ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ನಾಟಕವಲ್ಲ, ಸಾಮಾಜಿಕ ಮೌಲ್ಯ

ಗುಬ್ಬಿ ಕಂಪನಿಯ ‘ಶೆರೆ ಅಂಗಡಿ ಸಂಗವ್ವ’ ರಂಗ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ
Last Updated 24 ಜುಲೈ 2017, 9:30 IST
ಅಕ್ಷರ ಗಾತ್ರ

ಹೊಸಪೇಟೆ: ನವ ಮಾಧ್ಯಮಗಳ ಭರಾಟೆಯಲ್ಲಿ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಆದರೆ, ಅದು ಅರ್ಧ ಸತ್ಯ ಎಂಬುದನ್ನು ಗುಬ್ಬಿಯ ಬಿ.ಎಸ್‌.ಆರ್‌. ಡ್ರಾಮಾ ಕಂಪೆನಿ ಸಾಬೀತು ಪಡಿಸಿದೆ.

ನಗರದ ಹಂಪಿ ರಸ್ತೆಯ ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಬಗ್ಗುಲಲ್ಲಿ ಕಳೆದ ಒಂದೂವರೆ ವರ್ಷ ದಿಂದ ಗುಬ್ಬಿ ಡ್ರಾಮಾ ಕಂಪೆನಿ ಬೀಡು ಬಿಟ್ಟಿದ್ದು, ಸದಭಿರುಚಿಯ ನಾಟಕಗಳ ಮೂಲಕ ಜನರನ್ನು ರಂಜಿಸುವ ಕೆಲಸ ಮಾಡುತ್ತಿದೆ.

ಸಾಮಾಜಿಕ ಮೌಲ್ಯ, ಸಂದೇಶ ಹೊಂದಿರುವ ರಂಗ ಪ್ರಯೋಗಗಳ ಮೂಲಕ ಜನರನ್ನು ರಂಗಭೂಮಿಯತ್ತ ಸೆಳೆಯುತ್ತಿದೆ. ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಕುಳಿತುಕೊಂಡು ನೋಡುವ ನಾಟಕಗಳನ್ನೇ ಅದು ಪ್ರಸ್ತುತಪಡಿಸು ತ್ತಿರುವ ಕಾರಣ ಹೆಚ್ಚಿನ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ. ಈಗಿನ ಬಹುತೇಕ ನಾಟಕ ಕಂಪೆನಿಗಳು ಅಶ್ಲೀಲ ಮಾತು, ಚೇಷ್ಟೇ, ಇಬ್ಬಗೆ ಅರ್ಥ ಹೊಂದಿರುವ ರಂಗ ಪ್ರಯೋಗಗಳಿಗೆ ಆದ್ಯತೆ ಕೊಡುತ್ತಿವೆ.

ಹಣ ಗಳಿಸುವುದೇ ಮುಖ್ಯ ಉದ್ದೇಶವಾಗಿರುತ್ತದೆ. ಆದರೆ, ಅವುಗಳಿಗೆ ಅಪವಾದ ಎನ್ನುವಂತೆ ಗುಬ್ಬಿ ನಾಟಕ ಕಂಪೆನಿ ಕೆಲಸ ನಿರ್ವಹಿಸುತ್ತಿದೆ.

ಅದಕ್ಕೆ ತಾಜಾ ನಿದರ್ಶನ ಒಂದೂವರೆ ತಿಂಗಳು ಅದ್ಭುತವಾಗಿ ಓಡಿದ ‘ಶೆರೆ ಅಂಗಡಿ ಸಂಗವ್ವ’ ನಾಟಕ. ಈ ನಾಟಕ ಕಂಪೆನಿಯ ಮಾಲೀಕರಾಗಿರುವ ರಾಜಣ್ಣ ಜೇವರ್ಗಿ ರಚಿಸಿರುವ ಈ ಪ್ರಯೋಗವು ಮದ್ಯಪಾನದಿಂದ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದರ ಮೇಲೆ ಬೆಳಕು ಚೆಲ್ಲಿತ್ತು.

56 ವರ್ಷದ ಮಮತಾ ಗುಡೂರು ಸಂಗ ವ್ವನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ದ್ದರು. ಈ ರಂಗ ಪ್ರಯೋಗದ ಕುರಿತು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.‘ಗುಬ್ಬಿ ಕಂಪೆನಿಯು ತನ್ನ ನಾಟಕಗಳ ಮೂಲಕ ಸಮಾಜದಲ್ಲಿ ಜಾಗೃತಿ ಉಂಟು ಮಾಡುತ್ತಿದೆ. ಅದಕ್ಕೆ ಒಳ್ಳೆಯ ಉದಾಹರಣೆ ಶೆರೆ ಅಂಗಡಿ ಸಂಗವ್ವ ನಾಟಕ.

ಹಿರಿಯ ವಯಸ್ಸಿ ನಲ್ಲೂ ಮಮತಾ ಗುಡೂರು ಅದ್ಭುತ ವಾಗಿ ನಟಿಸಿದ್ದರು. ಇಂತಹ ಕಲಾ ಚೇತನ ಗಳಿಂದಲೇ ಈಗಲೂ ರಂಗ ಭೂಮಿ ಜೀವಂತವಾಗಿ ಉಳಿದಿದೆ ಎನ್ನುತ್ತಾರೆ’ ಮಂಜಮ್ಮ ಜೋಗತಿ.

‘ಮಮತಾ ಅವರ ಸಂಭಾಷಣೆ, ದೇಹಭಾಷೆ ಎಲ್ಲವೂ ಅದ್ಭುತವಾಗಿತ್ತು. ಎಲೆ ಮರೆಕಾಯಿಯಂತಿರುವ ಇಂತಹ ಪ್ರತಿಭೆಗಳನ್ನು ಗುರುತಿಸುವ ಕೆಲಸ ಸಮಾಜದಲ್ಲಿ ಆಗಬೇಕಿದೆ’ ಎಂದರು.

ವಾರದಿಂದ ‘ನನ್ನವರು ಯಾರೂ ಇಲ್ಲ’ ನಾಟಕ ಪ್ರದರ್ಶನ ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆ ಯಲ್ಲಿರುವ ‘ಬಾಡಿಗೆ ತಾಯಿ’ ವಿಷಯ ವು ಪ್ರಯೋಗದ ಕಥಾವಸ್ತು. ಹೀಗೆ ಸಾಮಾಜಿಕ ಸಂದೇಶ ಹೊಂದಿರುವು ದರ ಜತೆಗೇ ಪ್ರಚಲಿತ ವಿಷಯಗಳನ್ನು ಆಯ್ಕೆ ಮಾಡಿಕೊಂಡು ನಾಟಕ ಆಡ ಲಾಗುತ್ತಿದೆ.

ನಿತ್ಯ ಮಧ್ಯಾಹ್ನ 3.15 ಹಾಗೂ ಸಂಜೆ 6.15ಕ್ಕೆ ನಾಟಕ ಪ್ರದ ರ್ಶನ ಕಾಣುತ್ತಿವೆ. 2006ರಲ್ಲಿ ಸ್ಥಾಪನೆ ಗೊಂಡಿರುವ ಈ ನಾಟಕ ಕಂಪೆನಿಯಲ್ಲಿ ಒಟ್ಟು 30 ಜನ ಸದಸ್ಯರಿದ್ದಾರೆ. ನಾಟಕ ರಚನೆ, ನಟನೆ ಸೇರಿದಂತೆ ಎಲ್ಲವನ್ನೂ ಅವರೇ ಮಾಡುತ್ತಾರೆ. ರಾಜ್ಯದ ಹಲವೆಡೆ ಅನೇಕ ನಾಟಕಗಳನ್ನು ಪ್ರಸ್ತುತಪಡಿಸಿ ಮನೆ ಮಾತಾಗಿದೆ.

*
ನಮ್ಮ ಕಂಪನಿ ನಾಟಕಗಳಲ್ಲಿ ಸಾಮಾಜಿಕ ಸಂದೇಶವೇ ಪ್ರಧಾನವಾಗಿರುತ್ತದೆ. ಹಾಗಾಗಿ ಜನ ನಮ್ಮ ರಂಗ ಪ್ರಯೋಗಗಳನ್ನು ಇಷ್ಟ ಪಡುತ್ತಾರೆ.
–ರಾಘು, ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT