಗೇಶ ಅಪ್ಪೋಜಿ, ವಾಸು ಹೆಬ್ಬಾಳ, ಅಂಗವಿಕಲರ ಸಂಘದ ಸದಸ್ಯರು ಸಿದ್ದಪ್ಪ ಮರ್ಚಕ್ಕನವರ ನೇತೃತ್ವ ದಲ್ಲಿ ವೀರಗಲ್ಲಿಗೆ ನಮನ ಸಲ್ಲಿಸಿದರು.
ವಿವಿಧ ಸಂಘಟನೆಗಳು, ಮಹಿಳೆ ಯರು ರೈತ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT