ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

173 ಶಂಕಿತ ಐಎಸ್‌ ಆತ್ಮಹತ್ಯಾ ಬಾಂಬರ್‌ಗಳ ಪಟ್ಟಿ ಬಿಡುಗಡೆ ಮಾಡಿದ ಇಂಟರ್‌ಪೋಲ್‌

Last Updated 22 ಜುಲೈ 2017, 10:02 IST
ಅಕ್ಷರ ಗಾತ್ರ

ಲೈಯಾನ್‌: 173 ಮಂದಿ ಶಂಕಿತ ಇಸ್ಲಾಮಿಕ್‌ ಸ್ಟೇಟ್ಸ್‌ (ಐಎಸ್‌) ಆತ್ಮಹತ್ಯಾ ಬಾಂಬರ್‌ಗಳ ಪಟ್ಟಿಯನ್ನು ಇಂಟರ್‌ಪೋಲ್‌ ಬಿಡುಗಡೆ ಮಾಡಿದೆ.

ಮಧ್ಯ ಪ‍್ರಾಚ್ಯ ರಾಷ್ಟ್ರಗಳಲ್ಲಿ ಐಎಸ್‌ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಗೆ ಪ್ರತೀಕಾರ ತೀರಿಸಿಕೊಳ್ಳಲು ಈ ಆತ್ಮಹತ್ಯಾ ಬಾಂಬರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಈ ಆತ್ಮಹತ್ಯಾ ಬಾಂಬರ್‌ಗಳು ಯುರೋಪ್‌ನಲ್ಲಿ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂದು ಇಂಟರ್‌ಪೋಲ್‌ ಹೇಳಿದೆ ಎಂದು ‘ಗಾರ್ಡಿಯನ್‌’ ವರದಿ ಮಾಡಿದೆ.

ಸಿರಿಯಾ ಮತ್ತು ಇರಾಕ್‌ನಲ್ಲಿ ಐಎಸ್‌ ಉಗ್ರರು ನಡೆಸಿದ ದಾಳಿಗಳ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ 173 ಮಂದಿಯ ಪಟ್ಟಿಯನ್ನು ತಯಾರಿಸಲಾಗಿದೆ.

ಮೇ 27ರಂದು ಇಂಟರ್‌ಪೋಲ್‌ನ ಪ್ರಧಾನ ಕಾರ್ಯದರ್ಶಿ ಈ ಶಂಕಿತ ಬಾಂಬರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಹೆಚ್ಚು ಹಾನಿ ಉಂಟು ಮಾಡುವಂತೆ ಐಎಸ್‌ ಆತ್ಮಹತ್ಯಾ ಬಾಂಬರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಸುಧಾರಿತ ಸ್ಫೋಟಕಗಳ ಮೂಲಕ ಹೆಚ್ಚು ಜನರನ್ನು ಕೊಲ್ಲುವಂತೆ ಈ ಬಾಂಬರ್‌ಗಳಿಗೆ ತರಬೇತಿ ನೀಡಲಾಗಿದೆ. ಈ ಬಾಂಬರ್‌ಗಳು ಜಗತ್ತಿನ ವಿವಿಧ ಭಾಗಗಳಲ್ಲಿ ಸಂಚರಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇಂಟರ್‌ಪೋಲ್‌ ಎಚ್ಚರಿಸಿದೆ.

‘ಇಂಟರ್‌ಪೋಲ್‌ ತನ್ನ ಸದಸ್ಯ ರಾಷ್ಟ್ರಗಳಿಗೆ ಈ ರೀತಿಯ ಮಾಹಿತಿಯನ್ನು ಆಗಾಗ ನೀಡುತ್ತಿರುತ್ತದೆ. ಭಯೋತ್ಪಾದಕ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅಪರಾಧಿಗಳ ಪಟ್ಟಿಯನ್ನು ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ’ ಎಂದು ಇಂಟರ್‌ಪೋಲ್‌ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT