ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,100 ಶುದ್ಧ ಕುಡಿಯುವ ನೀರಿನ ಯಂತ್ರ ಅಳವಡಿಸಲು ಯೋಜನೆ: ಐಆರ್‌ಸಿಟಿಸಿ

Last Updated 23 ಜುಲೈ 2017, 11:18 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರೈಲ್ವೆ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸ ನಿಗಮ(ಐಆರ್‌ಸಿಟಿಸಿ) 1,100 ನೀರು ಪೂರೈಕೆ ಯಂತ್ರಗಳನ್ನು ಅಳವಡಿಸಲು ಯೋಜಿಸಿದೆ.

2017–18ನೇ ಸಾಲಿನಲ್ಲಿ ದೇಶದ 450 ರೈಲ್ವೆ ನಿಲ್ದಾಣಗಳಲ್ಲಿ 1,100 ನೀರು ಪೂರೈಕೆ ಯಂತ್ರಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಈ ಯಂತ್ರದ ಮೂಲಕ ಕೇವಲ ₹1ಕ್ಕೆ 300 ಮಿಲೀ ನೀರು ಪಡೆಯಬಹುದು.

ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಪ್ರಸ್ತುತ ಯೋಜನೆಯಿಂದ 2 ಸಾವಿರ ಜನರಿಗೆ ಉದ್ಯೋಗವೂ ದೊರೆಯಲಿದೆ ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT