ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಶಿಕ್ಷಣ ಪ್ರಾಯೋಗಿಕವಾಗಲಿ

ನಂದಿನಿ ನದಿಯ ತಟದಲ್ಲಿ ಅರಳಿದ ‘ತುಳುಸಿರಿ ತುದೆಬರಿ’ ಕಾರ್ಯಕ್ರಮ
Last Updated 24 ಜುಲೈ 2017, 7:07 IST
ಅಕ್ಷರ ಗಾತ್ರ

ಮೂಲ್ಕಿ: ಕೃಷಿಯಲ್ಲಿಯೇ ಅರಳಿದ ನಮ್ಮ ಬದುಕು ಸ್ವಾವಲಂಬಿಯ ಜೀವನ ನಡೆಸಿ ಕೃತಾರ್ಥರಾಗಿದ್ದೇವೆ. ಮುಂದಿನ ಪೀಳಿ ಗೆಗೆ ಇದನ್ನು ಕಲಿಸದಿದ್ದಲ್ಲಿ ಬದುಕಿನೊಂ ದಿಗೆ ಕಷ್ಟದ ದಿನಗಳೊಂದಿಗೆ ಕೃಷಿ ಯನ್ನೂ ಸಹ ಮರೆಯುವ ಸಾಧ್ಯತೆ ಇದೆ. ಶಿಕ್ಷಣ ಸಂಸ್ಥೆಯ ಮೂಲಕ ಗದ್ದೆಯಲ್ಲೂ ಪಾಠ ನಡೆಸುವ ಬಗ್ಗೆ ಚಿಂತನೆ ನಡೆಸ ಬೇಕು ಎಂದು ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇ ಜಿನ ಪ್ರಾಂಶುಪಾಲ ಮೆಲ್ವಿನ್ ಮೆಂ ಡೋನ್ಸಾ ಎಸ್.ಜೆ. ಅಭಿಪ್ರಾಯಪಟ್ಟರು.

ಮೂಲ್ಕಿ ಬಳಿಯ ಪಾವಂಜೆಯ ಅಗೋಳಿ ಮಂಜಣ ಜಾನಪದ ಕೇಂದ್ರ, ನಿನಾದ ತುಳು ಅಧ್ಯಯನ ಕೇಂದ್ರ ಹಾಗೂ ಇತರೆ ಸಂಘ ಸಂಸ್ಥೆಯೊಂದಿಗೆ ಭಾನುವಾರ ನಡೆದ ನಂದಿನಿ ನದಿಯ ತಟದಲ್ಲಿ ‘ತುಳುಸಿರಿ ತುದೆಬರಿ’ ಕಾರ್ಯ ಕ್ರಮವನ್ನು ನಾಟಿಗೆ ನೇಜನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಾವಂಜೆ ಶ್ರೀ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರಿನ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕಿ ನಿವೇದಿತ ಲೋಬೋ ಮಾತನಾಡಿ, ‘ವಿಶ್ವವಿದ್ಯಾ ಲಯ ಮಟ್ಟದಲ್ಲಿ ಶಿಕ್ಷಣ ನೀಡುವಾಗ ಕೃಷಿಯನ್ನು ಸಹ ಪ್ರಾಯೋಗಿಕವಾಗಿ ಶಿಕ್ಷಣ ನೀಡುವ ಪದ್ಧತಿ ಜಾರಿಯಾದಲ್ಲಿ ವಿದ್ಯಾರ್ಥಿಗಳಿಗೆ ನಮ್ಮತನ ಏನೆಂದು ಆರಿಯಲು ಸಾಧ್ಯವಿದೆ’ ಎಂದರು.

ದೇವಸ್ಥಾನದ ಪ್ರಮುಖರಾದ ಡಾ. ಯಾಜಿ ನಿರಂಜನ ಭಟ್ ವಿದ್ಯಾರ್ಥಿಗಳು ಗದ್ದೆಗೆ ಇಳಿಯುವ ಮೊದಲು ಭೂಮಿ ಪೂಜೆ ನೆರವೇರಿಸಿದರು. ಎಪಿಎಂಸಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಪ್ರಮೋದ್ ಕುಮಾರ್ ಅವರಿಗೆ ತುಳುಸಿರಿ ಗೌರವ ನೀಡಲಾಯಿತು. ಹಿರಿಯ ಕೃಷಿಕ ಕರಿ ಯಪ್ಪ ಕುಕ್ಯಾನ್‌ ಅವರನ್ನು ಸನ್ಮಾನಿ ಸಲಾಯಿತು.

ಕಾರ್ಯಕ್ರಮವನ್ನು ಪಾವಂಜೆಯ  ಅಗೋಳಿ ಮಂಜಣ ಜಾನಪದ ಕೇಂದ್ರ ವಾದ ನಿನಾದ  ತುಳು ಅಧ್ಯಯನ ಕೇಂದ್ರ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರ ಹ್ಮಣ್ಯಸ್ವಾಮೀ ದೇವಸ್ಥಾನ, ಹಳೆಯಂಗಡಿ ಲಯನ್ಸ್  ಮತ್ತು ಲಿಯೋ ಕ್ಲಬ್ ಜಂಟಿ ಯಾಗಿ ಆಯೋಜಿಸಿದ್ದ ಈ ಕಾರ್ಯಕ್ರ ಮದಲ್ಲಿ  ಸುರತ್ಕಲ್ ಗೋವಿಂದದಾಸ ಪದವಿ ಕಾಲೇಜು, ಹಳೆಯಂಗಡಿಯ ನಾರಾಯಣ ಸನಿಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಹಳೆ ಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 100 ವಿದ್ಯಾರ್ಥಿಗಳು ಗದ್ದೆಯಲ್ಲಿ ನಾಟಿ ಮಾಡಿದರು.

ಡಾ ಸದಸ್ಯ ಎಚ್. ವಸಂತ ಬೆರ್ನಾಡ್‌, ಗೋವಿಂದದಾಸ ಕಾಲೇಜಿನ ಉಪ ಪ್ರಾಂಶುಪಾಲ  ಪ್ರೊ. ಕೃಷ್ಣ ಮೂರ್ತಿ, ನಿನಾದ ಕೇಂದ್ರದ ಮಹಾ ಪೋಷಕ ಕಡಂಬೋಡಿ ಮಹಾಬಲ ಪೂಜಾರಿ, ಲಯನ್ಸ್ ಕ್ಲಬ್‌ನ  ಯಾದವ ದೇವಾಡಿಗ, ರಮೇಶ್ ಬಂಗೇರ, ಬ್ರಜೇ ಷ್‌ಕುಮಾರ್‌, ಧರ್ಮಪಾಲ್, ಕೇಂದ್ರದ ಜಯಂತಿ ಸಂಕಮಾರ್, ಕೃಷಿಕ ಕರಿಯಪ್ಪ ಕುಕ್ಯಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂವಹನವನ್ನು  ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ನಡೆಸಿಕೊಟ್ಟರು. ವಿಕಲ ಚೇತನ ಯುವ ಕೃಷಿಕ ದುರ್ಗಾ ದಾಸ್‌ ಮಕ್ಕಳಿಗೆ ಕೃಷಿ ಪಾಠವನ್ನು ಹೇಳಿಕೊಟ್ಟರು.  ಯುವ ಸಾಹಿತಿಗಳಾದ ಅನು ಸಂಕಮಾರ್ ಮತ್ತು ಭವ ಸಂಕ ಮಾರು ಅವಳಿ ಸಹೋದರಿಯರು ಪಾಡ್ದ ನವನ್ನು ಗದ್ದೆಯಲ್ಲಿ ನಾಟಿ ಮಾಡುವಾಗ ಹಾಡಿದರು. ಉದ್ಘಾಟನೆಯಿಂದ ಹಿಡಿದು ಮಾತು, ಸನ್ಮಾನ, ಗೌರವಾ ರ್ಪಣೆ, ವಂದನೆ ಎಲ್ಲವೂ ಗದ್ದೆಯ ನಡುವೆ ನಡೆದಿದ್ದು ವಿಶೇಷವಾಗಿತ್ತು.

ಪಾವಂಜೆ ಅಗೋಳಿ ಮಂಜಣ ಜಾನಪದ ಕೇಂದ್ರದ ಗೌರವಾಧ್ಯಕ್ಷ  ಚಂದ್ರಶೇಖರ ನಾನಿಲ್ ಸ್ವಾಗತಿಸಿ, ಪ್ರಸ್ತಾವನೆಗೈದರು, ಭಾಸ್ಕರ ಸಾಲ್ಯಾನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT