ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈಗ ತಿನ್ನದೇ ಇನ್ಯಾವಾಗ ತಿನ್ನೋದು?’

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

‘ಮುಂಜಾನೆಯ ತಂಪು ಹವೆಯಲ್ಲಿ ಗ್ರೀನ್‌ ಟೀ ಸವಿದು ಧ್ಯಾನ ಮಾಡುವ ಮೂಲಕ ನನ್ನ ದಿನ ಆರಂಭವಾಗುತ್ತದೆ. ಮನಸ್ಸು ಶುದ್ಧವಾಗಿದ್ದರೆ ಮುಖದ ಮೇಲೆ ಆ ಭಾವ ಕಾಣುತ್ತದೆ ಎಂದು ನಂಬಿದವಳು ನಾನು. ಹಾಗಾಗಿ ದೇಹಭಾಷೆಯ ಜೊತೆಗೆ ಮನಸ್ಸು ಶುದ್ಧಿಗೂ ಪ್ರಾಮುಖ್ಯ ನೀಡಿರುವುದರಿಂದ ಮುಂಜಾನೆಯಿಂದ ಸಂಜೆಯವರೆಗೂ ಉಲ್ಲಸಿತವಾಗಿಯೇ ಇರುತ್ತೇನೆ.

ಆಹಾರದ ವಿಷಯದಲ್ಲಿಯೂ ನಾನು ಕಡಿವಾಣ ಹಾಕಿಕೊಂಡಿಲ್ಲ. ಚೆನ್ನಾಗಿ ತಿನ್ನುತ್ತೇನೆ. ಅದನ್ನು ಕರಗಿಸಲು ಕಸರತ್ತು ಕೂಡ ಮಾಡುತ್ತೇನೆ. ‌ಫಿಟ್‌ ಆಗಿರುವುದು ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ. ದೈಹಿಕವಾಗಿ ಸದೃಢವಾಗಿದ್ದರೆ ಮಾನಸಿಕವಾಗಿಯೂ ಆರೋಗ್ಯವಾಗಿರುತ್ತೇವೆ. ಸಪೂರವಾಗಬೇಕು ಎಂದು ಬಾಯಿ ಕಟ್ಟುವ ಸ್ವಭಾವ ನನ್ನದಲ್ಲ. ಇಷ್ಟವಾಗುವ ತಿನಿಸುಗಳನ್ನು ಮನಸಾರೆ ಸವಿಯುತ್ತೇನೆ. ಈಗ ತಿನ್ನದೇ ಇನ್ಯಾವಾಗ ತಿನ್ನುವುದು ಅಲ್ವಾ? ಹಾಗಂತ ಸಿಕ್ಕಾಪಟ್ಟೆ ಎಣ್ಣೆಯ ಪದಾರ್ಥಗಳನ್ನು ತಿನ್ನುವುದಿಲ್ಲ. ಎಲ್ಲದಕ್ಕೂ ಒಂದು ಮಿತಿಯಿದೆ. ಹೋಟೆಲ್‌ಗಿಂತ ಮನೆಯೂಟದ ರುಚಿಯೇ ನನಗೆ ಇಷ್ಟ.

ಡಯಟ್‌ ಹೆಸರಿನಲ್ಲಿ ಅನ್ನಾಹಾರವನ್ನು ಬಿಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ದೇಹ ಬಾಡುತ್ತದೆಯೇ ಹೊರತು ಕಳೆಗಟ್ಟುವುದಿಲ್ಲ. ಅದೇ ಕಸರತ್ತು ಮಾಡಿದರೆ ದೇಹಕ್ಕೆ ರೂಪ ಕೊಡಬಹುದು, ಆರೋಗ್ಯವೂ ಹಿಡಿತದಲ್ಲಿರುತ್ತದೆ.

ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿ ಜೋಳದ ರೊಟ್ಟಿ, ಎಣ್ಣೆ ಪದಾರ್ಥ ಕಡಿಮೆ ಇರುವ ಆರೋಗ್ಯಯುಕ್ತವಾದ ಆಹಾರವನ್ನೇ ಹೆಚ್ಚಾಗಿ ತಿನ್ನುತ್ತೇವೆ. ಗಿರ್‌ಮಿಟ್‌ ಮಿರ್ಚಿ ಎಂದರೆ ನನಗೆ ತುಂಬಾ ಇಷ್ಟ. ಕೆಲವೊಮ್ಮೆ ಜಂಕ್‌ ಫುಡ್‌ಗಳನ್ನು ತಿನ್ನುತ್ತೇನೆ. ವಾರಾಂತ್ಯದಲ್ಲಿ ಹೆಚ್ಚು ಎಣ್ಣೆಯ ಪದಾರ್ಥ ತಿನ್ನುವುದರಿಂದ ಹೆಚ್ಚು ಕಸರತ್ತು ಮಾಡುತ್ತೇನೆ. ತಿನ್ನುವುದನ್ನು ಹೇಗೆ ಕರಗಿಸಬೇಕು ಎಂಬ ಜಾಣ್ಮೆ ಇರುವುದರಿಂದ ತಿನ್ನುವ ವಿಷಯದಲ್ಲಿ ಬಾಯಿಗೆ ಕಡಿವಾಣ ಹಾಕಿಕೊಂಡಿಲ್ಲ. ಕಾರ್ಡಿಯೊ, ಸೈಕ್ಲಿಂಗ್‌ ಹೀಗೆ ಜಿಮ್‌ ತರಬೇತುದಾರ ಉಮೇಶ್‌ ಅಣತಿಯಂತೆ ದಿನಕ್ಕೊಂದು ಕಸರತ್ತು ಮಾಡುತ್ತೇನೆ.  

ವಾಕಿಂಗ್‌ ಮಾಡುವುದು ಒಳ್ಳೆಯ ಅಭ್ಯಾಸ. ನನಗೂ ವಾಕಿಂಗ್‌ ಮಾಡುವ ಆಸೆಯಿದೆ. ಆದರೆ ಸಾಧ್ಯವಾಗುತ್ತಿಲ್ಲ. ಮನೆ ಹತ್ತಿರವೇ ಕೆಲವೊಮ್ಮೆ ನಡೆದಾಡುತ್ತಾ ಸುತ್ತು ಹಾಕುತ್ತೇನೆ. ದೇಹದ ಜತೆಗೆ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಎಂಬ ಅರಿವು ನನಗಿದೆ. ಹಾಗಾಗಿ ಸಂಗೀತಕ್ಕೆ ಮನಸ್ಸು ಕೊಟ್ಟು ಹಗುರಾಗುತ್ತೇನೆ.

ಚರ್ಮದ ಸೌಂದರ್ಯಕ್ಕೆ ನೈಸರ್ಗಿಕ ಉತ್ಪನ್ನಗಳನ್ನು ಬಳಸುತ್ತೇನೆ. ಮುಖಕ್ಕೆ ಸಾಬೂನು ಹಚ್ಚುವುದಿಲ್ಲ. ಕಡಲೆಹಿಟ್ಟು ಬಳಸಿಯೇ ಮುಖ ತೊಳೆಯುತ್ತೇನೆ. ಚೆನ್ನಾಗಿ ನೀರು ಕುಡಿಯುತ್ತೇನೆ. ಮನಸ್ಸು ಶುದ್ಧವಾಗಿರುವುದರಿಂದ ಸಹಜವಾಗಿಯೇ ಅದು ಮುಖದಲ್ಲಿ ಪ್ರತಿಫಲಿತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT