ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶ್ರಮವೇ ಯಶಸ್ಸಿಗೆ ರಹದಾರಿ: ಸಂದೀಪಾ ಧರ್

Last Updated 24 ಜುಲೈ 2017, 8:46 IST
ಅಕ್ಷರ ಗಾತ್ರ

* ನಟನೆ ನಿಮ್ಮನ್ನು ಸೆಳೆದಿದ್ದು ಹೇಗೆ?
ನಾನು ಯಾವತ್ತೂ ನಟಿಯಾಗುತ್ತೇನೆ ಅಂದುಕೊಂಡಿರಲಿಲ್ಲ. ಆಕಸ್ಮಿಕವಾಗಿ ಸಿಕ್ಕ ಅವಕಾಶದ ಮೂಲಕ ನಟನಾ ಕ್ಷೇತ್ರಕ್ಕೆ ಬಂದೆ. ನನ್ನ ಮೊದಲ ಚಿತ್ರದ ನಂತರ ನನಗೆ ಸೆಟ್‌ನಲ್ಲಿ ಇರೋದು ತುಂಬಾ ಇಷ್ಟವಾಗತೊಡಗಿತು

* ‘ಬಾರಾತ್ ಕಂಪೆನಿ’ ಸಿನಿಮಾದ ಬಗ್ಗೆ ಹೇಳಿ...
’ಬಾರಾತ್ ಕಂಪೆನಿ’ ಮರ ಸುತ್ತುವ ರೊಮ್ಯಾಂಟಿಕ್, ಹಾಸ್ಯ ಪ್ರಧಾನ ಚಿತ್ರವಲ್ಲ. ಇವೆಲ್ಲಕ್ಕಿಂತ ಭಿನ್ನವಾಗಿರುವ ಸಿನಿಮಾವಿದು.

* ಕಲಾವಿದೆಯಾಗಿ ಎದುರಿಸಿದ ಸವಾಲುಗಳು...
ಎಲ್ಲಾ ಕ್ಷೇತ್ರಗಳಲ್ಲೂ ಲಿಂಗ ತಾರತಮ್ಯ ಇದ್ದೇ ಇದೆ. ಸಿನಿಮಾ ರಂಗವೂ ಅದಕ್ಕೆ ಹೊರತಾಗಿಲ್ಲ. ಸಿನಿಮಾ ರಂಗದಲ್ಲಿ ಲಿಂಗ ತಾರತಮ್ಯದ ಜತೆಗೆ ಸಂಭಾವನೆಯಲ್ಲಿ ವ್ಯತ್ಯಾಸ ಸಮಸ್ಯೆಯನ್ನೂ ಅನುಭವಿಸಿದ್ದೇನೆ. ಕಲಾವಿದರಾಗಿ ನಟ ಅಥವಾ ನಟಿಯೊಬ್ಬಳು ತಮ್ಮ ಭಾವನೆಗಳನ್ನು ಜನರ ಮನಮಟ್ಟುವಂತೆ ಅಭಿನಯಿಸಬೇಕು. ಅದೇ ನಿಜವಾದ ಸವಾಲು.

* ನಿಮ್ಮ ಫಿಟ್‌ನೆಸ್ ಮಂತ್ರ...
ಫಿಟ್‌ನೆಸ್ ನನ್ನ ಪಾಲಿಗೆ ಮಹತ್ವದ್ದು. ನಾನು ನುರಿತ ನೃತ್ಯತಜ್ಞರಿಂದ ನೃತ್ಯ ಕಲಿತಿರುವೆ. ಕಿಕ್ ಬಾಕ್ಸಿಂಗ್ ಮತ್ತು ಯೋಗದ ಮೂಲಕ ಫಿಟ್‌ನೆಸ್ ಕಾಯ್ದುಕೊಂಡಿದ್ದೇನೆ. 

ರಂಗಭೂಮಿಯಲ್ಲೂ ನೀವು ಸಕ್ರಿಯರಾಗಿದ್ದೀರಿ.

* ’ವೆಸ್ಟ್ ಸೈಡ್ ಸ್ಟೋರಿ’ ಬಗ್ಗೆ ಹೇಳಿ....

’ವೆಸ್ಟ್ ಸೈಡ್ ಸ್ಟೋರಿ’ ಒಂದು ರೋಚಕ ಅನುಭವ. ವೇದಿಕೆ ಮೇಲೆ ಅಭಿನಯಿಸುವುದು ಮತ್ತು ನೃತ್ಯ ಮಾಡುವುದೆಂದರೆ ನನಗೆ ತುಂಬಾ ಇಷ್ಟ. ಸಂಗೀತ, ನೃತ್ಯದ ಸಮಾಗಮವಾಗಿರುವ ‘ವೆಸ್ಟ್ ಸೈಡ್ ಸ್ಟೋರಿ’ ನಮ್ಮ 104ನೇ ಷೋ.

* ಸ್ವಜನ ಪಕ್ಷಪಾತ ಚರ್ಚೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರತಿ ಕ್ಷೇತ್ರದಲ್ಲೂ ಸ್ವಜನ ಪಕ್ಷಪಾತ್ರವಿದ್ದೇ ಇರುತ್ತದೆ. ಅದನ್ನು ಅಲ್ಲಗಳೆಯಲಾಗದು. ಸ್ವಜನ ಪಕ್ಷಪಾತದಿಂದ ನೀವು ಆರಂಭದಲ್ಲಿ ಮುಂಚೂಣಿಗೆ ಬರಬಹುದು. ಆದರೆ, ಅದು ದೀರ್ಘಕಾಲ ನಡೆಯುವುದಿಲ್ಲ. ಕೊನೆಯಲ್ಲಿ ನಿಮ್ಮ ಪರಿಶ್ರಮವೇ ನಿಮ್ಮ ಯಶಸ್ಸಿಗೆ ಮಾನದಂಡವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT