ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುಡಿಮೆ ರಹಿತ ಮಾತು ಮಲಿನ’

Last Updated 22 ಜುಲೈ 2017, 8:56 IST
ಅಕ್ಷರ ಗಾತ್ರ

ಹೊಸಪೇಟೆ: ‘ದುಡಿಮೆ ಮತ್ತು ಮಾತು ಜತೆಯಾಗಿದ್ದಾಗ ಮಾತಿಗೆ ಬೆಲೆ ಬರುತ್ತದೆ. ದುಡಿಮೆ ರಹಿತ ಮಾತುಗಳು ಮಲಿನವಾಗುತ್ತವೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ತಿಳಿಸಿದರು. ವಿ.ವಿ. ಸಾಹಿತ್ಯ ಅಧ್ಯಯನ ವಿಭಾಗ ‘ನಮ್ಮ ಮಾತು’ ಶೀರ್ಷಿಕೆ ಅಡಿ ಹಮ್ಮಿ ಕೊಂಡಿದ್ದ ವಾರದ ಮಾತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮೇಲುಜಾತಿಗಳ ಅರಿವು, ತಿಳಿವಳಿಕೆಗಳೇ ಸಿದ್ಧಾಂತಗಳಾಗಿ ರೂಪುಗೊಂಡಿವೆ. ಅದಕ್ಕೆ ಬದಲಾಗಿ ಕೆಳಜಾತಿಗಳ ಅರಿವು ಸಿದ್ಧಾಂತಗಳಾಗಿ ಪುನಾ ರಚನೆಯಾಗಬೇಕಿದೆ’ ಎಂದರು. ‘ವಚನ ಪರಂಪರೆಯಲ್ಲಿ ಕೆಳಜಾತಿ ಗಳ ವಚನಕಾರ್ತಿಯರು ಅಲಕ್ಷಕ್ಕೆ ಒಳ ಗಾದರು. ಅಂತಹ ಅಲಕ್ಷಿತರ ಮಾತು, ವಚನಗಳ ವಿಶ್ಲೇಷಣೆ ಮಾಡಿ ದರೆ ವಚನ ಪರಂಪರೆಯ ಭಿನ್ನ ಮುಖಗಳು ಅನಾ ವರಣಗೊಳ್ಳುತ್ತವೆ’ ಎಂದು ಹೇಳಿದರು. ‘ಮಾತು ವಾಗ್ವಾದಗಳನ್ನು ಹುಟ್ಟಿಸ ಬೇಕು.

ಆ ವಾಗ್ವಾದಗಳು ಸಂಶೋಧನೆಯ ಪ್ರಶ್ನೆಗಳಾಗಿ ರೂಪಾಂತರ ಹೊಂದ ಬೇಕು’ ಎಂದು ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ರಹಮತ್‌ ತರೀಕೆರೆ ತಿಳಿಸಿದರು. ಸಂಶೋಧಕ ಅರುಣ್‌ ಜೋಳದ ಕೂಡ್ಲಿಗಿ, ಪ್ರೊ. ಶಿವಾನಂದ ವಿರಕ್ತಮಠ, ಪ್ರೊ. ವಿಠ್ಠಲರಾವ್‌ ಗಾಯಕವಾಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT