ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂ: ಡಿಜಿಟಲ್‌ ಚಿನ್ನ ರೂಪದಲ್ಲಿ ನಗದು ವಾಪಸ್‌

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್‌ ವಾಲೆಟ್‌ ಪೇಟಿಎಂ ಮೂಲಕ ಮಾಡುವ ವಹಿವಾಟಿಗೆ ಗ್ರಾಹಕರು ಪಡೆಯುವ ನಗದು ವಾಪಸ್‌ ಮೊತ್ತವನ್ನು ಇನ್ನು ಮುಂದೆ ‘ಡಿಜಿಟಲ್‌ ಚಿನ್ನ’ದ ರೂಪದಲ್ಲಿ ಪಡೆಯಬಹುದಾಗಿದೆ. 

‘ಪೇಟಿಎಂ ಮೂಲಕ ನಡೆಸುವ ವಹಿವಾಟಿನಿಂದ ಗ್ರಾಹಕರು ಪಡೆಯುವ  ಕ್ಯಾಷ್‌ಬ್ಯಾಕ್‌ ಅನ್ನು ಹಲವಾರು ಗ್ರಾಹಕರು ಪೇಟಿಎಂ ಡಿಜಿಟಲ್‌ ಗೋಲ್ಡ್‌ಗೆ ಬದಲಾಯಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ’ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಕೃಷ್ಣ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಪೇಟಿಎಂ ಬಳಕೆ ಮತ್ತಷ್ಟು ಉತ್ತೇಜಿಸಲು ಡಿಜಿಟಲ್‌ ಗೋಲ್ಡ್‌ ಪಡೆಯಲು ಸಂಸ್ಥೆ ಅನುವು ಮಾಡಿಕೊಡುತ್ತಿದೆ’ ಎಂದು ತಿಳಿಸಿದರು.

‘ಬೆಂಗಳೂರು, ಹೈದರಾಬಾದ್‌, ಠಾಣೆ ಹಾಗೂ ಅಹಮದಾಬಾದ್‌ ನಗರಗಳಲ್ಲಿ  ಗ್ರಾಹಕರಿಗಾಗಿ  ಸಂಸ್ಥೆಯು ಶುಲ್ಕ ರಹಿತ ಲಾಕರ್‌ ಸೌಲಭ್ಯ ಒದಗಿಸುತ್ತದೆ. ಅಲ್ಲದೇ ಎಂಎಂಟಿಸಿ–ಪಿಎಎಂಪಿ ಸಂಸ್ಥೆಯು ಪೇಟಿಎಂ ಜತೆ ಕೈಜೋಡಿಸಿದ್ದು, ಚಿನ್ನಕ್ಕೆ ಸುರಕ್ಷತೆ ನೀಡುತ್ತಿದೆ’ ಎಂದು ಹೇಳಿದರು.

‘ಸಂಸ್ಥೆಯು 24 ಕ್ಯಾರಟ್‌ನ 999.9 ಪರಿಶುದ್ಧ ಚಿನ್ನ ಒದಗಿಸುತ್ತಿದೆ. ಅದನ್ನು ಗ್ರಾಹಕರು ಕೊಳ್ಳುವ ಹಾಗೂ ಮಾರುವ ಸೌಲಭ್ಯವನ್ನು ಒದಗಿಸುತ್ತದೆ’ ಎಂದರು.

ಭಾರತದ ಎಂಎಂಟಿಸಿ–ಪಿಎಎಂಪಿ ಸಂಸ್ಥೆ ಅಧ್ಯಕ್ಷ  ಮೆಹಿದ್‌ ಬಾರ್ಕೋರ್ಡರ್  ಮಾತನಾಡಿ, ‘ಪೇಟಿಎಂ ಜತೆಗಿನ ಸಹಭಾಗಿತ್ವದಿಂದ  ಜನರಿಗೆ ಶುದ್ಧ ಚಿನ್ನ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT