ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರು ತಿಂಗಳೊಳಗೆ 24X7 ನೀರಿನ ಯೋಜನೆ ಪೂರ್ಣ’

Last Updated 24 ಜುಲೈ 2017, 8:10 IST
ಅಕ್ಷರ ಗಾತ್ರ

ಗದಗ: ‘ಗದಗ–ಬೆಟಗೇರಿ ಅವಳಿ ನಗರಕ್ಕೆ ನಿರಂತರ ನೀರು ಪೂರೈಸುವ 24X7 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆರು ತಿಂಗಳೊಳಗೆ ಮುಗಿ ಯಲಿದ್ದು, ನಗರದ 35 ವಾರ್ಡ್‌ಗಳಿಗೂ ನೀರು ಪೂರೈಕೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು. ನಗರಸಭೆ ಆವರಣದಲ್ಲಿ ಭಾನು ವಾರ ನಡೆದ ಸಸಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಗದಗ ಜಿಲ್ಲೆ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಪರಿಸರ ಕಾಪಾಡುವ, ಜಲಸಂಪನ್ಮೂಲ ಸಂರಕ್ಷಿಸುವ ಮತ್ತು ಉದ್ಯೋಗ ಸೃಷ್ಟಿಸುವ ಕಾರ್ಯ ನಡೆಯುತ್ತಿದೆ. ಹಾಕಿ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಕಾರ್ಯ ಮುಗಿಯುವ ಹಂತ ದಲ್ಲಿದ್ದು, ಅವಳಿನಗರ ಕ್ರೀಡಾ ನಗರ ವಾಗಿ  ಹೊರಹೊಮ್ಮಲಿದೆ’ ಎಂದರು.

ಶೌಚಾಲಯ ನಿರ್ಮಾಣಕ್ಕೆ ₹ 15 ಸಾವಿರ: ‘ಗ್ರಾಮೀಣಾಭಿವೃದ್ಧಿ ಇಲಾಖೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿಸಲು ಎಲ್ಲ ನಗರ ಪ್ರದೇಶಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ನೀಡು ತ್ತಿದ್ದ ₹ 4 ಸಾವಿರ ಸಹಾಯಧನವನ್ನು ₹ 15 ಸಾವಿರಕ್ಕೆ ಹೆಚ್ಚಿಸಿದೆ’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

‘ನಗರೀಕರಣ ಮತ್ತು ವಲಸೆ ಪರಿಣಾಮ ನಗರ ಪ್ರದೇಶಗಳು ವಿಸ್ತರಣೆ ಗೊಳ್ಳುತ್ತಿದ್ದು, ಮೂಲ ಸೌಕರ್ಯದ ಕೊರತೆ ಹೆಚ್ಚಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಿನ ಮೂರು ದಶಕಗಳ ದೂರದೃಷ್ಟಿ ಇಟ್ಟುಕೊಂಡು, ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದೆ.

ಗದಗ–ಬೆಟಗೇರಿ ಅವಳಿ ನಗರದಲ್ಲಿ ಈಜುಗೋಳ ನಿರ್ಮಾಣಕ್ಕೆ ₹ 1.5 ಕೋಟಿ, ಎಸ್‍ಎಫ್‌ಸಿ ಯೋಜನೆಯಡಿ ₹ 40 ಕೋಟಿ ಮಂಜೂರಾಗಿದೆ. ಅಮೃತ ಯೋಜನೆಯಡಿ ₹ 13 ಕೋಟಿ ಅನು ದಾನದಲ್ಲಿ ಉದ್ಯಾನ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳಲಾಗುತ್ತಿದೆ.

‘ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಳ್ಳಲು ₹ 7.5 ಲಕ್ಷ ನೆರವು ನೀಡಲಾ ಗುವುದು. ಜತೆಗೆ ಗುತ್ತಿಗೆ ಪದ್ಧತಿ ಕೈಬಿಟ್ಟು, ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾ ಗುವುದು. ಗೌರವ ಸಂಭಾವನೆಯನ್ನು ₹ 6 ಸಾವಿರದಿಂದ ₹ 15 ಸಾವಿರಕ್ಕೆ ಏರಿಸಲಾಗಿದೆ. ಈ ಹಣವನ್ನು ನೇರವಾಗಿ ಪೌರ ಕಾರ್ಮಿಕರ ಖಾತೆಗೆ ಜಮಾ ಮಾಡಲಾಗುತ್ತಿದೆ’ ಎಂದರು.

ನಗರಸಭೆ ಸದಸ್ಯ ಎಲ್.ಡಿ.ಚಂದಾ ವರಿ ಅವರು, ನಗರದ ಸಮಗ್ರ ಅಭಿ ವೃದ್ಧಿಗೆ ₹ 200 ಕೋಟಿ ವಿಶೇಷ ಅನು ದಾನ ನೀಡಬೇಕು ಎಂದರು.

ನಗರಸಭೆಯಿಂದ ಸಾರ್ವಜನಿಕರಿಗೆ 10 ಸಾವಿರ ಸಸಿಗಳು ಮತ್ತು ನಗರದ 700 ಅಂಗವಿಕಲರಿಗೆ ತಲಾ ₹ 4 ಸಾವಿರ ಹಾಗೂ 400 ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ತಲಾ ₹ 5 ಸಾವಿರ ಸಹಾಯಧನ ಚೆಕ್ ವಿತರಿಸಲಾಯಿತು.

ನಗರಸಭೆ ಅಧ್ಯಕ್ಷ ಪೀರಸಾಬ್ ಕೌತಾಳ, ಪೌರಾಯುಕ್ತ ಮನ್ಸೂರ್‌ ಅಲಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರ ಡಗಿ, ನಗರಸಭೆ ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಸಿಂಗಟಾಲಕೇರಿ ಇದ್ದರು.

*
ಗದಗ–ಬೆಟಗೇರಿ ಅವಳಿ ನಗರದಲ್ಲಿ ನಗರೋತ್ಥಾನದ ಮೊದಲ, ಎರಡನೇ ಹಂತದಲ್ಲಿ ₹ 70 ಕೋಟಿ ಹಾಗೂ 3ನೇ ಹಂತದಲ್ಲಿ ₹ 35 ಕೋಟಿ ಅನುದಾನ ನೀಡಲಾಗಿದೆ.
-ಈಶ್ವರ ಖಂಡ್ರೆ,
ಪೌರಾಡಳಿತ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT