ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಗಿಲು ಹಿಡಿದು ಉಳುಮೆಗೆ ಇಳಿದ ಶಾಸಕ

Last Updated 23 ಜುಲೈ 2017, 9:27 IST
ಅಕ್ಷರ ಗಾತ್ರ

ಸಂಡೂರು: ತಾಲ್ಲೂಕಿನ ಈಶಾನ್ಯ ಅರಣ್ಯ ಪ್ರದೇಶ ವ್ಯಾಪ್ತಿಯ ತಿಮ್ಮಪ್ಪನಗುಡಿ ಅರಣ್ಯ ಭೂಮಿಯಲ್ಲಿ ಕಳದ 25–30 ವರ್ಷದಿಂದ ಉಳುಮೆ ಮಾಡುತ್ತಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರನ್ನು ಒಕ್ಕಲೆಬ್ಬಿಸಿ, ಉಳುಮೆಗೆ ಅವಕಾಶ ಕೊಡದ ಅರಣ್ಯ ಇಲಾಖೆ ಅಧಿಕಾರಿಗಳ ವರ್ತನೆ ವಿರೋಧಿಸಿ ಶಾಸಕ ಈ. ತುಕಾರಾಂ ಅವರು ಶನಿವಾರ ತಾವೇ ನೇಗಿಲು ಹಿಡಿದು ರೈತರ ಜಮೀನಿನಲ್ಲಿ ಉಳುಮೆ ಮಾಡಿದರು.

ಅರಣ್ಯ ಹಕ್ಕು ಸಮಿತಿಗೆ ಅರ್ಜಿ ಸಲ್ಲಿಸಿರುವ ಮತ್ತು 3 ಎಕರೆಗಿಂತ ಕಡಿಮೆ ಜಮೀನು ರೈತರನ್ನು ಒಕ್ಕಲೆಬ್ಬಿಸದೆ ಉಳುಮೆಗೆ ಅವಕಾಶ ಕೊಡಬೇಕು. ಇಲ್ಲದಿದ್ದರೆ ನಾನೇ ಸ್ಥಳಕ್ಕೆ ಬಂದು ಉಳುಮೆ ಮಾಡುತ್ತೇನೆ ಎಂದು ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಸಿದ್ದರು.

ಅಂತೆಯೇ ಶನಿವಾರ ರೈತರ ಜಮೀನಿಗೆ ಬಂದು ಶಾಸಕರು, ತಾವೇ ನೇಗಿಲು ಹಿಡಿದು ಉಳುಮೆ ಮಾಡಲಾರಂಭಿಸಿದರು. ಅಲ್ಲದೇ ಉಳುಮೆ ಮಾಡುವಂತೆ ರೈತರನ್ನು ಹುರಿದುಂಬಿ ಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ನನ್ನ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸವಾಲೆಸೆದರು. 

ಈ ವೇಳೆ ಸುದ್ದಿಗಾರರ ಜತೆ ಮಾತ ನಾಡಿದ ಶಾಸಕರು, ತಿಮ್ಮಪ್ಪನ ಗುಡಿ ಅರಣ್ಯ ಪ್ರದೇಶ ಬಳಿಯ 18–20 ಎಕರೆ ಅರಣ್ಯ ಪ್ರದೇಶವನ್ನು 10–12 ಮಂದಿ ಪರಿಶಿಷ್ಟ ಜಾರಿ ಹಾಗೂ ಪಂಗಡದ ರೈತರು ಕಳೆದ 25–30 ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ, 3 ವರ್ಷದಿಂದ ಇಲ್ಲಿ ಉಳುಮೆ ಮಾಡಲು ಅರಣ್ಯ ಇಲಾಖೆ ಅಧಿಕಾರಿ ಗಳು ಅವಕಾಶ ನೀಡುತ್ತಿಲ್ಲ. ಉಳುಮೆಗೆ ಮುಂದಾದವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 

ಅರಣ್ಯ ಜಮೀನಿನಲ್ಲಿ 3 ಎಕರೆಗಿಂತ ಕಡಿಮೆ ಪ್ರದೇಶದಲ್ಲಿ ಉಳುಮೆ ಮಾಡುತ್ತಿರುವ ಪರಿಶಿಷ್ಟ ಜಮಾಂಗದ ರೈತರನ್ನು ಒಕ್ಕಲೆಬ್ಬಿಸ ಬಾರದು ಎಂಬ ನಿಯಮವಿದ್ದರೂ ಅಧಿ ಕಾರಿಗಳು ವಿರೋಧ ವ್ಯಕ್ತಪಡಿಸುತ್ತಿರು ವುದು ಸರಿಯಲ್ಲ ಎಂದು ಟೀಕಿಸಿದರು.

ಈ ಪ್ರದೇಶದಲ್ಲಿ ಹಿಂದಿನಿಂದಲೂ ಉಳುಮೆ ಮಾಡುತ್ತಿರುವ ತಾಲ್ಲೂಕಿನ ಕೃಷ್ಣಾನಗರದ ರೈತರಾದ ಬಸಪ್ಪ, ರವಿಕುಮಾರ್, ತಾಯಪ್ಪ ಮಾತನಾಡಿ, ನಾವು ಹಲವು ವರ್ಷಗಳಿಂದ ಇಲ್ಲಿ ಉಳುಮೆ ಮಾಡುತ್ತಿದ್ದೇವೆ.  ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ಮೇಲೆ 2014ರಲ್ಲಿ ಕೇಸು ದಾಖಲಿಸಿದ್ದರು. 2016ರಲ್ಲಿ ಕೇಸು ಇತ್ಯರ್ಥವಾಗಿದೆ. ಆದರೂ ಉಳುಮೆಗೆ ಅವಕಾಶ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

* * 

ಅದು ಅರಣ್ಯಕ್ಕೆ ಸೇರಿದ ಜಾಗ. ಅರಣ್ಯ ಜಮೀನಿನಲ್ಲಿ ಯಾರೇ ಉಳುಮೆ ಮಾಡಿದರೂ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗು ವುದು
ನರಸಿಂಹಮೂರ್ತಿ
ವಲಯ ಅರಣ್ಯಾಧಿಕಾರಿ, ಉತ್ತರ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT