ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆಯಾದ ಕೃಷ್ಣೆಯ ನೀರಿನ ಅಬ್ಬರ

Last Updated 23 ಜುಲೈ 2017, 9:16 IST
ಅಕ್ಷರ ಗಾತ್ರ

ಚಿಕ್ಕೋಡಿ: ಮಹಾರಾಷ್ಟ್ರದ ನದಿ ಜಲಾ ನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕ್ಷೀಣಿಸಿದೆ. ಆದರೂ, ಕಳೆದ 24 ಗಂಟೆಗಳಲ್ಲಿ ಅಲ್ಲಿಂದ ಕೃಷ್ಣಾ ಮತ್ತು ಉಪನದಿಗಳ ಮೂಲಕ ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಮಾತ್ರ  ಏರಿಕೆ ಕಂಡು ಬಂದಿದೆ. ಇದರಿಂದ ತಾಲ್ಲೂಕಿ ನಲ್ಲಿ ಕೃಷ್ಣಾ ಮತ್ತು ದೂಧಗಂಗಾ, ವೇದಗಂಗಾ ನದಿಗಳ ಒಳಹರಿವು ಹೆಚ್ಚುತ್ತಲೇ ಇದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ ಹಾಗೂ ದೂಧಗಂಗಾ ನದಿಯಿಂದ ಸೇರಿದಂತೆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಶುಕ್ರವಾರ ಹರಿದು ಬರುತ್ತಿದ್ದ  1.23 ಲಕ್ಷ  ಕ್ಯುಸೆಕ್‌ ನೀರು ಶನಿವಾರ 1.40 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ. ರಾಜಾಪುರ ಬ್ಯಾರೇಜ್‌ ನಿಂದ 1.14 ಲಕ್ಷ ಕ್ಯುಸೆಕ್‌ ಮತ್ತು ದೂಧಗಂಗಾ ನದಿಯಿಂದ 25,520 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.

ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ–ಭೀವಶಿ, ಅಕ್ಕೋಳ–ಸಿದ್ನಾಳ, ಭೋಜವಾಡಿ–ಕುನ್ನೂರ ಹಾಗೂ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಲಿಕವಾಡ–ದತ್ತವಾಡ , ಕಾರದಗಾ–ಭೋಜ, ಕೃಷ್ಣಾ ನದಿಗೆ ನಿರ್ಮಿಸಿರುವ ಕಲ್ಲೋಳ–ಯಡೂರ ಸೇತುವೆಗಳು  ಜಲಾವೃತ ಸ್ಥಿತಿಯಲ್ಲಿಯೇ ಇವೆ.

ದೂಧಗಂಗಾ ನದಿಗೆ ಇನ್ನೂ ಸುಮಾರು 12 ಸಾವಿರ ಕ್ಯೂಸೆಕ್‌ ನೀರು ಹೆಚ್ಚಿದರೆ ಸದಲಗಾ–ಬೋರಗಾಂವ ಮತ್ತು ಯಕ್ಸಂಬಾ–ದಾನವಾಡ ಗ್ರಾಮಗಳ ನಡುವಿನ ಸೇತುವೆಗಳೂ ಮುಳುಗಡೆಯಾಗಲಿವೆ.

ಮಳೆ ವಿವರ: ಮಹಾರಾಷ್ಟ್ರದ ಕೊಯ್ನಾ–96 ಮಿ.ಮೀ., ವಾರಣಾ–77 ಮಿ.ಮೀ, ಮಹಾಬಳೇಶ್ವರ–101 ಮಿ.ಮೀ., ನವಜಾ–38 ಮಿ.ಮೀ. ಹಾಗೂ ತಾಲ್ಲೂಕಿನ ಚಿಕ್ಕೋಡಿ–9.3 ಮಿ.ಮೀ., ಅಂಕಲಿ–6.2 ಮಿ.ಮೀ., ನಾಗರ ಮುನ್ನೋಳಿ–2.2 ಮಿ.ಮೀ., ಸದಲಗಾ–5.3ಮಿ.ಮೀ., ಗಳತಗಾ–5.0 ಮಿ.ಮೀ., ಜೋಡಟ್ಟಿ–1.4ಮಿ.ಮೀ., ನಿಪ್ಪಾಣಿ–15.2 ಮಿ.ಮೀ., ಸೌಂದಲಗಾ– 11.1ಮಿ.ಮೀ ಮಳೆ ದಾಖಲಾಗಿದೆ.

ಬಿರಡಿ–ಚಿಂಚಲಿ ಸೇತುವೆ ಬಂದ್
ರಾಯಬಾಗ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಿಂ ದಾಗಿ ಕೃಷ್ಣಾ ನದಿಯಲ್ಲಿನ ಪ್ರವಾಹದಲ್ಲಿ ಏರಿಕೆಯಾಗುತ್ತಿದೆ. ಕೃಷ್ಣಾ ನದಿ  ಹಿನ್ನೀರಿನಿಂದ ತಾಲ್ಲೂಕಿನ  ಚಿಂಚಲಿ ಬಳಿಯ ಹಾಲಹಳ್ಳದ ಬಿರಡಿ–ಚಿಂಚಲಿ ಮಧ್ಯೆದ ರಸ್ತೆ ಸೇತುವೆ ಗುರುವಾರ ರಾತ್ರಿ ಮುಳುಗ ಡೆಯಾಗಿ ರಸ್ತೆ ಸಂಪರ್ಕ ಕಡಿತವಾಗಿದೆ.

ಶುಕ್ರವಾರ ನದಿಗೆ 1,60,000 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಪ್ರತಿ ಗಂಟಗೆ 3ರಿಂದ 4 ಸೆಂಟಿ ಮೀಟರ್‌ನಷ್ಟು ಪ್ರವಾಹದಲ್ಲಿ ಏರಿಕೆಯಾಗುತ್ತಿದೆ ಎಂದು ಜಲ ಮಾಪನ ನಿರೀಕ್ಷಕ ಎಸ್.ಜಿ.ಹಿರೇ ಕೋಡಿ ತಿಳಿಸಿದ್ದಾರೆ.

ಶನಿವಾರ ಕುಡಚಿ  ಸೇತುವೆ ಬಳಿ  12 ಮೀಟರ್‌ನಷ್ಟು ಇದ್ದು, ಅದು 15.42 ಮೀಟರ್‌ಕ್ಕೆ ಏರಿದರೆ ಸೇತುವೆ ಮುಳು ಗಡೆಯಾಗಲಿದೆ. ಸಂಭವನೀಯ ನೆರೆ ಹಾವಳಿ ನಿಯಂತ್ರಿಸಲು ತಹಶೀಲ್ದಾರರು ಅಗತ್ಯ ಮುಂಜಾಗೃತಾ ಕ್ರಮಕೈಕೊಂಡಿ ದ್ದಾರೆ. ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಜನರು ನೀರಿಗೆ ಇಳಿಯದಂತೆ ಸೂಚನೆ ನೀಡಿದ್ದಾರೆ.

ಸೌಂದತ್ತಿ, ದಿಗ್ಗೆ ವಾಡಿ, ಜಲಾಲಪುರ, ಬಿರಡಿ, ಚಿಂಚಲಿ, ಕುಡಚಿ, ಗುಂಡವಾಡ, ಶಿರಗೂರ, ಖೆಮಲಾಪುರ, ಸಿದ್ದಾಪುರ ಗ್ರಾಮಗಳಿಗೆ  ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಸೌಂದತ್ತಿಯಲ್ಲಿ ಬೋಟ್ ಹಾಳಾಗಿದ್ದು, ಅಲ್ಲಿ ಹೊಸ ಬೋಟ್ ವ್ಯವಸ್ಥೆ ಮಾಡುವು ದಾಗಿ ತಹಶೀಲ್ದಾರ್ ಕೆ.ಎನ್.ರಾಜ ಶೇಖರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT