ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪರಿವರ್ತನಾ ಕಾರ್ಯಾಗಾರ

Last Updated 22 ಜುಲೈ 2017, 10:27 IST
ಅಕ್ಷರ ಗಾತ್ರ

ಬ್ರಹ್ಮಾವರ: ಅಧ್ಯಯನದಲ್ಲಿ ಅನನ್ಯತೆಯನ್ನು ಸಾಧಿಸಲು ಏಕಾಗ್ರತೆ ಅಗತ್ಯ. ಆದರೆ ವಿದ್ಯಾರ್ಥಿಗಳು ಎದುರಿಸುತ್ತಿರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಅವರ ಏಕಾಗ್ರತೆಗೆ ತೊಡಕಾಗಿವೆ ಎಂದು ಯುವ ಪರಿವರ್ತಕಿ ಶ್ಯಾಮಲ ತಿಳಿಸಿದರು.

ಕೋಟದ ವಿವೇಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹೆಲ್ತ್ ಕ್ಲಬ್ ಹಾಗೂ ಉಡುಪಿಯ ಯುವ ಸ್ಪಂದನ ಕೇಂದ್ರಗಳ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ಅವರು ಮಾತನಾಡಿದರು.

ಕೌಟುಂಬಿಕ ಸಮಸ್ಯೆಗಳೊಂದಿಗೆ ಶೋಷಣೆಗೆ ಒಳಗಾಗುತ್ತಿರುವ ಯುವ ಜನರಲ್ಲಿ ಆತ್ಮ ವಿಶ್ವಾಸದ ಕೊರತೆ ಮತ್ತು ಹತಾಶ ಮನೋಭಾವಗಳು ದುರಂತಗಳಿಗೆ ದಾರಿ ಮಾಡಿ ಕೊಡುತ್ತಿದೆ. ಈ ಪರಿಸ್ಥಿತಿಯಲ್ಲಿ ಯುವ ಸ್ಪಂದನ ಕೇಂದ್ರ ಸ್ವಾಭಿಮಾನಿ ಸಮೃದ್ಧ ಬದುಕಿನ ದಾರಿ ತೋರಬಲ್ಲ ಆಶಾಕಿರಣವಾಗಿ ಕಾರ್ಯವೆಸಗುತ್ತಿದೆ ಎಂದು ಅವರು ಹೇಳಿದರು.

ಯುವ ಪರಿವರ್ತಕಿ ಉಷಾ ಹಾಗೂ ಹೆಲ್ತ್ ಕ್ಲಬ್‌ನ ಸಂಚಾಲಕ ಪಿ.ವಿಶ್ವೇಶ್ವರ ಹಂದೆ ಇದ್ದರು. ಮುಖ್ಯ ಶಿಕ್ಷಕ ಪಿ. ಶ್ರೀಪತಿ ಹೇರ್ಳೆ ಸ್ವಾಗತಿಸಿದರು. ಸ್ವರೂಪ್ ಹಂದೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT