ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35,460 ಎಕರೆ ಭತ್ತ ನಾಟಿ

ಭತ್ತದ ಕೃಷಿಗೆ ಆಶಾದಾಯಕವಾದ ಯಂತ್ರಧಾರೆ, ಕೃಷಿ ಭಾಗ್ಯ
Last Updated 24 ಜುಲೈ 2017, 7:00 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಮುಂಗಾರು ಮಳೆ ತೀವ್ರಗೊಂಡಿರು ವಂತೆಯೇ ಕೃಷಿ ಚಟುವಟಿಕೆಗಳೂ ಬಿರು ಸುಗೊಂಡಿವೆ. ಕರಾವಳಿಯ ಸಾಂಪ್ರದಾಯಿಕ ಭತ್ತದ ಕೃಷಿಯಲ್ಲಿ ಭತ್ತ ನಾಟಿ ಗೊಂಡು ಗದ್ದೆಗಳು ಹಸಿರಿನಿಂದ ನಳನಳಿಸತೊಡಗಿವೆ.

ಭತ್ತದ ಕೃಷಿಗೆ ಸುಮಾರು 504 ಕ್ವಿಂಟಲ್ ಬಿತ್ತನೆ ಬೀಜವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿತರಿಸಲಾಗಿದ್ದು, ಪ್ರಮುಖವಾಗಿ ಎಂಓ4, ಜ್ಯೋತಿ, ಜಯಾ, ಉಮಾ ಬ್ರಾಂಡಿನ ಬೀಜಗಳನ್ನು ರೈತರು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಪೈಕಿ ಕರಾವಳಿಯ ಕೆಂಪು ಅಕ್ಕಿಗೆ ಎಂಓ4 ಬ್ರಾಂಡ್ ಹೆಚ್ಚು ಸೂಕ್ತವಾಗುವ ಕಾರಣಕ್ಕೆ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ. ರಾಜ್ಯ ಸರ್ಕಾರವು ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿಸಲು ಸಹಾಯಧನವನ್ನೂ ನೀಡುತ್ತಿದೆ.

ರಸಗೊಬ್ಬರದ ಕೊರತೆಯಾಗದಂತೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 9, 330 ಟನ್ ರಸಗೊಬ್ಬರ ವಿತರಿಸುವ ಗುರಿ ಹೊಂದಿದ್ದು, ಈ ಪೈಕಿ ಈಗಾಗಲೇ 7,500 ಟನ್ ವಿತರಿಸಲಾಗಿದೆ. ಇನ್ನೂ 1,750 ಟನ್‌ಗಳಷ್ಟು ದಾಸ್ತಾನು ಸಂಗ್ರಹಿ ಸಿಡಲಾಗಿದೆ. ಖಾಸಗಿ ವಿತರಕರಲ್ಲದೇ, ವಿವಿಧ ಸಹಕಾರ ಸಂಘಗಳು, ಸೊಸೈ ಟಿಗಳ ಮೂಲಕವೂ ರಸಗೊಬ್ಬರವನ್ನು ರೈತರು ಖರೀದಿಸುತ್ತಿದ್ದಾರೆ.

ವರದಾನವಾದ ಕೃಷಿ ಯಂತ್ರಧಾರೆ: ಕೃಷಿಯನ್ನು ಬಹುವಾಗಿ ಕಾಡುವ ಕಾರ್ಮಿ ಕರ ಸಮಸ್ಯೆಯನ್ನು ನಿವಾರಿಸಲು ಯಂ ತ್ರೋಪಕರಣ ಬಳಕೆಗೆ ಆದ್ಯತೆ ನೀಡ ಲಾಗಿದ್ದು, ರೈತರಿಗೆ ಕೃಷಿ ಯಂತ್ರ ಹಾಗೂ ಇನ್ನಿತರ ಉಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸಲು ‘ಕೃಷಿ ಯಂತ್ರ ಧಾರೆ’ ಯೋಜನೆ ಜಾರಿಗೆ ತರಲಾಗಿದೆ.

ಈ ಕೇಂದ್ರಗಳ ಮೂಲಕ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಅತ್ಯಲ್ಪ ಬಾಡಿಗೆಗೆ ನೀಡಲಾಗುತ್ತಿದೆ. ಟಿಲ್ಲರ್, ಟ್ರ್ಯಾಕ್ಟರ್, ನಾಟಿಯಂತ್ರ, ಸ್ಪೇಯರ್, ಕಳೆ ನಿಯಂತ್ರಣ ಯಂತ್ರ, ಒಕ್ಕಣೆ ಯಂತ್ರ (ನೇಜಿ ಕಟಾವು ಯಂತ್ರ) ಮತ್ತಿತರ ಯಾಂತ್ರೀಕೃತ ಉಪಕರಣಗಳನ್ನು ರೈತರು ಬಾಡಿಗೆ ಮೂಲಕ ಕೊಂಡೊಯ್ಯಬಹು ದಾಗಿದೆ. ಇದು ರೈತರಲ್ಲಿ ಕೃಷಿ ಚಟು ವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಯಶಸ್ಸು ಕಂಡಿದೆ. 

ಕೃಷಿ ಯಂತ್ರಧಾರೆ ಯೋಜನೆಯಡಿ 2 ವರ್ಷಗಳಲ್ಲಿ ₹3.41 ಕೊಟಿ ಅನು ದಾನದಲ್ಲಿ ಜಿಲ್ಲೆಯ 11 ಹೋಬಳಿ ಕೇಂ ದ್ರಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗ ಳನ್ನು  ತೆರೆಯಲಾಗಿದ್ದು, ಈ ಕೇಂದ್ರಗಳ ಮೂಲಕ ರೈತರಿಗೆ ಆಧುನಿಕ ಕೃಷಿ ಯಂತ್ರಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸಲಾಗುತ್ತಿದೆ.

ಯಂತ್ರಗಳ ಮೂಲಕ ಭತ್ತದ ನಾಟಿ ಮಾಡುವ ರೈತರಿಗೆ ಪ್ರತಿ ಎಕರೆಗೆ ₹1, 600 ರಂತೆ ರಾಜ್ಯ ಸರ್ಕಾರವೂ ಪ್ರೋತ್ಸಾ ಹಧನ  ನೀಡುತ್ತಿದೆ. ಇದು ರೈತರಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಯಶಸ್ಸು ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 8,497 ರೈತರು ಕೃಷಿ ಯಂತ್ರಧಾರೆ  ಪ್ರಯೋಜನ ಪಡೆದಿರುತ್ತಾರೆ.

ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ಕೃಷಿ ಯಂತ್ರಧಾರೆ ಕೇಂದ್ರಗ ಳನ್ನು ನಿರ್ವಹಿಸಲಾಗುತ್ತಿದೆ. ವಿಟ್ಲದಲ್ಲಿ ರೈತರೊಬ್ಬರು ಕೃಷಿ ಯಂತ್ರಧಾರೆ ಕೇಂದ್ರವನ್ನು ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ನಿರ್ವಹಣೆ ಮಾಡುವ ವರು 75:25 ಅನುಪಾತದಲ್ಲಿ ಕೇಂದ್ರದ ವೆಚ್ಚವನ್ನು ನಿರ್ವಹಿಸುತ್ತಿದ್ದಾರೆ.

ಕೃಷಿ ಭಾಗ್ಯ: ಪ್ರಸಕ್ತ ವರ್ಷದಿಂದ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೆ ಬಂದಿದೆ. ಇದರಡಿ ರೈತರು ತಮ್ಮ ಕೃಷಿ ಜಮೀನಿಗೆ ಹೊಂಡಗಳನ್ನು ತೆಗೆದು ನೀರು ಸಂಗ್ರಹಿಸಿ, ಇಂಗಿಸುವ ವ್ಯವಸ್ಥೆ ಕೈಗೊಳ್ಳಲು ರಾಜ್ಯ ಸರ್ಕಾರ ಸಹಾಯ ಧನ ನೀಡುತ್ತಿದೆ.

ಕೃಷಿ ಹೊಂಡಗಳ ವಿನ್ಯಾಸವನ್ನು ಕೃಷಿ ಇಲಾಖೆ ನೀಡಲಿದ್ದು, ರೈತರು ತಾವೇ ಹೊಂಡವನ್ನು ಕೊರೆದು ನಿರ್ವಹಿ ಸಲಿದ್ದಾರೆ. ರಾಜ್ಯ ಸರ್ಕಾರ ಇದಕ್ಕಾಗಿ ವೆಚ್ಚದ ಶೇ 80ರಷ್ಟು ಸಹಾಯಧನ (ಪರಿ ಶಿಷ್ಟ ಜಾತಿ ಮತ್ತು ಪಂಗಡದವವರಿಗೆ ಶೇ 90) ನೀಡುತ್ತಿದೆ.

ರೈತರಿಗೆ ಶೇ 90ರಷ್ಟು ರಿಯಾಯಿತಿ ದರದಲ್ಲಿ ತುಂತುರು ನೀರಾವರಿ ಘಟಕ, ಸಾಮಾನ್ಯ ರೈತರಿಗೆ ಶೇ 50 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ 75ರ ರಿಯಾಯಿತಿ ದರದಲ್ಲಿ ಕೃಷಿ ಸುಣ್ಣ, ಸಾವಯವ ಗೊಬ್ಬರ, ಲಘು ಷೋಷಕಾಂಶಗಳನ್ನು ಬೇಡಿಕೆಗೆ ತಕ್ಕಂತೆ ಪೂರೈಸಲಾಗುತ್ತಿದೆ. 4 ವರ್ಷದಲ್ಲಿ ₹1.35 ಕೋಟಿ ಅನುದಾನದಲ್ಲಿ 205 ಪವರ್ ಟಿಲ್ಲರ್ ಹಾಗೂ ₹2.69 ಕೋಟಿ ಅನುದಾನದಲ್ಲಿ 2,168 ಪವರ್ ವೀಡರ್ ವಿತರಿಸಲಾಗಿದೆ.

ಕರಾವಳಿಯಲ್ಲಿ ಭತ್ತವು ರೈತರ ಪಾರಂಪರಿಕ ಕೃಷಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಬಿತ್ತನೆ ವಿಸ್ತೀರ್ಣ ಕಡಿಮೆ ಆಗುತ್ತಿದ್ದರೂ, ಸರ್ಕಾರದ ಕೃಷಿ ಯೋಜನೆಗಳು ರೈತರಲ್ಲಿ ಕೃಷಿ  ಚಟು ವಟಿಕೆಗಳಲ್ಲಿ ಮುಂದುವರಿಯಲು ಪ್ರೋತ್ಸಾಹದಾಯಕವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ತಿಳಿಸಿದ್ದಾರೆ.

ಕೆಲವೆಡೆ ಎರಡು ಬೆಳೆ
ಮಳೆಯಾಧಾರಿತವಾಗಿ ಭತ್ತದ ಕೃಷಿ ಮಾಡುತ್ತಿರುವ ಜಿಲ್ಲೆಯ ರೈತರು ಕೆಲವೆಡೆ ಎರಡು ಬೆಳೆ ತೆಗೆಯುವುದೂ ಉಂಟು. ಕೃಷಿ ಇಲಾಖೆ ಮಾಹಿತಿ ಪ್ರಕಾರ ಈ ವರ್ಷ ಮುಂಗಾರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 14,350 ಹೆಕ್ಟೇರ್ ಅಂದರೆ 35,460 ಎಕರೆ ಭೂಮಿಯಲ್ಲಿ ಇದುವರೆಗೆ ಭತ್ತದ ನಾಟಿ ಮಾಡಲಾಗಿದೆ. ಇದರಲ್ಲಿ ಮಂಗಳೂರು ತಾಲ್ಲೂಕಿನಲ್ಲಿ 3ಸಾವಿರ ಹೆಕ್ಟೇರ್, ಬಂಟ್ವಾಳ- 5,200 ಹೆಕ್ಟೇರ್, ಬೆಳ್ತಂಗಡಿ 4,550 ಹೆಕ್ಟೇರ್, ಪುತ್ತೂರು 1250, ಹೆಕ್ಟೇರ್ ಹಾಗೂ ಸುಳ್ಯ ತಾಲ್ಲೂಕಿನಲ್ಲಿ 350 ಹೆಕ್ಟೇರ್ ಭೂಮಿಯಲ್ಲಿ ಭತ್ತದ ಕೃಷಿ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರ್ಷಿಕವಾಗಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಸೇರಿ 2013-14ರಲ್ಲಿ  56,452 ಎಕರೆ,  2014-15ರಲ್ಲಿ  53,640 ಎಕರೆ, 2015-16ರಲ್ಲಿ 48,689 ಎಕರೆ ಹಾಗೂ 2016-17ರಲ್ಲಿ 43,282 ಎಕರೆ ಪ್ರದೇಶದಲ್ಲಿ ಭತ್ತ ಕೃಷಿ ಮಾಡಲಾಗಿತ್ತು.

*
ಕೃಷಿ ಭಾಗ್ಯದಿಂದ ರೈತರ ಜಮೀನು ಅಲ್ಲದೇ ಸುತ್ತಲಿನ ಬಾವಿ, ಕೆರೆಗಳಲ್ಲೂ ನೀರಿನ ಮಟ್ಟ ಹೆಚ್ಚಲಿದೆ. ಮುಂದಿನ ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗೆ ಇದು ಆಶಾದಾಯಕವಾಗಲಿದೆ.
-ಕೆಂಪೇಗೌಡ,
ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT