ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಷ್ಕಾಗೆ ಕರೀನಾ ಪ್ರೇರಣೆ

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

‘ಬಾಲಿವುಡ್‌ ನಟಿ ಕರೀನಾ ಕಪೂರ್‌ ‘ಜಬ್‌ ವಿ ಮೆಟ್‌‘ನಲ್ಲಿ ನಿರ್ವಹಿಸಿದ ಗೀತ್‌ ಪಾತ್ರ, ಸಿನಿಮಾ ಜಗತ್ತಿಗೆ ಬರಲು ನನಗೆ ಪ್ರೇರಣೆ ನೀಡಿತು’ ಎಂದು ನಟಿ ಅನುಷ್ಕಾ ಶರ್ಮ ಹೇಳಿದ್ದಾರೆ.

ಇಮ್ತಿಯಾಜ್‌ ಅಲಿ ನಿರ್ದೇಶನದ ಹೊಸ ಚಿತ್ರ ‘ಜಬ್‌ ಹ್ಯಾರಿ ಮೆಟ್‌ ಸೇಜಲ್‌’ನಲ್ಲಿ ನಟಿಸಿರುವ ಅನುಷ್ಕಾ, ‘ಅಲಿಯವರು ತಮ್ಮ ಚಿತ್ರದಲ್ಲಿ ನಟಿಸುವ ಬಗ್ಗೆ ಕೇಳಿಕೊಂಡ ಕೂಡಲೇ ಒಪ್ಪಿಕೊಂಡೆ’ ಎಂದು ಹೇಳಿದ್ದಾರೆ.

‘ಹಲವು ವರ್ಷಗಳಿಂದ ಇಮ್ತಿಯಾಜ್‌ ಅಲಿ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕು ಎಂದು ಕಾತರಳಾಗಿದ್ದೆ. 2007ರಲ್ಲಿ ಬಿಡುಗಡೆಯಾದ ಜಬ್‌ ವಿ ಮೆಟ್‌ ಸಿನಿಮಾವನ್ನು ಬಿಕನೇರ್‌ನಲ್ಲಿ ಪೋಷಕರ ಜೊತೆ ಕುಳಿತು ನೋಡಿದ್ದೆ. ಅದೊಂದು ಅದ್ಭುತ ಸಿನಿಮಾ ಎಂದು ಆಗಲೇ ಅನಿಸಿತ್ತು. ಕರೀನಾ ಅಭಿನಯಿಸಿದ ಗೀತ್‌ ಪಾತ್ರ ಎಷ್ಟು ಇಷ್ಟವಾಗಿತ್ತೆಂದರೆ, ನಾನೂ ಸಿನಿಮಾದಲ್ಲಿ ಅಭಿನಯಿಸಬೇಕು ಎಂದು ಅಂದೇ ನಿರ್ಧರಿಸಿಬಿಟ್ಟಿದ್ದೆ’ ಎಂದು ‘ಜಬ್‌ ಹ್ಯಾರಿ ಮೆಟ್‌ ಸೇಜಲ್‌’ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅನುಷ್ಕಾ ಮುಕ್ತವಾಗಿ ಹೇಳಿಕೊಂಡಿದ್ದಾರೆ.

‘...ಸೇಜಲ್‌’ ಚಿತ್ರದಲ್ಲಿ ಅನುಷ್ಕಾ ಮೊದಲ ಬಾರಿ ಗುಜರಾತಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗುಜರಾತಿ ಮಾತಿನ ಶೈಲಿ ಮತ್ತು ಉಚ್ಚಾರಣೆಗಾಗಿ ಬಹಳಷ್ಟು ಕಷ್ಟಪಟ್ಟಿದ್ದಾರಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT