ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ‘ಅರಣ್ಯ ಸಂವರ್ಧನೆ’

Last Updated 23 ಜುಲೈ 2017, 7:05 IST
ಅಕ್ಷರ ಗಾತ್ರ

ಗದಗ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಬೃಹತ್‌ ಅರಣ್ಯ ಸಂವರ್ಧನೆ ಕಾರ್ಯ ಕ್ರಮದ ಭಾಗವಾಗಿ ಶನಿವಾರ ಗದಗ ಜಿಲ್ಲೆಯಲ್ಲೂ, ಏಕಕಾಲದಲ್ಲಿ 170 ಸ್ಥಳ ಗಳಲ್ಲಿ 8 ಸಾವಿರ ಸಸಿ ನೆಡಲಾಯಿತು.

ಗದುಗಿನ ಎ.ಪಿ.ಎಂ.ಸಿ ಆವರಣ, ಹುಲಕೋಟಿಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ, ವಿವೇಕಾನಂದ ನಗರ, ಕಳಸಾ ಪುರ ಸಮುದಾಯ ಭವನದ ಆವರಣ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧಡೆ, ವಿವಿಧ ಜಾತಿಯ ಒಟ್ಟು 8610 ಸಸಿಗಳನ್ನು ನೆಡಲಾಯಿತು.

ಮುಖ್ಯವಾಗಿ ಸರ್ಕಾರಿ ಶಾಲೆಗಳ ಆವರಣ, ದೇಗುಲದ ಪರಿಸರ, ರಸ್ತೆಯ ಇಕ್ಕೆಲಗಳನ್ನು ಸಸಿ ನೆಡಲು ಆಯ್ದುಕೊಳ್ಳಲಾಗಿತ್ತು. ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಜಿಲ್ಲೆಯ ವಿವಿಧೆಡೆ ಏಕಕಾಲದಲ್ಲಿ ವೃಕ್ಷ ಅಭಿಯಾ ನಕ್ಕೆ ಚಾಲನೆ ನೀಡಲಾಯಿತು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಶಿವಾನಂದ ಆಚಾರ್ಯ ಅವರು ತಿಳಿಸಿದರು.

‘ಜಿಲ್ಲೆಯಲ್ಲಿ  ಸಸಿ ನೆಡುವ ಬೃಹತ್‌ ಅಭಿಯಾನದಲ್ಲಿ 12 ಸಾವಿರ ಮಂದಿ ಕೈಜೋಡಿಸಿದರು. ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿ, ಪರಿಸರ ಪ್ರೇಮಿಗಳ ಸಹಭಾಗಿತ್ವದಲ್ಲಿ ಸಸಿ ನೆಡಲಾಯಿತು. ಮಾವು, ಬೇವು, ಹುಣಸೆ, ನೇರಳೆ, ಪೇರಳೆ ಸೇರಿ ನೂರಾರು ಜಾತಿಯ ವೃಕ್ಷ ಗಳ ಒಟ್ಟು 73,340 ಬೀಜದುಂಡೆಗಳನ್ನೂ ಜಿಲ್ಲೆಯಾದ್ಯಂತ ಬಿತ್ತಲಾಯಿತು’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ತಾಲ್ಲೂಕು ಯೋಜನಾಧಿಕಾರಿ ಸುಕೇಶ್‌ ಎ.ಎಸ್‌. ಮಾಹಿತಿ ನೀಡಿದರು.

ಗದುಗಿನ ಎಪಿಎಂಸಿ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ವಿರೇ ಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಚಾಲನೆ ನೀಡಿದರು. ಸಸಿ ನೆಟ್ಟು ನೀರುಣಿಸಿದ ಅವರು, ‘ನಾವು ಉಣ್ಣುವ ಅನ್ನ, ಜೀವ ಕೊಡುವ ಉಸಿರು, ನೀರು, ನೆರಳು ಎಲ್ಲದಕ್ಕೂ ಕಾರಣವಾದ ಪ್ರಕೃತಿಯೇ ನಮ್ಮ ನೆಲೆ. ಮಾನವ ನಿಸರ್ಗದ ಕೂಸು. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಈಗಲಾದರೂ ಜಾಗೃತಿ ಬಂದಿದೆ. ಉಳಿದಿರುವ ಪರಿಸರ ವನ್ನು ಬೆಳೆಸಿ, ಉಳಿಸುವ ಕೆಲಸ ತುರ್ತಾಗಿ ಆಗಬೇಕಿದೆ’ ಎಂದು ತಿಳಿಸಿದರು.

ಜಿಲ್ಲೆಯ ವಿವಿಧೆಡೆ ನಡೆದ ಕಾರ್ಯ ಕ್ರಮದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಎಸ್.ಎಫ್.ಕಂಬಿ, ಎಸ್‌ಬಿಐ ನಿವೃತ್ತ ವ್ಯವಸ್ಥಾಪಕ ವೀರಣ್ಣ ಕೊಠಗಿ, ನಗರ ಸಭೆ ವಿರೋಧ ಪಕ್ಷದ ಮುಖಂಡ ಸದಾನಂದ ಪಿಳ್ಳೆ, ಕೃಷಿ ಇಲಾಖೆ ಸಹಾಯಕ ನಿರ್ದೇ ಶಕ ಸುರೇಶ ಕುಂಬಾರ, ಶಾಸಕ ರಾಮ ಕೃಷ್ಣ ದೊಡ್ಡಮನಿ, ಶಿರಹಟ್ಟಿಯ ಪಕೀರ ಸಿದ್ಧರಾಮ ಸ್ವಾಮೀಜಿ, ಮಹಾಂತೇಶ ದಶಮಣಿ, ರತ್ನಾ ಕೊಳ್ಳಿ, ಎಚ್.ಎಸ್. ಸೋಮಪುರ, ಬಸನಗೌಡ ರಂಗನಗೌಡ ಭಾಗವಹಿಸಿದ್ದರು.

ರೋಣದಲ್ಲೂ ಕಾರ್ಯಕ್ರಮ
ರೋಣ: ಪಟ್ಟಣದ ಸಾಧು ಅಜ್ಜನವರ ಮಠದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ವತಿಯಿಂದ ವನ ಸಂವರ್ಧನಾ ಕಾರ್ಯಕ್ರಮ ನಡೆಯಿತು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ತಾಲ್ಲೂಕು ಯೋಜನಾಧಿಕಾರಿ ವಸಂತಿ ಅಮಿನ್, ತೆಂಗು– ನಾರು ನಿಗಮದ ನಿರ್ದೇಶಕ ವಿ.ಬಿ.ಸೋಮನಕಟ್ಟಿಮಠ, ಪುರಸಭೆಯ ಸದಸ್ಯ ಖಾದಿರಸಾಬ್ ಸಂಕನೂರ, ಚನ್ನಪ್ಪಗೌಡ ರಾಯನಗೌಡ್ರ, ಸುನಿತಾ ಪಿ., ದ್ರಾಕ್ಷಾಯಿಣಿ ಗೊಂದಿ, ಅನ ಸೂಯಾ ಶಿರೊಳ, ಶರಣಮ್ಮ ಕರಬ ಶೆಟ್ಟರ, ಗುರಲಿಂಗಪ್ಪ ಕರಬಶೆಟ್ಟರ, ದಿಲ್ ಶಾದ ಇಟಗಿ, ಹಮೀದಾ ಕೊಣ್ಣೂರ, ಸೈನಜಾ ಮುಲ್ಲಾ, ರುದ್ರಯ್ಯ ಕೊಳಿಮಠ, ಮುತ್ತವ್ವ ಹವಳಪ್ಪನವರ, ವಿವಿಧ ಸಂಘ ಟನೆಗಳ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT